ರಾಮೇಶ್ವರಂ ಕೆಫ್ ಬಾಂಬ್ ಬ್ಲಾಸ್ಟ್ ಪ್ರಕರಣ : ಓರ್ವ ಪ್ರಮುಖ ಸಂಚುಕೋರನ ಬಂಧನ

Hasiru Kranti
WhatsApp Group Join Now
Telegram Group Join Now

ಬೆಂಗಳೂರು, ಮಾ., ೨೮ :- ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಓರ್ವ ಪ್ರಮುಖ ಸಂಚುಕೋರನನ್ನು ಬಂಧಿಸುವಲ್ಲಿ ಎನ್‌ಐಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಎನ್‌ಐಎ ಟ್ವೀಟ್ ಮಾಡಿ, ಪ್ರಮುಖ ಆರೋಪಿಯ ಬಂಧನದ ಬಗ್ಗೆ ಖಚಿತಪಡಿಸಿದೆ. ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಹಾಗೂ ಮುಸ್ಸಾವಿರ್ ಶಜೀಬ್‌ನ ಸಹ ಸಂಚುಕೋರ ಮುಜಾಮುಲ್ ಶರೀಫ್ ಎನ್ನುವಾತನನ್ನು ಇಂದು (ಮಾರ್ಚ್ ೨೮) ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ. ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಮತ್ತು ಆತನ ಸಹಚರ ಅಬ್ದುಲ್ ಮಥೀನ್ ತಾಹಾ ಇನ್ನೂ ಪತ್ತೆ ಆಗಬೇಕಿದೆ.

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಎನ್‌ಐಎ ತನ್ನ ತನಿಕೆಯಲ್ಲಿ ಮಹತ್ವದ ಹಂತ ಮುಟ್ಟಿದೆ. ಕರ್ನಾಟಕದ ೧೨, ತಮಿಳುನಾಡಿನ ೫ ಮತ್ತು ಉತ್ತರ ಪ್ರದೇಶದ ೧ ಸೇರಿದಂತೆ ಒಟ್ಟು ೧೮ ಸ್ಥಳಗಳಲ್ಲಿ ಎನ್‌ಐಎ ತಂಡಗಳು ದಾಳಿ ಮಾಡಿದ ನಂತರ ಬುಧವಾರ ಮುಜಾಮಿಲ್ ಶರೀಫ್‌ನನ್ನು ಬಂಧಿಸಲಾಗಿದೆ ಎಂದು ಎನ್‌ಐ ಟ್ವೀಟ್‌ನಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ಸಪರೇಟರ್ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಇನ್ನು ಬಂಧನದ ವೇಳೆ ಈತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.

ಎನ್‌ಐಎ ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿದೆಡೆ ಬಳಿಕ ಪ್ರಮುಖ ಸಂಚುಕೋರ ಆಗಿದ್ದ ಆರೋಪಿ ಮುಜಾಮಿಲ್ ಶರೀಫ್‌ನನ್ನು ಬಂಧಿಸಿದ್ದಾರೆ. ಮುಜಾಮಿಲ್ ಶರೀಫ್ ಎನ್ನುವಾತ ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿಯಾದ ಮುಸಾವೀರ್ ಹುಸೇನ್‌ಗೆ ತುಂಬಾ ಆಪ್ತನಾಗಿದ್ದ. ಇದಕ್ಕೆ ಸಹಾಯ ಮಾಡಿದ್ದ ಇನ್ನೊಬ್ಬನನ್ನು ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಲಾಗಿದೆ. ಇನ್ನೂ ತಲೆಮರೆಸಿಕೊಂಡಿರುವ ಈ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ.

ಇನ್ನು ಪ್ರಮುಖವಾಗಿ ಮುಸಾವೀರ್ ಹುಸೇನ್ ಬಾಂಬ್ ಇಟ್ಟ ಉಗ್ರ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ತನಿಖೆ ವೇಳೆ ಸಂಚು ರೂಪಿಸಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್ ನನ್ನು ಬಂಧನ ಮಾಡಿದ್ದಾರೆ. ಮುಸಾವೀರ್, ಅಬ್ದುಲ್ ಮತೀನ್ ಸೇರಿ ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದರು. ಸದ್ಯ ಮುಸಾವೀರ್ ಹುಸೇನ್, ಮತೀನ್ ತಾಹಾ ತಲೆಮರೆಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article