ಜುಮ್ಮಾ ಮಸ್ಜಿದ್ ಕಮಿಟಿಯ ವತಿಯಿಂದ ತೊಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮಿಗಳಿಗೆ ಸನ್ಮಾನ

Ravi Talawar
WhatsApp Group Join Now
Telegram Group Join Now

ಗದಗ24: ಗದಗ್ ಬೆಟಗೇರಿ ಅವಳಿ ನಗರದ ಭಾವೈಕ್ಯತೆಯ ಮಠದ ಗದುಗಿನ ಶ್ರೀ ತೋಟದಾರ್ಯ ಮಠದ ಜಾತ್ರಾ ಮಹೋತ್ಸವ ಪ್ರತಿವರ್ಷವು ಜಾತಿ ಮತ ಭೇದ ಭಾವ ಎನ್ನದೆ ಜಾತ್ರಾ ಮಹೋತ್ಸವದ ಸಿದ್ಧತೆಯಿಂದ ಪದಾಧಿಕಾರಿಗಳ ಆಯ್ಕೆ ಮಾಡುವಲ್ಲಿ ಎಲ್ಲಾ ಧರ್ಮದವರನ್ನ ಒಳಗೊಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಿ ಜಾತ್ರಾ ನೆರವೇರಿಸುವುದು.

ಭಾವೈಕ್ಯತೆಯ ಮಠದ ಒಂದು ವಿಶೇಷ ಅದರಂತೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಂಪ್ರದಾಯದಂತೆ ಎಸ್ ಎಸ್ ಕಳಸಾಪುರ ಅವರ ಮನೆಯಿಂದ ಜಾತ್ರಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಡೊಳ್ಳು ಡಮರು ಸಂಗೀತ ವಾದ್ಯಗಳಿಂದ ಹೊರಟು ಕೋಮು ಸೌಹಾರ್ದತೆಗೆ ಸೈ ಎನಿಸಿಕೊಂಡ ಗದುಗಿನ ತೊಂಟಾದಾರ್ಯ ಜಾತ್ರೆಗೆ ಜುಮ್ಮಾ ಮಸ್ಜಿದ್ ಕಮಿಟಿಯ ವತಿಯಿಂದ ತೊಂಟದಾರ್ಯ ಮಠದ ಶ್ರೀ ತೊಂಟದ ಸಿದ್ದರಾಮ ಮಹಾಸ್ವಾಮಿಗಳಿಗೆ ಈ ಸಮಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸನ್ಮಾನಿಸಲಾಯಿತು.

ಈ ಸಂರ್ಭದಲ್ಲಿ ಜಾಮಿಯಾ ಮಸ್ಜಿದ್ ಕಮಿಟಿಯ ವತಿಯಿಂದ ಅಕ್ಬರ್‌ಸಾಬ ಬಬರ್ಚಿ, ಹಾಜಿ ಮಕಬೂಲ್‌ಸಾಬ್ ಶಿರಹಟ್ಟಿ, ಮಹಮ್ಮದ್‌ಶಫಿ ಕುದರಿ, ಹಾಜಿ ಧಾರವಾಡ, ರಿಯಾಜ್ ಬ್ಯಾಳಿರೊಟ್ಟಿ, ಇನ್ನೂ ಹಲವಾರು ಮುಸ್ಲಿಂ ಸಮಾಜದ ಗಣ್ಯಮಾನ್ಯರು ಉಪಸ್ಥಿರಿದ್ದರು.

 

WhatsApp Group Join Now
Telegram Group Join Now
Share This Article