ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಉಮೇದುವಾರಿಕೆ ಅಸಿಂಧುಗೊಳಿಸುವಂತೆ ಕರ್ನಾಟಕ ರಾಷ್ಟ ಸಮಿತಿ ಪಕ್ಷ ಆಗ್ರಹ

Ravi Talawar
WhatsApp Group Join Now
Telegram Group Join Now

ವಿಜಯಪುರ,08 : ಕಾಂಗ್ರೆಸ್ ಮತ್ತು ಬಿಜೆಪಿ ಉಮೇದುದಾರರ ಉಮೆದುದಾರಿಕೆ ರದ್ದುಪಡಿಸುವಂತೆ ಕರ್ನಾಟಕ ರಾಷ್ಟ ಸಮಿತಿ ಪಕ್ಷದ ವಿಜಯಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾದ ಗಣಪತಿ ಲಾಲಾಸಿಂಗ್ ರಾಠೋಡ ಆಗ್ರಹಪಡಿಸಿದ್ದಾರೆ.

ದಿನಾಂಕ :೦೭-೦೫-೨೦೨೪ ರಂದು ವಿಜಯಪುರ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ದಿನದಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ತಮ್ಮ ಪಕ್ಷದ ಚಿಹ್ನೆ ಮತ್ತು ಅವರ ಭಾವಚಿತ್ರ ಇರುವ ಕರಪತ್ರಗಳನ್ನು ಲಕ್ಷಗಟ್ಟಲೆ ಮುದ್ರಿಸಿ ಪ್ರತಿ  ಮತದಾರರ ಕೈಯಲ್ಲಿ ಕೊಟ್ಟು ಒತ್ತಾಯ ಪೂರ್ವಕವಾಗಿ ಮತದಾರರು ಮತಗಟ್ಟೆಗೆ ತರುವಂತೆ ಮಾಡಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಬಲವಂತ ಪಡಿಸಲಾಗಿದೆ. ಮತಗಟ್ಟೆಯಿಂದ ನೂರು ಮೀಟರ್ ಒಳಗಡೆ ಯಾವುದೇ ರೀತಿಯ ಪಕ್ಷದ ಪ್ರಚಾರ ಮಾಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

ಇದು ಕೇವಲ ನಾಲ್ಕು ಐದು ಹಳ್ಳಿಗಳಲ್ಲಿ ಆಗಿಲ್ಲ. ಇಡಿ ಜಿಲ್ಲೆಯಲ್ಲಿರುವ ೨೬೦೦ಕ್ಕೂ ಹೆಚ್ಚು ಮತಗಟ್ಟೆಗಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮತದಾರರ ಮೇಲೆ ಒತ್ತಡ ಮತ್ತು ಬೆದರಿಕೆ ಒಡ್ದುವ ತಂತ್ರದ ಬಾಗವಾಗಿ ಕರಪತ್ರಗಳನ್ನು ಹಂಚಿವೆ ಏನು ತಿಳಿಯದ ಹಳ್ಳಿಯ ಮತದಾರರು ಅದೇ ಕರ ಪತ್ರಗಳನ್ನು ತೆಗೆದುಕೊಂಡು ಮತಗಟ್ಟೆಗೆ ಬಂದಿರುತ್ತಾರೆ ಮತ್ತು ತಮ್ಮ ಕೈಯಲ್ಲಿರುವ ಕರಪತ್ರದ ಚಿಹ್ನೆಗೆ ಮತ ಹಾಕುವಂತೆ ಮಾಡಿರುತ್ತಾರೆ. ಇದು ನೇರವಾಗಿ ಮತದಾರರ ಮೇಲೆ ಪರಿಣಾಮ ಬೀರಿದೆ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

ಕಾಂಗ್ರೆಸ್  ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಉದ್ದೇಶಪೂರ್ವಕವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ/ ಧಿಕ್ಕರಿಸಿ ಮತದಾರರನ್ನು ಬಲವಂತವಾಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯಿಸಿರುತ್ತಾರೆ. ಈ ಕುರಿತ್ತು ಫೇಸ್ ಬುಕ್ ಲೈವ್ ಕೂಡ ಮಾಡಿರುತ್ತೇವೆ. ಈ ಕುರಿತು ವಿಚಾರಣೆಗೆ ಕರೆದರೆ ವಿಡಿಯೋ ಸಾಕ್ಷಿ ಒದಗಿಸಲಾಗುವುದು. ಆದ್ದರಿಂದಾಗಿ ಈ ಇಬ್ಬರು ಉಮೇದುದಾರರ ನಾಮಪತ್ರಗಳನ್ನು ಅಸಿಂಧುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾದ ಗಣಪತಿ ಲಾಲಾಸಿಂಗ್ ರಾಠೋಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂಧ ಯಡಹಳ್ಳಿ, ರಾಕೇಶ ಇಂಗಳಗಿ, ಪ್ರವೀಣ ಕನಸೆ, ಕಾಂತುಗೌಡ ಬಿರಾದಾರ, ಸುರೇಶ ನಿಡೋಣಿ, ದುರ್ಗಪ್ಪ ಬೂದಿಹಾಳ ಇದ್ದರು.

WhatsApp Group Join Now
Telegram Group Join Now
Share This Article