ರೈಲು ಕಾಮಗಾರಿ ಹಿನ್ನೆಲೆ ಹುಬ್ಬಳ್ಳಿ – ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ

Ravi Talawar
WhatsApp Group Join Now
Telegram Group Join Now

ಹುಬ್ಬಳ್ಳಿ, ಏಪ್ರಿಲ್ 12 : ದಾವಣಗೆರೆ ಸಮೀಪ ರೈಲು ಕಾಮಗಾರಿ ಹಿನ್ನೆಲೆ ಪ್ರಮುಖ ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದೆ. ವಿಜಯಪುರ ಮಂಗಳೂರು, ಮೈಸೂರು ಪಂಢರಾಪುರ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಣಿಚೆನ್ನಮ್ಮ ಸೇರಿ ವಿವಿಧ ರೈಲುಗಳು ತಡವಾಗಿ ಸಂಚರಿಸಲಿವೆ. ಅವುಗಳ ವಿವರ ಇಂತಿದೆ.

ಮಂಗಳೂರು – ವಿಜಯಪುರ, ಮೈಸೂರು ಪಂಢರಾಪುರ ಎಕ್ಸ್‌ಪ್ರೆಸ್‌ ಸೇರಿ ಹುಬ್ಬಳ್ಳಿ ಮಾರ್ಗದ ಪ್ರಮುಖ 3 ರೈಲುಗಳ ರೈಲುಗಳ ಮಾರ್ಗ ಬದಲಾವಣೆಯಾಗಿದ್ದು, 2 ರೈಲು ರದ್ದಾಗಿದೆ. 10 ರೈಲುಗಳು ತಡವಾಗಿ ಸಂಚಾರ ಮಾಡಲಿವೆ.

ಏಪ್ರಿಲ್‌ 12 ರಂದು ಮೈಸೂರಿನಿಂದ ಪಂಢರಾಪುರಕ್ಕೆ ತೆರಳುವ ರೈಲು (ರೈಲು ಗಾಡಿ ಸಂಖ್ಯೆ 16535) ಹಾಗೂ ಮಂಗಳೂರಿನಿಂದ ವಿಜಯಪುರಕ್ಕೆ ತೆರಳುವ ರೈಲು (ರೈಲು ಗಾಡಿ ಸಂಖ್ಯೆ 07378 ) ಚಿಕ್ಕಜಾಜೂರು, ರಾಯದುರ್ಗ, ಗದಗ ಮಾರ್ಗದಲ್ಲಿ ಸಂಚರಿಸಲಿದೆ. ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ, ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ಪ್ರಯಾಣಿಕರು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

06245 ಹರಿಹರ ಹೊಸಪೇಟೆ ಡೆಮೊ ರೈಲು ಕೂಡ ದಾವಣಗೆರೆ ನಿಲ್ದಾಣಕ್ಕೆ ಆಗಮಿಸುವುದಿಲ್ಲ. ಬದಲಾವಣೆ ಹರಿಹರದಿಂದ ನೇರವಾಗಿ ತೆಲಗಿ, ಹರಪನಹಳ್ಳಿ ಕಡೆ ತೆರಳಲಿದೆ.

ಯಾವ ರೈಲುಗಳು ರದ್ದು? :

  • ಏಪ್ರಿಲ್‌ 13 ರಂದು ರೈಲು ಸಂಖ್ಯೆ 16214 ಹುಬ್ಬಳ್ಳಿ – ಅರಸಿಕೆರೆ ಎಕ್ಸ್‌ಪ್ರೆಸ್‌, ಏಪ್ರಿಲ್‌ 14 ರಂದು ರೈಲು ಗಾಡಿ ಸಂಖ್ಯೆ 16213 ಅರಸೀಕೆರೆ- ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ರದ್ದುಗೊಳಿಸಲಾಗಿದೆ.
  • ಏಪ್ರಿಲ್‌ 12 ಕ್ಕೆ ವಿವಿಧ ರೈಲುಗಳು ತಡವಾಗಿ ಸಂಚಾರ: ಕೆಎಸ್‌ಆರ್‌ ಬೆಂಗಳೂರು – ಬೆಳಗಾವಿ ಸೂಪರ್‌ ಪಾಸ್ಟ್‌ರೈಲು ಮಾರ್ಗದಲ್ಲಿ 110 ನಿಮಿಷಗಳು ತಡವಾಗಿ ಸಂಚರಿಸಲಿದೆ.
  • ಯಶವಂತಪುರ-ವಿಜಯಪುರ, ಮೈಸೂರು-ಬೆಳಗಾವಿ, ಮೈಸೂರು-ಹಜರತ್ ನಿಜಾಮುದ್ದೀನ್ , ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿಚೆನ್ನಮ್ಮ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಹುಬ್ಬಳ್ಳಿ-ಡಾ. ಚೆನ್ನೈ ಸೆಂಟ್ರಲ್ ರೈಲು, ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್‌, ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಕೂಡ 30 ರಿಂದ 90 ನಿಮಿಷದವರೆಗೂ ತಡವಾಗಿ ಸಂಚರಿಸಲಿವೆ.

ರೈಲುಗಳ ಮಾರ್ಗ ಬದಲಾವಣೆ : ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳು ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.

  • ಏಪ್ರಿಲ್ 22 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12890 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಟಾಟಾನಗರ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
  • ಏಪ್ರಿಲ್ 16, 18 ಮತ್ತು 23 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12836 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಹಟಿಯಾ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳು ನಿಯಂತ್ರಣ : ಏಪ್ರಿಲ್ 10 ರಿಂದ 16 ರವರೆಗೆ ಜಲಗಾಂವ್-ಮನ್ಮಾಡ್ ಭಾಗದ ನಡುವಿನ 3ನೇ ಮಾರ್ಗಕ್ಕೆ ಸಂಬಂಧಿಸಿದಂತೆ ಚಾಲಿಸಗಾಂವ್ ಯಾರ್ಡ್ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.

  • ಏಪ್ರಿಲ್ 15 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
  • ಏಪ್ರಿಲ್ 15 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 145 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
WhatsApp Group Join Now
Telegram Group Join Now
Share This Article