ವೋಟ್ ಜಿಹಾದ್ ಬೇಕೋ ಅಥವಾ ರಾಮರಾಜ್ಯ ಬೇಕೋ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Ravi Talawar
WhatsApp Group Join Now
Telegram Group Join Now

ಖರ್ಗೋನ್: ವೋಟ್ ಜಿಹಾದ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ಮೋದಿ ವೋಟ್ ಜಿಹಾದ್ ಬೇಕೋ ಅಥವಾ ರಾಮರಾಜ್ಯ ಬೇಕೋ ಎಂದು ಜನರು ನಿರ್ಧರಿಸಬೇಕಿದೆ ಎಂದಿದ್ದಾರೆ.

ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಭಾರತದ ಇತಿಹಾಸ ಇದೀಗ ಮಹತ್ದದ ತಿರುವಿನಲ್ಲಿ ನಿಂತಿದೆ. ಈ ಸಂದರ್ಭದಲ್ಲಿ ವೋಟ್ ಜಿಹಾದ್ ಬೇಕೋ ಅಥವಾ ರಾಮರಾದ್ಯ ಬೇಕೋ ಎಂದು ನೀವೇ ನಿರ್ಧರಿಸಬೇಕಿದೆ ಎಂದು ಮತದಾರರನ್ನು ಉದ್ದೇಳಿಸಿ ಹೇಳಿದರು.

ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ಭಾರತದ ವಿರುದ್ಧ ಜಿಹಾದ್ ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಸಹ ಮೋದಿ ವಿರುದ್ಧ ವೋಟ್ ಜಿಹಾದ್ ಮಾಡುವಂತೆ ಘೋಷಣೆ ಮಾಡಿದೆ. ಒಂದು ನಿರ್ದಿಷ್ಟ ಧರ್ಮದ ಜನರು ಮೋದಿ ವಿರುದ್ಧ ಮತ ಚಲಾಯಿಸಬೇಕು ಎಂಬುದು ಇದರರ್ಥ . ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಕಲ್ಪಿಸಿಕೊಳ್ಳಿ. ನೀವು ವೋಟ್ ಜಿಹಾದ್ ಅನ್ನು ಒಪ್ಪುತ್ತೀರಾ? ಪ್ರಜಾಪ್ರಭುತ್ವದಲ್ಲಿ ಹೀಗೆ ಮಾಡುವುದು ಸರಿಯೇ? ಈ ರೀತಿಯ ಜಿಹಾದ್ ಗೆ ನಮ್ಮ ಸಂವಿಧಾನ ಅವಕಾಶ ಮಾಡಿ ಕೊಡುತ್ತದೆಯೇ ಎಂದು ಪ್ರಧಾನಿ ಪ್ರಶ್ನೆಗಳ ಸುರಿಮಳೆಗೈದರು.

ಹಿರಿಯ ಕಾಂಗ್ರೆಸ್ ಮುಖಂಡ, ಯುಪಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಅವರ ಸಂಬಂಧಿಕರಾದ ಸಮಾಜವಾದಿ ಪಕ್ಷದ ಮುಖಂಡ ಮರಿಯಾ ಆಲಂ ಅವರು, ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಮುಸ್ಲಿಮರು ವೋಟ್ ಜಿಹಾದ್ ಮಾಡಬೇಕು ಎಂದು ಕರೆ ನೀಡಿದ್ದರು. ಇದು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಕಣ್ಣು ಕೆಂಪಾಗಿಸಿತ್ತು. ಇಷ್ಟು ಮಾತ್ರವಲ್ಲದೆ ಇದೇ ವಿಚಾರವನ್ನು ಇಟ್ಟುಕೊಂಡು ಪ್ರಧಾನ ಮೋದಿ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.

ಮಹಾರಾಷ್ಟ್ರದ ಬೀಡ್ ನಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲೂ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ಹರಿಹಾಯ್ದರು. ಈ ವೇಳೆ ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ವಿಚಾರವನ್ನೂ ಪ್ರಸ್ತಾಪಿಸಿದಪರು. ಜೊತೆಗೆ ರಾಷ್ಟ್ರೀಯ ಜನತಾ ದಳ(RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನೂ ಮೀಸಲಾತ ವಿಚಾರವಾಗಿ ತರಾಟೆಗೆ ತೆಗೆದುಕೊಂಡರು.

ಇತರೆ ಹಿಂದುಳಿತ ವರ್ಗ(OBC) ಗೆ ಶೇಕಡಾ 27ರಷ್ಟು ಮೀಸಲಾತಿ ಇದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಾತ್ರೋರಾತ್ರಿ ಎಲ್ಲ ಮುಸ್ಲಿಮನ್ನೂ ಒಬಿಸಿ ವರ್ಗ ಎಂದು ಘೋಷಿಸಿದೆ. ಡಾ ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ, ಸಂಸತ್ತು ಒಬಿಸಿಗೆ ಶೇ.27 ಮೀಸಲಾತಿ ನೀಡಿದೆ. ಇದೀಗ ಮುಸ್ಲಿಮರನ್ನು ಒಬಿಸಿ ವರ್ಗಕ್ಕೆ ಸೇರಿಸುವ ಮೂಲಕ ಕಾಂಗ್ರೆಸಿಗರು ರಾತ್ರೋರಾತ್ರಿ ಒಬಿಸಿಗೆ ಇರುವ ಸೌಲಭ್ಯವನ್ನು ಲೂಟಿ ಮಾಡಿದರು . ಈಗ ದೇಶಾದ್ಯಂತ ಅದೇ ಕೆಲಸವನ್ನು ಮಾಡಲು ಬಯಸುತ್ತಾರೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article