ಅರುಣಾಚಲ ಪ್ರದೇಶದಲ್ಲಿ 3.1 ತೀವ್ರತೆ ಭೂಕಂಪ!

Ravi Talawar
WhatsApp Group Join Now
Telegram Group Join Now

ಅರುಣಾಚಲ ಪ್ರದೇಶದಲ್ಲಿ ಮೇ 8 ಬೆಳಿಗ್ಗೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಮಾಹಿತಿಯನ್ನು ಹಂಚಿಕೊಂಡಿದೆ.

ಸುಬನ್ಸಿರಿ ಜಿಲ್ಲೆಯಲ್ಲಿ ಬೆಳಗ್ಗೆ 4.55 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಈ ಸಮಯದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಮಲಗಿದ್ದರು. ಭೂಮಿಯು ನಡುಗಿದಾಗ ಜನರು ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಕೆಲವರು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಅವಿತುಕೊಂಡಿದ್ದಾರೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಈ ಹಿಂದೆ ಮಾರ್ಚ್ 21ರ ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದವು. 3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಎರಡು ಗಂಟೆಗಳ ನಂತರ ಬೆಳಿಗ್ಗೆ 03:40 ಕ್ಕೆ, ಎರಡನೇ ಭೂಕಂಪನ ವರದಿಯಾಗಿತ್ತು. ಈ ಭೂಕಂಪದ ತೀವ್ರತೆ 3.4 ಮತ್ತು ಅದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್‌ನಲ್ಲಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದರು. ಇದರಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ತಕ್ಷಣದ ವರದಿಯಾಗಿಲ್ಲ.

WhatsApp Group Join Now
Telegram Group Join Now
Share This Article