ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಪ್ರಮಾಣ ವಚನ!

Ravi Talawar
WhatsApp Group Join Now
Telegram Group Join Now

ಕ್ರೆಮ್ಲಿನ್ 08: ಮುಂದಿನ 6 ವರ್ಷಗಳ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ಕ್ರೆಮ್ಲಿನ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅವರು ದಾಖಲೆಯ ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಪುಟಿನ್ ಅವರು ಮುಂದಿನ ಆರು ವರ್ಷಗಳ ಹೊಸ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದರು ಎಂದು ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷ ವ್ಯಾಲೆರಿ ಜೋರ್ಕಿನ್ ಘೋಷಿಸಿರುವುದಾಗಿ TASS ವರದಿ ಮಾಡಿದೆ.

ಪುಟಿನ್ ಪ್ರಮಾಣವಚನ ಸ್ವೀಕರಿಸಿದ ನಂತರ, ಜೋರ್ಕಿನ್ ಅವರು ಪುಟಿನ್ ಅವರಿಗೆ ಅಧ್ಯಕ್ಷೀಯ ಅಧಿಕಾರದ ಚಿಹ್ನೆಯನ್ನು ಹಸ್ತಾಂತರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ರಾಜ್ಯ ಮುಖ್ಯಸ್ಥರು ಭಾಷಣ ಮಾಡಿದರು. 1999ರಿಂದ ವ್ಲಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮತ್ತೆ ರಷ್ಯಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ರಷ್ಯಾದ ಮಾಜಿ ಅಧ್ಯಕ್ಷ ಸ್ಟಾಲಿನ್ ಬಳಿಕದಲ್ಲಿ ಪುಟಿನ್ ದೇಶದ ದೀರ್ಘಾವಧಿ ಅಧ್ಯಕ್ಷರೆನಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article