ಬಾಲ್ಟಿಮೋರ್ ಬ್ರಿಡ್ಜ್ ಕುಸಿತ: ಹಡಗಿನಲ್ಲಿ 22 ಮಂದಿ ಭಾರತೀಯ ಸಿಬ್ಬಂದಿ; ಸಿನರ್ಜಿ ಮೆರೈನ್ ಗ್ರೂಪ್ ಮಾಹಿತಿ ಬಹಿರಂಗ!

Ravi Talawar
WhatsApp Group Join Now
Telegram Group Join Now

ಬಾಲ್ಟಿಮೋರ್,ಮಾರ್ಚ್​ 27:: ಬಾಲ್ಟಿಮೋರ್ ಬ್ರಿಡ್ಜ್ ಕುಸಿತಕ್ಕೆ ಕಾರಣವಾದ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿಗಳೂ ಭಾರತೀಯರಾಗಿದ್ದಾರೆ ಎಂಬ ಮಾಹಿತಿ ಸಿನರ್ಜಿ ಮೆರೈನ್ ಗ್ರೂಪ್ ಬಹಿರಂಗಗೊಳಿಸಿದೆ. ಎಲ್ಲಾ ಸಿಬ್ಬಂದಿಗಳೂ ಸುರಕ್ಷಿತರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕಂಟೇನರ್ ಹಡಗೊಂದು ಮಂಗಳವಾರ ಮುಂಜಾನೆ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದಕ್ಕೆ ಅಪ್ಪಳಿಸಿತು, ಇದರಿಂದಾಗಿ ಸೇತುವೆ ಕುಸಿದು ಬಿದ್ದಿದ್ದು ನಿರ್ಮಾಣ ಸಿಬ್ಬಂದಿ ಮತ್ತು ಹಲವಾರು ವಾಹನಗಳನ್ನು ಅಪಾಯಕಾರಿಯಾದ ನೀರಿನಲ್ಲಿ ಮುಳುಗಿಸಿತು. ರಕ್ಷಕರು ಇಬ್ಬರನ್ನು ಹೊರತೆಗೆದಿದ್ದಾರೆ ಆದರೆ ಆರು ಮಂದಿ ಇನ್ನೂ ಪತ್ತೆಯಾಗಿಲ್ಲ.

ಅಪಘಾತವು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಢಿಕ್ಕಿ ಹೊಡೆಯುವ ಮುನ್ನ ಕೆಲವೇ ಕ್ಷಣಗಳ ಮೊದಲು ಹಡಗಿನ ಸಿಬ್ಬಂದಿ ತುರ್ತು ಸಂದೇಶವನ್ನು ಸಂಬಂಧಪಟ್ಟವರಿಗೆ ರವಾನಿಸಿದ್ದರು. ಇದು ವ್ಯಾಪ್ತಿಯಲ್ಲಿ ವಾಹನ ದಟ್ಟಣೆಯನ್ನು ಮಿತಿಗೊಳಿಸಲು ಅಧಿಕಾರಿಗಳಿಗೆ ಅನುವು ಮಾಡಿಕೊಟ್ಟಿತ್ತು ಎಂದು ಮೇರಿಲ್ಯಾಂಡ್ ಗವರ್ನರ್ ಹೇಳಿದ್ದಾರೆ. ಬ್ರಿಡ್ಜ್ ನ ಆಧಾರಗಳ ಪೈಕಿ ಒಂದಕ್ಕೆ ಹಡಗು ಢಿಕ್ಕಿ ಹೊಡೆದಿದ್ದು, ಬ್ರಿಡ್ಜ್ ಆಟಿಕೆಯ ಮಾದರಿಯಲ್ಲಿ ಕುಸಿದುಬಿದ್ದಿದೆ. ಇದು ಕೆಲವೇ ಸೆಕೆಂಡುಗಳಲ್ಲಿ ನೀರಿನಲ್ಲಿ ಉರುಳಿತು – ಆಘಾತಕಾರಿ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

 

WhatsApp Group Join Now
Telegram Group Join Now
Share This Article