ಮತದಾನ ಹಿನ್ನೆಲೆ ಚುನಾವಣಾ ಕರ್ತವ್ಯಕ್ಕೆ ಸಾರಿಗೆ ನಿಯೋಜನೆ: ಜನರಿಗೆ ಸಂಕಷ್ಟ!

Ravi Talawar
WhatsApp Group Join Now
Telegram Group Join Now

ಬೆಂಗಳೂರು,27: ಮತದಾನ ದಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಹುತೇಕ ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಬಸ್ ವ್ಯವಸ್ಥೆಯಿಲ್ಲದ ಕಾರಣ ಮನೆಗಳಿಗೆ ತೆರಳು ಜನರು ಸಂಕಷ್ಟ ಎದುರಿಸುವಂತಾಗಿತ್ತು.

ಚುನಾವಣಾ ಕರ್ತವ್ಯಕ್ಕೆ ಬಸ್ ಗಳನ್ನು ನಿಯೋಜನೆಗೊಳಿಸಿದ್ದ ಹಿನ್ನೆಯಲ್ಲಿ ಲಭ್ಯವಿದ್ದ ಬಸ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಿಸಿಲ ತಾಪ ಒಂದೆಡೆಯಾದರೆ, ಬಸ್ ವ್ಯವಸ್ಥೆ ಇಲ್ಲದಿರುವುದು ಜನರಲ್ಲಿ ಮತದಾನ ಮಾಡುವ ಉತ್ಸಾಹವನ್ನು ಕುಗ್ಗಿಸಿತ್ತು.

ಇನ್ನು ಮೈಸೂರು ರಸ್ತೆಯಲ್ಲಿ ಕೆಂಗೇರಿ ಕ್ರಾಸಿಂಗ್‌ವರೆಗೆ ಇದ್ದ ವಾಹನ ದಟ್ಟಣೆ ವಾಹನ ಸವಾರರಿಗೆ 6ತಲೆನೋವಾಗಿ ಪರಿಣಮಿಸಿತ್ತು. ಸ್ಯಾಟಲೈಟ್‌ ಬಸ್ ನಿಲ್ದಾಣ ಮತ್ತು ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗಿದ್ದದ್ದು ಕಂಡು ಬಂದಿತ್ತು. ಜನರು ತಮ್ಮ ಊರುಗಳಿಗೆ ಮರಳಲು ಹತಾಶರಾಗಿ ಕಾದುಕುಳಿತಿರುವುದು ಕಂಡು ಬಂದಿತ್ತು.

ಬಸ್ ಗಳಲ್ಲಿ ಜನದಟ್ಟಣೆ ಇದ್ದ ಕಾರಣ ರೈಲಿನತ್ತ ಮುಖ ಮಾಡಿದರೂ, ಅಲ್ಲಿಯೂ ನೂಕುನುಗ್ಗಲು ಇದ್ದದ್ದು ಜನರಲ್ಲಿ ಮತ್ತಷ್ಟು ಬೇಸರ ತರಿಸಿತ್ತು. ಕೆಂಗೇರಿಯಲ್ಲಿ ಹಳಿ ದಾಟುತ್ತಿದ್ದ ನೂರಾರು ಪ್ರಯಾಣಿಕರು ಹೇಗಾದರೂ ರೈಲು ಹತ್ತಬೇಕೆಂದು ಪ್ರಯತ್ನ ನಡೆಸುತ್ತಿದ್ದರು.

ಮತದಾನ ದಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಹುತೇಕ ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಬಸ್ ವ್ಯವಸ್ಥೆಯಿಲ್ಲದ ಕಾರಣ ಮನೆಗಳಿಗೆ ತೆರಳು ಜನರು ಸಂಕಷ್ಟ ಎದುರಿಸುವಂತಾಗಿತ್ತು.

ಚುನಾವಣಾ ಕರ್ತವ್ಯಕ್ಕೆ ಬಸ್ ಗಳನ್ನು ನಿಯೋಜನೆಗೊಳಿಸಿದ್ದ ಹಿನ್ನೆಯಲ್ಲಿ ಲಭ್ಯವಿದ್ದ ಬಸ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಿಸಿಲ ತಾಪ ಒಂದೆಡೆಯಾದರೆ, ಬಸ್ ವ್ಯವಸ್ಥೆ ಇಲ್ಲದಿರುವುದು ಜನರಲ್ಲಿ ಮತದಾನ ಮಾಡುವ ಉತ್ಸಾಹವನ್ನು ಕುಗ್ಗಿಸಿತ್ತು.

ಇನ್ನು ಮೈಸೂರು ರಸ್ತೆಯಲ್ಲಿ ಕೆಂಗೇರಿ ಕ್ರಾಸಿಂಗ್‌ವರೆಗೆ ಇದ್ದ ವಾಹನ ದಟ್ಟಣೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ಸ್ಯಾಟಲೈಟ್‌ ಬಸ್ ನಿಲ್ದಾಣ ಮತ್ತು ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗಿದ್ದದ್ದು ಕಂಡು ಬಂದಿತ್ತು. ಜನರು ತಮ್ಮ ಊರುಗಳಿಗೆ ಮರಳಲು ಹತಾಶರಾಗಿ ಕಾದುಕುಳಿತಿರುವುದು ಕಂಡು ಬಂದಿತ್ತು.

ಬಸ್ ಗಳಲ್ಲಿ ಜನದಟ್ಟಣೆ ಇದ್ದ ಕಾರಣ ರೈಲಿನತ್ತ ಮುಖ ಮಾಡಿದರೂ, ಅಲ್ಲಿಯೂ ನೂಕುನುಗ್ಗಲು ಇದ್ದದ್ದು ಜನರಲ್ಲಿ ಮತ್ತಷ್ಟು ಬೇಸರ ತರಿಸಿತ್ತು. ಕೆಂಗೇರಿಯಲ್ಲಿ ಹಳಿ ದಾಟುತ್ತಿದ್ದ ನೂರಾರು ಪ್ರಯಾಣಿಕರು ಹೇಗಾದರೂ ರೈಲು ಹತ್ತಬೇಕೆಂದು ಪ್ರಯತ್ನ ನಡೆಸುತ್ತಿದ್ದರು.

WhatsApp Group Join Now
Telegram Group Join Now
Share This Article