ಕಡ್ಡಾಯ ಮತದಾನ ವಿಜಯನಗರ ಜಿಲ್ಲೆಯ ವಾಗ್ದಾನ: ಜಾಗೃತಿ ಅಭಿಯಾನ

Ravi Talawar
WhatsApp Group Join Now
Telegram Group Join Now
ಹೊಸಪೇಟೆ : ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಹೊಸಪೇಟೆ ಇವರುಗಳ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿತ್ತು,
 ಹೊಸಪೇಟೆಯ  ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ನಿಂದ ಪ್ರಾರಂಭಗೊಂಡ.ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ,3ನೇ ವಾರ್ಡ, ರೈತ ಭವನ,4ನೇ ವಾರ್ಡ ಪಾಟೇಲ್ ನಗರ, ಮೂಲಕ  ಡಾ||ಪುನೀತ್ ರಾಜ್ ಕುಮಾರ್ ವೃತ್ತದವರೆಗೆ ರ್ಯಾಲಿ ನಡೆಸಲಾಯಿತು,  ಕಾರ್ಯಕ್ರಮವನ್ನು  ಸದಾಶಿವ ಫ್ರಭು ಬಿ, ಜಿಲ್ಲಾ  ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪo.ವಿಜಯನಗರ  ಇವರಿಂದ ಚಾಲನೆ ನೀಡಲಾಯಿತು,
ಕಡಿಮೆ ಮತದಾನ ವಾಗಿರುವ ವಾರ್ಡಗಳಲ್ಲಿ ಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಮೂಲ್ಯ  ಮತದಾನ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ,ಕಲ್ಯಾಣ  ಅಧಿಕಾರಿ  ಡಾ||ಶಂಕರ್ ನಾಯ್ಕ ಎಲ್, ಆರ್. ಜಿಲ್ಲಾ ಆರ್,ಸಿ,ಹೆಚ್ ಅಧಿಕಾರಿ  ಡಾ||ಜಂಬಯ್ಯ,ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ|| ಶ್ರೀನಿವಾಸ ದೇಶಪಾಂಡೆ. ಕಾರ್ಯದರ್ಶಿ  ಡಾ||ರಾಜೀವ್ ಹಾಗು ಹೊಸಪೇಟೆ ನಗರದ  ಖಾಸಗಿ ಆಸ್ಪತ್ರೆಯ ವೈದ್ಯರು, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು,ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ತಾಲೂಕು ಪಂಚಾಯತಿ ಸಿಬ್ಬಂದಿಗಳು,ಆಶಾ ಕಾರ್ಯಕರ್ತರು ಅಂಗನವಾಡಿ ಮತ್ತು ಹೊಸಪೇಟೆಯ ನರ್ಸಿಂಗ್ ಕಾಲೇಜಿನ ಭೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಮತದಾನ ಜಾಗೃತಿ ಅಭಿಯಾನ ವನ್ನು ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article