ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಿದ ನಾಯಕ ಡಾ.ಅಂಬೇಡ್ಕರ್: ರಮೇಶ ರಾಯಪ್ಪಗೋಳ

Ravi Talawar
WhatsApp Group Join Now
Telegram Group Join Now
ನೇಸರಗಿ, ಏಪ್ರಿಲ್ 15: ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಜೈ ಭೀಮ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಅವರು ಹೇಳಿದರು.
ತಾಲೂಕಿನ ನೇಸರಗಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ ಎಂದು ನುಡಿದರು. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.
ಈ ಸಂಧರ್ಭದಲ್ಲಿ ರುದ್ರಪ್ಪ ರಾಯಪ್ಪಗೋಳ, ಶ್ರೀನಿವಾಸ ಹಮ್ಮನ್ನವರ, ಯಲ್ಲಪ್ಪ ಹಮ್ಮನ್ನವರ, ರಾಘು ಮದೇನ್ನವರ, ಈಶ್ವರ ಮಾಳಗಿ, ವಿನೋದ ರಾಯಪ್ಪಗೋಳ, ಮನೋಜ ಮಾಳಗಿ, ವಿನಾಯಕ ರಾಯಪ್ಪಗೋಳ, ಮಂಜುನಾಥ ರಾಯಪ್ಪಗೋಳ, ಗೌತಮ್ ರಾಯಪ್ಪಗೋಳ, ಪ್ರಕಾಶ ಕೆಳಗಿನಮನಿ ಇದ್ದರು.
WhatsApp Group Join Now
Telegram Group Join Now
Share This Article