ವಚನಗಳು ಕನ್ನಡ ನಾಡಿನ ಅಮೂಲ್ಯ ಸಾಹಿತ್ಯವಾಗಿದೆ : ಡಾ. ವೈ.ಎಂ.ಯಾಕೊಳ್ಳಿ

Hasiru Kranti
WhatsApp Group Join Now
Telegram Group Join Now

ಗೋಕಾಕ:’ಕನ್ನಡ ನಾಡು ವಚನ ಸಾಹಿತ್ಯವನ್ನುಜಗತ್ತಿಗೆಕೊಟ್ಟಿರುವ ಬಹುದೊಡ್ಡಕಾಣಿಕೆಯಾಗಿದೆ’ ಎಂದು ಸಾಹಿತಿಡಾ.ವೈ.ಎಂ.ಯಾಕೊಳ್ಳಿ ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಸಾಹಿತ್ಯ, ಸಾಂಸ್ಕೃತಿಕ ಸೌರಭಕಾರ್ಯಕ್ರಮದಲ್ಲಿ ’ವಚನ ಸಹಿತ್ಯದ ಪ್ರಸ್ತುತೆ’ ಕುರಿತು ಮಾತನಾಡಿದಅವರು ೩೫೦ಕ್ಕೂ ಅಧಿಕ ಶರಣರುಒಂದೆಡೆ ಸೇರಿ ವಚನ ಸಾಹಿತ್ಯವನ್ನು ರಚಿಸಿದ್ದು ಜಗತ್ತಿನ ಸಾಹಿತ್ಯಇತಿಹಾಸದಲ್ಲಿದಾಖಲೆ ಎನಿಸಿದೆ ಎಂದರು.
ಶರಣರುಕಾಯಕದ ಮೂಲಕ ತನ್ನ ಬದುಕನ್ನು ನಡೆಸಬೇಕು.ಕಾಯಕಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನುಕೊಟ್ಟಿದ್ದರು.ಜಾತಿ ಬೇಧ, ಹೆಣ್ಣು ಮತ್ತುಗಂಡುಎನ್ನುವ ವ್ಯತ್ಯಾಸವನ್ನು ಮಾಡದೆ ಸಮಾನತೆಯನ್ನು ಸಾರಿದ್ದರುಎಂದರು.
ವಚನ ಸಾಹಿತ್ಯವನ್ನುಓದುವುದು ಇಂದಿನ ಅವಶ್ಯಕತೆಯಾಗಿದೆ.ಮಕ್ಕಳಿಗೆ ವಚನ ಸಾಹಿತ್ಯಕುರಿತುಆಸಕ್ತಿಯನ್ನು ಕೆರಳಿಸಿ ವಚನಗಳನ್ನು ಓದುವ ಪ್ರವತ್ತಿಯನ್ನು ಬೆಳೆಸಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಆಶೀರ್ವಚನ ನೀಡಿದರು.
ಶಿವರಾಜ ಶಾಸ್ತ್ರೀಗಳು ಶಿವಲಿಂಗೆಶ್ವರನ ಬಾಲಲೀಲೆಗಳ ಬಗ್ಗೆ ಪ್ರಚನ ನೀಡಿದರು.
ವೀರೇಶಕಿತ್ತೂರ ವಚನ ಮತ್ತುಜನಪದ ಹಾಡುಗಳನ್ನು ಹಾಡಿ ಶ್ರೋತೃಗಳನ್ನು ಮನತಣಿಸಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.ರೋಹಿಣಿ ಬಂಗಾರಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article