ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ   ‘ಸರಸ್ವತಿ’ ಪುತ್ರನಿಗೆ ಗೃಹಲಕ್ಷ್ಮೀಯ ಸಾಥ್

Ravi Talawar
WhatsApp Group Join Now
Telegram Group Join Now
“ಗೃಹಲಕ್ಷ್ಮೀ” ಎಂಬ ಅರ್ಥಪೂರ್ಣ ಹೆಸರಿನ ಈ ಒಂದು ಯೋಜನೆಯು ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಹಬ್ಬಯಕೆಯಿಂದ ಅಧಿಕಾರದ ಗದ್ಧುಗೇರಿರಿರುವ ರಾಜ್ಯ ಕಾಂಗ್ರೆಸ್ (ಜೋಡೆತ್ತು) ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ, ಬಡ ಕುಟುಂಬಗಳ ಪರವಾದ ಯೋಜನೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಬಡವರ ಪರವಾದ ಈ ಯೋಜನೆಯಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ.
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಅನೇಕ ಬಡ ಕುಟುಂಬಗಳ ಜೀವನಮಟ್ಟ ಸುಧಾರಿಸಿದೆ. ಅದೆಷ್ಟೋ ಬಡ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿದೆ. ಅಲ್ಲದೇ ಅನೇಕ ಬಡಜನರ ಬದುಕು ಹಸನಾಗಿದೆ ಎಂದೇ ಬಣ್ಣಿಸಲಾಗುತ್ತಿದೆ. ಸರ್ಕಾರದ ಇಂತಹದೊAದು ಮಹತ್ವಾಕಾಂಕ್ಷಿ ಯೋಜನೆಯು ಹಲವು ಬಡ ಮಹಿಳೆಯರಿಗೆ ಆರ್ಥಿಕವಾಗಿ ಬಹಳ ಸಹಕಾರಿಯಾಗಿದೆ. ಇದರಿಂದ ಅವರ ಮನೆ ಮನಗಳಲ್ಲಿ ಹರ್ಷದ ಹೊನಲು ಹರಿಯುವಂತಾಗಿದೆ ಎಂದೂ ಶ್ಲಾಘಿಸಲಾಗುತ್ತದೆ.
ಆದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿರುವ ಗೃಹಲಕ್ಷಿö್ಮÃ ಯೋಜನೆಯ ಲಾಭದ ಬಗ್ಗೆ ಅನೇಕರು ಪ್ರಶ್ನಿಸುತ್ತಿದ್ದರು. ಈ ಯೋಜನೆಯ ಬಗ್ಗೆ ಕೆಲವರು ಇಲ್ಲಸಲ್ಲದ ಕುಹುಕ ಮಾತುಗಳನ್ನಾಡಿದ್ದರು. ಆದರೆ ಇದೀಗ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಗುಮ್ಮಟ ನಗರಿ ವಿಜಯಪುರದ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯ ಸರ್ಕಾರದ ಈ ಗೃಹಲಕ್ಷಿö್ಮÃ ಯೋಜನೆಯ ಹಣವನ್ನು ಬಳಸಿಕೊಂಡು ಪುಸ್ತಕಗಳನ್ನು ಖರೀದಿಸಿರುವುದಾಗಿ ಹೇಳುವ ಮೂಲಕ ಇನ್ನೊಮ್ಮೆ ಈ ಯೋಜನೆಯ ಮಹತ್ವವನ್ನು ಸಾರಿದ್ದಾನೆ. ಇದು ಅನೇಕರಿಗೆ ಮಾದರಿಯೂ ಆಗಿದೆ.
ಆರ್ಥಿಕ ಮುಗ್ಗಟ್ಟಿನಲ್ಲಿರುವ ನನ್ನ ಕುಟುಂಬಕ್ಕೆ ಸಿದ್ಧರಾಮಯ್ಯ ಸರ್ಕಾರ ನೀಡುವ ಗ್ಯಾರಂಟಿ ಯೋಜನೆ ಹಾಗೂ ಮೋದಿ ಸರ್ಕಾರ ರೈತರಿಗೆ ನೀಡುವ ಹಣ ನೆರವಿಗೆ ಬಂತು ಎಂದು ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ಈ ವೇದಾಂತ ನಾವಿ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷೌರಿಕ ವೃತ್ತಿ ಮಾಡುತ್ತಿದ್ದ ತಂದೆಯನ್ನು ಕಳೆದುಕೊಂಡ ಬಳಿಕ ತಮ್ಮ ಕುಟುಂಬ ಭಾರಿ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ ಪ್ರಧಾನಿ ಮೋದಿ ಅವರ ಸರ್ಕಾರ ಭೂಮಿ ಹೊಂದಿರುವ ರೈತರ ಖಾತೆಗೆ ಜಮೆ ಮಾಡಿದ ಕಿಸಾನ್ ಸಮ್ಮಾನ ಯೋಜನೆಯ ಹಣ ನಮ್ಮ ಕುಟುಂಬದ ಆರ್ಥಿಕ ಶಕ್ತಿಗೆ ನೆರವಾಯಿತು ಎಂದು ಸ್ಮರಿಸಿದ್ದಾರೆ.
