ಸಾಯಿ ಪಲ್ಲವಿ ಬರ್ತ್​ಡೇಗೆ ‘ತಂಡೆಲ್’ ಸ್ಪೆಷಲ್​​ ವಿಡಿಯೋ ಅನಾವರಣ

Ravi Talawar
WhatsApp Group Join Now
Telegram Group Join Now

ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಸಹಜ ಸುಂದರಿ ಸಾಯಿ ಪಲ್ಲವಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನ್ಯಾಚುರಲ್​​ ಬ್ಯೂಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರವಾದ ‘ತಂಡೆಲ್’ ತಂಡ ಸ್ಪೆಷಲ್​​ ವಿಡಿಯೋ ಅನಾವರಣ​ಗೊಳಿಸಿ ನಟಿಗೆ ವಿಶೇಷವಾಗಿ ಶುಭ ಕೋರಿದೆ.

ಚಂದು ಮೊಂಡೇಟಿ ನಿರ್ದೇಶನದ ತಂಡೆಲ್​​ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ರಾಷ್ಟ್ರೀಯತೆಯಂತಹ ಅಂಶಗಳೊಂದಿಗೆ, ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯನ್ನೂ ಹೇಳಲಿದೆ. ನಾಗ ಸಾಯಿ ಪ್ರೇಮ್​ಕಹಾನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ತಂಡೆಲ್​​ ಚಿತ್ರತಂಡ ಶೇರ್ ಮಾಡಿರುವ ಹೃದಯಸ್ಪರ್ಶಿ ವಿಡಿಯೋ, ಬರ್ತ್​ ಡೇ ಗರ್ಲ್​​​​ನ ಹಿಂದಿನ ಪಾತ್ರಗಳನ್ನು, ನಟಿಯಾಗಿ ಅವರ ವೃತ್ತಿಜೀವನ ಪ್ರಯಾಣವನ್ನು ಪ್ರದರ್ಶಿಸಿದೆ. ನಂತರ ನಾಗ ಚೈತನ್ಯ ಜೊತೆಗಿನ ಪ್ರಸ್ತುತ ಚಿತ್ರಕ್ಕೆ ಎಂಟ್ರಿ ಕೊಡುತ್ತದೆ. ತೆರೆಮರೆ ದೃಶ್ಯಾವಳಿಗಳು ಸೆಟ್‌ನಲ್ಲಿನ ಸಾಯಿ ಪಲ್ಲವಿ ಅವರ ನಗು, ಅಳು, ಮೋಜು-ಮಸ್ತಿಯಂತಹ ಕ್ಷಣಗಳನ್ನು ತೋರಿಸುತ್ತದೆ. ವಿಡಿಯೋ ನಟಿಮಣಿಯ ಶೂಟಿಂಗ್​ ವೇಳೆಯ ಫನ್ನಿ ಮಿಸ್ಟೇಕ್ಸ್​​ (bloopers) ಅನ್ನೂ ಸಹ ಒಳಗೊಂಡಿದೆ. ನಟಿ ಅಭಿಮಾನಿಗಳನ್ನು ಅಪ್ಪಿಕೊಳ್ಳುವ ಮತ್ತು ಸೆಟ್‌ನಲ್ಲಿನ ಭಾವನಾತ್ಮಕ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ.

ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ವಿಡಿಯೋ ಹಂಚಿಕೊಂಡ ಚಿತ್ರತಂಡ, ”ಅಭಿನಯ ನಿಮ್ಮದು, ಆಚರಣೆ ನಮ್ಮದು. ನೀವು ನಿರ್ವಹಿಸಿ, ನಾವು ಗೌರವಿಸುತ್ತೇವೆ. ಹ್ಯಾಪಿ ಬರ್ತ್​ ಡೇ ‘ಬುಜ್ಜಿ ತಲ್ಲಿ’. ನಿಮ್ಮ ಈ ವಿಶೇಷ ದಿನದಂದು ನಮ್ಮ ತಂಡದ ವಿಶೇಷ ಉಡುಗೊರೆ ಇಲ್ಲಿದೆ” ಎಂದು ಬರೆದುಕೊಂಡಿದೆ.

WhatsApp Group Join Now
Telegram Group Join Now
Share This Article