ಎಮ್ಮಿಗನೂರು ಗ್ರಾಮದಲ್ಲಿ ಎತ್ತಿನ ಬಂಡಿ ಮೆರವಣಿಗೆ ಮೂಲಕ ಮತದಾನ ಜಾಗೃತಿ

Ravi Talawar
WhatsApp Group Join Now
Telegram Group Join Now

ಬಳ್ಳಾರಿ,ಏ.18: ಚುನಾವಣೆ ಪರ್ವ ದೇಶದ ಗರ್ವ ಎನ್ನುವ ಚುನಾವಣೆ ಆಯೋಗದ ಸಂದೇಶದೊಂದಿಗೆ ಕಂಪ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾನದ ಜಾಗೃತಿ ಕುರಿತು ಎಮ್ಮಿಗನೂರು  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.

ಕಂಪ್ಲಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಓ ಶ್ರೀಕುಮಾರ್ ಅವರು, ಗ್ರಾಮದ ಸರ್ಕಾರಿ ಹಿರಿಯ ಶತಮಾನ ಶಾಲೆ ಆವರಣದಲ್ಲಿ ಎತ್ತಿನ ಬಂಡಿ ಜಾಥಾಗೆ ಹಸಿರು ನಿಸಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೇ 07 ರಂದು ನಡೆಯುವ ಮತದಾನ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡಿ, ನಿಮ್ಮವರಿಗೂ ಮತದಾನ ಮಾಡುವಂತೆ ತಿಳಿಸಿರಿ ಎಂದು ಅವರು ಕರೆ ನೀಡಿದರು.

ಎತ್ತಿನ ಬಂಡಿಗಳ ಮೆರವಣಿಗೆ ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು.

ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಎತ್ತಿನ ಬಂಡಿಗಳ ಮೆರವಣಿಗೆ ಜಾಥಾದಲ್ಲಿ ಎತ್ತಿನ ಬಂಡಿಗಳಿಗೆ ಅಲಂಕೃತವಾಗಿ ಸಿಂಗರಿಸಲಾಗಿತ್ತು. ತಳೀರು-ತೋರಣ, ಬಲೂನ್‍ಗಳು ಮತ್ತು ಮತದಾನ ಘೋಷಣೆಗಳ ಫಲಕಗಳು ಒಳಗೊಂಡಂತೆ ನೋಡುಗರನ್ನು ಆಕರ್ಷಿಸುವಂತೆ ಗಮನಸೆಳೆದವು.

ಈ ಸಂದರ್ಭದಲ್ಲಿ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರು ನಾಯಕ್, ಟಿಐಇಸಿ ಸಂಯೋಜಕ ಹನುಮೇಶ್, ಆರೋಗ್ಯ ಇಲಾಖೆ ಅಧಿಕಾರಿ ಬಸವನಗೌಡ, ಶಾಲಾ ಮುಖ್ಯ ಶಿಕ್ಷಕ ಜಾತಯ್ಯ ಸೇರಿದಂತೆ ಶಾಲೆಯ ಎಲ್ಲಾ ಮುಖ್ಯ ಗುರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article