ಮೂಲಭೂತ ಸೌಲಭ್ಯಗಳಿಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ: ಆರ್. ಬಿ.ತಿಮ್ಮಾಪುರ

Ravi Talawar
WhatsApp Group Join Now
Telegram Group Join Now

ರನ್ನ ಬೆಳಗಲಿ: ಮೇ.06.,ಬರಗಾಲ ಬಿದ್ದರೂ, ಕೆಲಸವಿಲ್ಲದಿದ್ದರೂ ಯಾರ ಬಳಿಯೂ ಕೈಯೊಡ್ಡದೇ ಹೊಟ್ಟೆ ತುಂಬಾ ಊಟ ಮಾಡುವಂತಹ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್ ನಿಂದ ನಿರ್ಮಾಣವಾಗಿದೆ, ಅದೇ ರೀತಿ ಮೂಲಭೂತ ಸೌಲಭ್ಯಗಳಿಗಾಗಿ ಹಾಗೂ ದೇಶದ ಬಡವರು ಸ್ವಾವಲಂಬಿಗಳಾಗಬೇಕಾದರೆ ಕಾಂಗ್ರೆಸ್‌ಗೆ
ಮತ ನೀಡಿ ಸಂಯುಕ್ತ ಪಾಟೀಲ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ರನ್ನಬೆಳಗಲಿ ಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಮತ ಯಾಚಿಸಿ ಮಾತನಾಡಿದ ಅವರು, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಯುವಕರಿಗೆ ಏನನ್ನೂ ಕೊಡುಗೆ ನೀಡದ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ, ಮೋದಿ ದುರ್ಬಲ ಪ್ರಧಾನ
ಮಂತ್ರಿ, ಬರೀ ಸುಳ್ಳು ಹೇಳುತ್ತಾರೆ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ, ಈಗ ಅವರು ಕರೆದರೆ ಮುನ್ನೂರು ಜನರೂ ಬರುವುದಿಲ್ಲ ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತೆ, ಸಂಯುಕ್ತ ಪಾಟೀಲ ಬಹುಮತದಿಂದ ಗೆಲ್ಲುತ್ತಾರೆ, ಮುಂದಿನ ವರ್ಷ ರನ್ನಬೆಳಗಲಿಯಲ್ಲಿ ಸಂಯುಕ್ತ ನೇತೃತ್ವದಲ್ಲಿ ರನ್ನ ಉತ್ಸವ ಆಚರಿಸೋಣ ಎಂದರು.

ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ, ಈ ಚುನಾವಣೆ ಬರೀ ಚುನಾವಣೆಯಲ್ಲ, ಬಡವರು, ರೈತರು, ಮಹಿಳೆಯರು, ದೀನ ದಲಿತರು, ಅಲ್ಪಸಂಖ್ಯಾತರ ಅಳಿವು-ಉಳಿವಿನ ಚುನಾವಣೆ.ಕೊರೋನಾ , ಅತೀವೃಷ್ಠಿ, ಅನಾವೃಷ್ಠಿ, ಕೊರೋನಾ ಸಂದರ್ಭದಲ್ಲಿ ಸಹಾಯ ಮಾಡದ ಬಿಜೆಪಿಗೆ ಮತ ಕೇಳುವ ಹಕ್ಕಿಲ್ಲ,
ಸಂಕಷ್ಟದಲ್ಲಿ ಕೈಹಿಡಿದು ಸಹಾಯ ಮಾಡಿದ ಕಾಂಗ್ರೆಸ್ ಕೈ ಬಲಪಡಿಸಲು ತಮಗೆ ಮತ ನೀಡಬೇಕೆಂದು ಕೋರಿದರು.

ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ್ ಅವರು ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಬಡವರ ಜೀವನಕ್ಕೆ ಶಕ್ತಿಯನ್ನು ತುಂಬುತ್ತಿವೆ, ನಿರಂತರ ೨೦ ವರ್ಷಗಳಿಂದ ಅಭಿವೃದ್ಧಿಯನ್ನೂ ಕಾಣದ ಬಾಗಲಕೋಟೆ ಜಿಲ್ಲೆಯನ್ನು ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ. ನಿಮ್ಮ ಮನೆಯ ಮಗಳಾಗಿ ಕೆಲಸ ಮಾಡುತ್ತೇನೆ, ಒಂದು ಬಾರಿ ಅವಕಾಶವನ್ನು ಕೊಟ್ಟು ನೋಡಿ, ಬಡವರಿಗಾಗಿ, ದೀನ ದಲಿತರಗಾಗಿ ಮುಂಚೂಣಿಯಲ್ಲಿ ನಿಂತ್ತು ಹೋರಾಟ ಮಾಡಿ ನಿಮಗೆ ನ್ಯಾಯವನ್ನು ಒದಗಿಸುತ್ತೇನೆ, ನಾವು ನೀಡುವ ಎಲ್ಲ ಪ್ರಣಾಳಿಕೆಗಳನ್ನು ನೂರಕ್ಕೆ ನೂರು ಕಾರ್ಯರೂಪಕ್ಕೆ ತರುತ್ತೇವೆ, ಆದ್ದರಿಂದ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ನಿಮ್ಮಲ್ಲರ ಸೇವೆ ಮಾಡಲು ಅವಕಾಶ ನೀಡಬೇಕೆಂದು ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಸ್ವಾಗತ ಮಾಡುವುದರ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದಿದೆ, ಕಾಮಗ್ರೆಸ್ ಋಣ ತೀರಿಸಲು ಸಂಯುಕ್ತ ಅವರಿಗೆ ಮತನೀಡಿ ಕೈ ಬಲಪಡಿಸಿ ಎಂದರು. ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕ ಸಿದ್ದು ಕೊಣ್ಣೂರ ಮಾತನಾಡಿ, ಸಂಯುಕ್ತ ಪಾಟೀಲ ಅವರ ಆಗಮನದಿಂದ ಯುವ ಪಡೆಗೆ ನವಚೈತನ್ಯ ಬಂದಿದೆ ರನ್ನ ಬೆಳಗಲಿಯ ಪ್ರತಿ ಬೂತ್ ಮಟ್ಟದಲ್ಲಿ ಲೀಡ್ ಕೊಟ್ಟು ಅಧಿಕ ಲೀಡ್ ನಿಂದ ಗೆಲ್ಲಿಸುವ ಭರವಸೆ ನೀಡಿದರು.

ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ ಕಿವಡಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ವಿನಯ ತಿಮ್ಮಾಪುರ, ಮುಧೋಳ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ ಪಾಟೀಲ, ತಾಲೂಕ ಕಾಂಗ್ರೇಸ್ ಒ ಬಿ ಸಿ ಘಟಕದ ಅಧ್ಯಕ್ಷರಾದ ಸಂಗಪ್ಪ ಅಮಾತಿ,
ದುಂಡಪ್ಪ ಬರಮನಿ, ಲಕ್ಷ್ಮಣ ತಳೇವಾಡ, ಸದುಗೌಡ ಪಾಟೀಲ, ಸಂಜು ತಳೇವಾಡ, ಎಸ್.ಆರ್.ಹಿಪ್ಪರಗಿ, ಉದಯ ಸಾರವಾಡ, ಹನಮಂತ ಕಡಪಟ್ಟಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷರಾದ ಸವಿತಾ ಚವಲಿ, ಭರಮಪ್ಪ ಹೊಸೂರ, ಗ್ಯಾರೆಂಟಿ ಯೋಜನೆ ಸಮಿತಿಯ ಸದಸ್ಯರಾದ ಯಮನಪ್ಪ ದೊಡ್ಡಮನಿ,
ನೀಲಕಂಠ ಸೈದಾಪುರ, ಮುಬಾರಕ್ ಅತ್ತಾರ, ಮುತ್ತು ಸನ್ನಟ್ಟಿ, ಸದಾಶಿವ ಕುಲಗೋಡ, ಸಿದ್ದು ಸಾಂಗ್ಲಿಕರ, ಮಹಾದೇವ ಮೂರನಾಳ, ಮಲ್ಲಪ್ಪ ಮಲಾಡಿ ಇತರರಿದ್ದರು. ಶಿಕ್ಷಕ ರಾಘವೇಂದ್ರ ನೀಲನ್ನವರ ನಿರೂಪಿಸಿದರು.

WhatsApp Group Join Now
Telegram Group Join Now
Share This Article