ರಾಯಣ್ಣ ಪ್ರತಿಮೆ ಹಾನಿ ಖಂಡಿಸಿ ಕಿತ್ತೂರಿನಲ್ಲಿ ರಾಯಣ್ಣ ಯುವ ಸಂಘಟನೆ ಪ್ರತಿಭಟನೆ

Ravi Talawar
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು,08: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಕನಹಳ್ಳಿ ಗ್ರಾಮದಲ್ಲಿ ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಹಾನಿಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಿತ್ತೂರು ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ  ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸನ್ನವರ ಆಗ್ರಹ

ಘಟನೆ ವಿವರ: : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬಿಕನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಕೈ, ಕೈಯಲ್ಲಿರುವ ಖಡ್ಗ ಹಾಗೂ ಕಾಲು ಸೇರಿದಂತೆ ವಿವಿಧ ಭಾಗದಲ್ಲಿ ಹಾನಿಗೊಳಿಸಿ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವ ಘಟನೆ ಜರುಗಿದೆ.

ಘಟನೆಯ ಕುರಿತು ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸನ್ನವರ ಮಾತನಾಡಿ ಸಂಗೊಳ್ಳಿ ರಾಯಣ್ಣ ಸರ್ವ ಸಮುದಾಯದ ನಾಯಕ ಮತ್ತು ಸ್ವತಂತ್ರಕ್ಕಾಗಿ ಕಿತ್ತೂರು ರಾಣಿ ಚನ್ನಮ್ಮನ ಜೊತೆಗೆ ಹೋರಾಡಿದ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ದೂರ ದೃಷ್ಟಿಯಿಂದ ಅವರ ಪ್ರತಿಮೆಯನ್ನು ರಾಜ್ಯದಾದ್ಯಂತ ಎಲ್ಲ ಸಮುದಾಯಗಳ ಸಹಕಾರದಿಂದ ಯುವಕರು ಒಂದು ವರ್ಷದ ಹಿಂದೆ ಬಿಕನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಯಾರೋ ಕಿಡಿಗೇರಿಗಳು ತಡರಾತ್ರಿ ಕೈ, ಕೈಯಲ್ಲಿರುವ ಖಡ್ಗ ಹಾಗೂ ಕಾಲುಗಳ ಭಾಗಕ್ಕೆ ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನ ಸರ್ಕಾರ ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರತಿಮೆ ಮುಂದೆ ನಮ್ಮ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ರಾಜ್ಯದ ಎಲ್ಲ ರಾಯಣ್ಣನ ಅಭಿಮಾನಿಗಳು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿ. ದುಷ್ಕರ್ಮಿಗಳನ್ನ ಕೂಡಲೆ ಬಂಧಿಸಬೇಕು ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸನ್ನವರ, ದಯಾನಂದ ವರಗನ್ನವರ, ರಮೇಶ ವರಗನ್ನವರ, ರುದ್ರಪ್ಪ ವರಗನ್ನವರ, ಬಸವರಾಜ ಅಂಗಡಿ, ಮಡಿವಾಳಪ್ಪ ವರಗನ್ನವರ, ಅಭಿಷೇಕ ವರಗನ್ನವರ, ಪ್ರಕಾಶ ದರೆನ್ನವರ, ಎಲ್ಲಪ್ಪ ವರಗನ್ನವರ, ಅಶೋಕ ವರಗನ್ನವರ, ಮಡಿವಾಳೆಪ್ಪ ದರೆನ್ನವರ ಸೇರಿದಂತೆ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

WhatsApp Group Join Now
Telegram Group Join Now
Share This Article