ಅಂಬಾನಿ, ಅಡಾನಿಯನ್ನು ಬಯ್ಯೋದು ನಿಲ್ಲಿಸಿ ಎಷ್ಟು ಕಪ್ಪುಹಣ ತಗೊಂಡ್ರಿ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

Ravi Talawar
WhatsApp Group Join Now
Telegram Group Join Now

ಹೈದರಾಬಾದ್, ಮೇ 8: ಐದು ವರ್ಷದಿಂದ ಅಂಬಾನಿ ಮತ್ತು ಅಡಾನಿಯನ್ನು ಬಯ್ಯುತ್ತಲೇ ಬಂದಿದ್ದ ಕಾಂಗ್ರೆಸ್ ಶಹಜಾದೆ (ರಾಹುಲ್ ಗಾಂಧಿ) ರಾತ್ರೋರಾತ್ರಿ ಬಯ್ಯೋದನ್ನೇ ನಿಲ್ಲಿಸಿದ್ದಾರೆ. ಅವರಿಂದ ಎಷ್ಟು ಕಪ್ಪು ಹಣ ಇವರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.

ತೆಲಂಗಾಣದ ರಾಜನ್ನ ಸಿರಿಸಿಲ್ಲ  ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ, ಅಡಾನಿ ಜಪ ಮಾಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಬಳುಸತ್ತಿದ್ದಿ ಅಂಬಾನಿ, ಅದಾನಿ ಅಸ್ತ್ರವನ್ನು ಅವರಿಗೇ ತಿರುಗಿಸಿದ್ದಾರೆ ನರೇಂದ್ರ ಮೋದಿ.

“ಕಾಂಗ್ರೆಸ್​ನ ಶಹಜಾದೆ ಕಳೆದ 5 ವರ್ಷದಿಂದ ಬೆಳಗ್ಗೆಯಾದರೆ ಜಪ ಮಾಡುತ್ತಿದ್ದ ರಫೇಲ್ ವಿಚಾರ ಬಿದ್ದುಹೋಯಿತು…. ಐವರು ಉದ್ಯಮಿಗಳು, ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಐದು ವರ್ಷದಿಂದ ಒಂದೇ ಜಪ ಮಾಡುತ್ತಿದ್ದರು. ಬಳಿಕ ಅಂಬಾನಿ ಅಡಾನಿ, ಅಂಬಾನಿ ಅಡಾಣಿ, ಅಂಬಾನಿ ಅಡಾಣಿ ಅಂತ ಹೇಳೋಕೆ ಶುರು ಮಾಡಿದ್ರು…

“ಚುನಾವಣೆ ಘೋಷಣೆ ಆದ ಬಳಿಕ ಅಂಬಾನಿ ಅಡಾಣಿ ಅವರನ್ನು ಬಯ್ಯೋದು ನಿಲ್ಲಿಸಿ ಬಿಟ್ರು. ತೆಲಂಗಾಣದ ಈ ನೆಲದಿಂದ ಒಂದು ಪ್ರಶ್ನೆ ಕೇಳುತ್ತೇನೆ. ಅಂಬಾನಿ, ಅಡಾಣಿಯಿಂದ ನೀವು ಎಷ್ಟು ಹಣ ಪಡೆದಿದ್ದೀರಿ ಹೇಳಿ? ರಾತ್ರೋರಾತ್ರಿ ಇವರು ಅಂಬಾನಿ ಅಡಾಣಿ ಬಯ್ಯೋದನ್ನು ನಿಲ್ಲಿಸಿದ್ದಾರೆಂದರೆ ಏನೋ ಇರಬೇಕು. ಯಾವುದೋ ಕಳ್ಳ ಮಾಲು ಟೆಂಪೋದೊಳಗೆ ತುಂಬಿ ಬಂದಿರಬೇಕು” ಎಂದು ನರೇಂದ್ರ ಮೋದಿ ಶಂಕಿಸಿದ್ದಾರೆ.

ಪ್ರಧಾನಿ ಮೋದಿ ಅವರು ರಾಜನ್ನ ಸಿರಿಸಿಲ್ಲ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ವೇಮುಲವಾಡದ ರಾಜನ್ನ ದೇವಸ್ಥಾನದಲ್ಲಿ ನಂದಿಯ ದರ್ಶನ ಮಾಡಿದರು. ಹೈದರಾಬಾದ್​ನಿಂದ ಇಲ್ಲಿಗೆ ಬಂದ ಮೋದಿ, ಬಳಿಕ ರಾಜಂಪೇಟಾಗೆ ತೆರಳಲಿದ್ದಾರೆ.

ಬಳಿಕ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆ ಮತ್ತು ವಿಜಯವಾಡ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಂದು ಬುಧವಾರ ತೆಲಂಗಾಣದಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article