ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕುಸಿತ: 30ಮನೆಗಳು ಹಾನಿ

Ravi Talawar
WhatsApp Group Join Now
Telegram Group Join Now

ಶ್ರೀನಗರ,27:  ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಬರೊಬ್ಬರಿ 1 ಕಿ.ಮೀ ವರೆಗೂ ರಸ್ತೆಗಳಲ್ಲಿನ ಭೂಮಿ ಮುಳುಗಡೆಯಾಗಿ 30ಮನೆಗಳು ಹಾನಿಗೊಳಗಾಗಿದೆ.

ಗುರುವಾರ ಸಂಜೆಯಿಂದ ಜಮ್ಮು ಮತ್ತು ಕಾಶ್ಮೀರದ ರಂಬಾನ್-ಗೂಲ್ ರಸ್ತೆಯಲ್ಲಿ ಸುಮಾರು 1 ಕಿ.ಮೀ.ನಷ್ಟು ಪ್ರದೇಶದಲ್ಲಿ ಭೂಮಿ ಮುಳುಗಡೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಿಂದ 6 ಕಿಮೀ ದೂರದಲ್ಲಿರುವ ಪೆರ್ನೋಟ್ ಗ್ರಾಮದಲ್ಲಿ ಸುಮಾರು 30 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

”ನಿನ್ನೆ ಸಂಜೆಯಿಂದ ರಸ್ತೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಉಂಟಾಗಿದ್ದು, 1000-1200 ಮೀಟರ್‌ ಉದ್ದದ ರಸ್ತೆಗೆ ಹಾನಿಯಾಗಿದೆ. ಈ ಭಾಗದಲ್ಲಿ ಭೂಮಿ ನಿಧಾನವಾಗಿ ಮುಳುಗುತ್ತಿದ್ದು, ಭೂಕುಸಿತದಿಂದಾಗಿ ಕೆಲವೆಡೆ 10-12 ಮೀಟರ್‌ಗಳಷ್ಟು ರಸ್ತೆ ಕುಸಿದಿದೆ. ಇಲ್ಲಿ ಇನ್ನೂ ಭೂ ಕುಸಿತ ಮುಂದುವರೆದಿದೆ. ಸಂತ್ರಸ್ತ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್‌ನ ಕಮಾಂಡಿಂಗ್ ಅಧಿಕಾರಿ ಎಸ್‌ಕೆ ಗೌತಮ್ ಹೇಳಿದ್ದಾರೆ.

“ನಿನ್ನೆ ಸಂಜೆ ರಾಂಬನ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಭೂಕುಸಿತ ಪ್ರಾರಂಭವಾಯಿತು. ಭೂ ಕುಸಿತ ಮತ್ತು ಭೂಮಿ ಮುಳುಗಡೆಯಿಂದಾಗಿ ರಸ್ತೆಗಳು ಹಾಳಾಗಿವೆ. ಸಮೀಪದ ಪ್ರದೇಶಗಳಲ್ಲಿ ಸುಮಾರು 30-40 ಮನೆಗಳು ಸಹ ಹಾನಿಗೊಳಗಾಗಿವೆ. ನಾವು ಈ ಭಾಗದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿದ್ದೇವೆ ಮತ್ತು ಅವರು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ರಾಂಬನ್ ಎಡಿಡಿಸಿ ರೋಷನ್ ಲಾಲ್ ಮಾಹಿತಿ ನೀಡಿದ್ದಾರೆ. ಜಮೀನು ಮುಳುಗಡೆಯಿಂದ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article