ವೈದ್ಯರ ನಿರ್ಲಕ್ಷ್ಯಕ್ಕೆ ಡೆಂಗ್ಯೂಗೆ ಮಗು ಸಾವು: ಪೋಷಕರ ರೋಧನೆ

Ravi Talawar
WhatsApp Group Join Now
Telegram Group Join Now
ಹೊಸಪೇಟೆ( ವಿಜಯನಗರ )ಮೇ.09: ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೆ ಬಸಾಪುರ ತಾಂಡದ ನಿವಾಸಿಯಾದ ತುಳುಚನಾಯ್ಕ್, ವಿಜಿಬಾಯಿ ದಂಪತಿಗಳ ಮಗನಾದ ಗೌತಮ್ ನಾಯ್ಕ್ (9) ವರ್ಷ ತೀರ್ವ ಜ್ವರ ಕಾಣಿಸಿಕೊಂಡಾಗ ಮರಿಯಮ್ಮನಹಳ್ಳಿಯ ಸಂಜೀವಿನಿ ಚಿಕಿತ್ಸಾಲಯದ ಡಾಕ್ಟರ್ ಕಿರಣ್ ಕುಮಾರ್ ಅವರ ಬಳಿ ತೋರಿಸಿದ್ದಾರೆ.
ಅದು ಡೆಂಗ್ಯೂ ಜ್ವರ ಎಂದು  ಖಚಿತವಾದ ಮೇಲೆ ಹೆಚ್ಚಿನ ಚಿಕಿತ್ಸೆ ಗಾಗಿ  ಹೊಸಪೇಟೆಯ”  ಶರಣಂ ” ಆಸ್ಪತ್ರೆಗೆ  :07/05/2024ರಂದು ಮಧ್ಯಾಹ್ನ 2ಘಂಟಿಗೆ ಧಾಖಲು ಮಾಡಿದ್ದ  ವೈದ್ಯರು ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ಪ್ರಾರಂಭಿಸಿದ್ದರು,  ಮರುದಿನ ದಿ.8.ರಂದು 4:00ಘಂಟೆಯ ಸುಮಾರಿಗೆ ಡಾ.ವಿನಯ್ ರಾಘವೇಂದ್ರ ರವರು ಬಿಳಿ ರಕ್ತಕಣ ಕಡಿಮೆ ಇದೆ,ರಕ್ತ ಹಾಕುವ  ವ್ಯವಸ್ಥೆ   ನಮ್ಮಲ್ಲಿ  ಇಲ್ಲ. ಎಂದು ರೋಗಿಯನ್ನು, ಕೊಪ್ಪಳ ಅಥವಾ ಬಳ್ಳಾರಿಗೆ ತೆಗೆದುಕೊಂಡು ಹೋಗಲು ತಿಳಿಸಿದರು.
ಅದೇ ದಿನ  4:30ರ ಸುಮಾರಿಗೆ ಆಸ್ಪತ್ರೆಯಿಂದ ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ,ಹೊಸಪೇಟೆಯ ಬಳ್ಳಾರಿ ಸರ್ಕಲ್ ಹತ್ತಿರ ಹೋಗುವಷ್ಟರಲ್ಲಿ  ಮಗು ಮೃತ ಹೊಂದಿದೆ  ಎಂದು ಪೋಷಕರು ಆರೋಪಿಸುತ್ತಾ, ಈ ವ್ಯದ್ಯರಿಗೆ  ತಕ್ಕ ಶಿಕ್ಷಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಪೋಷಕರ
 ರೋದನೆ ಹೇಳತೀರದಂತಿತ್ತು.
ಗಂಭೀರ ಸಮಸ್ಯೆ ಇದ್ದಲ್ಲಿ ಸಮಯ ಪ್ರಜ್ಞೆಯಿಂದ ಮುಂಚಿತವಾಗಿ ಹೇಳಬೇಕಿತ್ತು ಅವರ ನಿರ್ಲಕ್ಷ್ಯದಿಂದ ನಮ್ಮ ಮಗುವಿನ ಸಾವಾಗಿದೆ ಎಂದು ಪೋಷಕರು ಮತ್ತು ಸಂಘಟನೆಯವರು ನ್ಯಾಯ ಬೇಕೆಂದು ಆಸ್ಪತ್ರೆಯ ಮುಂದೆ ರಾತ್ರಿ 8:30ರವರೆಗೆ ಬಾಲಕನ ಶವವಿಟ್ಟು ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ  ಭೇಟಿ : ಜಿಲ್ಲಾ ವೈದ್ಯಧಿಕಾರಿ ಶಂಕರ್ ನಾಯ್ಕ್ ಆಸ್ಪತ್ರೆಗೆ ಭೇಟಿಮಾಡಿ ಕೂಡಲೇ ತನಿಖಾ ತಂಡ ರಚಿಸಿ ಪರಿಶೀಲಿಸಲಾಗುವುದು ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
 ಶಾಸಕ ಗವಿಯಪ್ಪ ಆಸ್ಪತ್ರೆ ಗೆ ಭೇಟಿನೀಡಿ  ಮುಂದೆ ಈರೀತಿ ಸಾವು  ಗಳು ಸಂಭವಿಸದಂತೆ ಏಚ್ಚರ ವಹಿಸಿ ಎಂದು ಶರಣಂ ಆಸ್ಪತ್ರೆಯ ವೈದ್ಯರಿಗೆ ತಾಕಿತು ಮಾಡಿದರು. ವೈದ್ಯಧಿಕಾರಿಗೂ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದರು. ಅವರು  ಸಂತ್ರಸ್ತರ ಪೂಷಕರಿಗೆ ತಮ್ಮ ಸ್ವಂತ ಹಣ  ರೂ.50,000(ಐವತ್ತು ಸಾವಿರ ) ನೆರವು ನೀಡಿದರು.
WhatsApp Group Join Now
Telegram Group Join Now
Share This Article