ಅಭಿವೃದ್ಧಿಗೆ ಬಿಜೆಪಿಗೆ ನೀಡಿ: ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ

Ravi Talawar
WhatsApp Group Join Now
Telegram Group Join Now

ಗದಗ27, ಇಂದು ಹಾವೇರಿ-ಗದಗ ಲೋಕಸಭಾ ಚುನಾವಣೆಯ ಅಂಗವಾಗಿ ಗದಗ ವಾರ್ಡ ನಂ ೩೧ರಲ್ಲಿ ಮನೆ ಮನೆ ಭೇಟಿ ನೀಡಿ ಚುನಾವಣೆ ಪ್ರಜಾರದ
ಕೈಗೊಂಡಲ್ಲಿ ಪ್ರತಿಯೋಂದು ಮನೆಯಿಂದ ಈ ಸಂದರ್ಭದಲ್ಲಿ ನವಭಾರತಕ್ಕಾಗಿ ಯುವಭಾರತಕ್ಕಾಗಿ ಮತ್ತೊಮ್ಮೆ ಮೋದಿಜಿ.. ಹಾಗೂ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ಈ ಭಾರಿಯೂ ನಮ್ಮ ಮತ ಪ್ರಧಾನ ಸೇವಕ ಮೋದಿಜಿಗೆ ಎಂದು ಹೇಳಿದ ಜನರ ಮಾತಿನಿಂದ ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಉತ್ಸಾಹ ಕಂಡಿದ್ದು ವಿಶೇಷವಾಗಿತ್ತು ಎಂದು ಗದಗ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಹರ್ಷ ವ್ಯಕ್ತ ಪಡಿಸಿದರು.

ಗ್ಯಾರಂಟಿ ನಾ ದೇಶ ನಾ ಎಂದು ಕೇಳಿದಾಗ ದೇಶ ಎಂಬುವುದು ಎಲ್ಲರಿಗೂ ತಿಳಿದಿದೆ ಹಾಗಾಗಿ  ಈ ಬಾರಿ ಕಾಂಗ್ರೇಸ ಗ್ಯಾರಂಟಿಗೆ ಆಮೇಷಕ್ಕೆ  ಒಳಗಾಗದೆ ಬಿಜೆಪಿ ಅಭಿವೃದ್ಧಿಗೆ ಮತ ನೀಡುವರು ಎಂಬುವುದು ಖಚಿತ ಎಂದರು.

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವಭಾರತಕ್ಕಾಗಿ ಯುವಭಾರತಕ್ಕಾಗಿ ಮೋದಿಜಿ ಗದಗ-ಹಾವೇರಿಗಾಗಿ ಬಸವರಾಜ ಬೊಮ್ಮಾಯಿ ಘೋಷದೊಂದಿಗೆ ಮನೆ ಭೇಟಿ ಕಾರ್ಯ ಮುಂದೆ ಸಾಗಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಸುದೀರ ಕಾಟಿಗಾರ, ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article