ಮೇ 11 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ

Ravi Talawar
WhatsApp Group Join Now
Telegram Group Join Now

ಬಳ್ಳಾರಿ,ಮೇ 09: ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11ಕೆವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬ್ಯಾಂಕ್-2 ಮೇಲೆ ಇರುವ ಫೀಡರ್‍ಗಳ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಮೇ 11 ರಂದು ಬೆಳಿಗ್ಗೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಎಫ್-40 ಮತ್ತು ಎಫ್-76 ವ್ಯಾಪ್ತಿಯಲ್ಲಿನ ಕುವೆಂಪು ನಗರ, ರಾಮಾಂಜಿನೇಯ ನಗರ, ಸಿ.ಎಮ್.ಸಿ ಕಾಲೋನಿ, ಎಕ್ಸ್ ಸರ್ವಿಸ್‍ಮೆನ್ ಕಾಲೋನಿ, ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ರೇಷ್ಮೆ ಇಲಾಖೆ, ಟೀಚರ್ಸ್ ಕಾಲೋನಿ, ಈದ್ಗ ಮೈದಾನ ಹಾಗೂ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article