ಅದರಲ್ಲೂ ಕಳೆದ ವರ್ಷದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಮ್ಮ ಕುಟುಂಬಕ್ಕೆ ಸಹಕಾರಿ ಆಗಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಕುಟುಂಬಕ್ಕೆ ಸಾಕಷ್ಟು ನೆರವಾಗಿದೆ. ನಮ್ಮ ತಾಯಿಯ ಬ್ಯಾಂಕ್ ಖಾತೆಗೆ ಜಮೆಯಾದ ಗೃಹಲಕ್ಷ್ಮೀ ಯೋಜನೆ ಹಣ ನನ್ನ ಓದಿಗೆ ಹೆಚ್ಚು ಪ್ರಯೋಜನಕಾರಿ ಆಯ್ತು. ಸರ್ಕಾರದ ಯೋಜನೆಗಳಿಂದ ನಮ್ಮ ಕುಟುಂಬಕ್ಕೆ ಬಂದ ನೆರವಿನ ಹಣ ನನ್ನ ಶೈಕ್ಷಣಿಕ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಬಹಳ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಕೋವಿಡ್‌ನಲ್ಲಿ ತಂದೆ ತೀರಿಕೊಂಡ ನಂತರ ಅಮ್ಮ ದುಡಿದು ನಮ್ಮನ್ನು ಸಾಕುತ್ತಿದ್ದರು. ವಯಸ್ಸಾದ ಕಾರಣ ಅವರಿಗೆ ದುಡಿಯಲು ಹೋಗುವುದನ್ನು ಬಿಡಿಸಿದ್ದೆವು. ಆಗ ಇದ್ದ ಜಮೀನನ್ನು ಪಾಲಿಗೆ ನೀಡಿ ಬಂದ ಹಣ ಹಾಗೂ ಅಮ್ಮನಿಗೆ ಬರುತ್ತಿದ್ದ ಗೃಹಲಕ್ಷಿö್ಮÃ ಯೋಜನೆಯ ಎರಡು ಸಾವಿರ ಹಣ, ಕೇಂದ್ರದ ಪಿಎಂ ಕಿಸಾನ್ ಯೋಜನೆಯ ಹಣ ನನ್ನ ವಿದ್ಯಾಭ್ಯಾಸಕ್ಕೆ ನೆರವಾದವು ಅದರಿಂದಲೂ ನನಗೆ ಈ ಸಾಧನೆ ಮಾಡುವ ಶಕ್ತಿ ಬಂತು. ಮುಂದೆ ಪದವಿ ಪಡೆದು ಐಎಎಸ್. ಕೆಎಎಸ್ ಮಾಡುವ ಕನಸು ಕಟ್ಟಿಕೊಂಡಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟುಕೊಂಡಿದ್ದಾರೆ.
ಇದೆಲ್ಲದರ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ “ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷಿö್ಮÃ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು. ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ” ಎಂದು ಗ್ಯಾರೆಂಟಿಗಳ ಬಗ್ಗೆ ಸಾರ್ಥಕತೆಯ ಭಾವ ವ್ಯಕ್ತಪಡಿಸಿದ್ದರೆ,
ಡಿಸಿಎಂ ಡಿಕೆ ಶಿವಕುಮಾರ್ ಅವರೂ ಕೂಡ “ನಮ್ಮ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮತ್ತೊಮ್ಮೆ ಎದೆ ತಟ್ಟಿ ಹೇಳಿಕೊಳ್ಳುವ ಸಂದರ್ಭ ಬಂದಿದೆ. ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿರುವ ವೇದಾಂತ್ ಜ್ಞಾನೋಬಾ ನಾವಿ ಅವರು ಓದಲು ನಮ್ಮ ಗೃಹಲಕ್ಷಿö್ಮÃ ಯೋಜನೆಯ ಹಣ ನೆರವಿಗೆ ಬಂದಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ನಮ್ಮ ಗ್ಯಾರೆಂಟಿಗಳ ಬಗ್ಗೆ ಹೆಮ್ಮೆ ಮೂಡುತ್ತಿದೆ. ವೇದಾಂತ್ ನೀನು ನಿಜವಾದ ಹೀರೋ” ಎಂದು ಗ್ಯಾರೆಂಟಿಗಳ ಕುರಿತು ಹೆಮ್ಮೆಯ ಭಾವನೆ ವ್ಯಕ್ತಪಡಿಸಿದ್ದಾರೆ.
ಇನ್ನು ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ವೇದಾಂತ ಜ್ಞಾನೋಬಾ ನಾವಿ ಶೇ. 99.33 ರಷ್ಟು ಅಂಕ ಪಡೆದು ಈ ಸಾಧನೆ ಮೆರೆದಿದ್ದಾರೆ. ಕಷ್ಟಪಟ್ಟು- ಇಷ್ಟಪಟ್ಟು ಓದುತ್ತಿರುವ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಎಸ್. ಪಿ. ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಬಹಳ ಕಷ್ಟಪಟ್ಟು- ಇಷ್ಟಪಟ್ಟು ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾದ್ಯಂತ ಸಂತಸ ವ್ಯಕ್ತವಾಗಿದ್ದು, ವಿದ್ಯಾರ್ಥಿಯ ಪೋಷಕರು, ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹದೊAದು ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ಈ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಂದಲೂ ಹೃದಯಸ್ಪರ್ಷಿ ಸನ್ಮಾನ ಮಾಡಿ ಗೌರವಿಸಲಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಕ್ಕೆ ಅಭಿನಂದಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಉಡುಗೊರೆ ನೀಡಿ ಶುಭಾಷಯ ಕೋರಿದ್ದಾರೆ.
ಅದರಂತೆ ಬಹಳ ಕಷ್ಟಪಟ್ಟು- ಇಷ್ಟಪಟ್ಟು ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ವೇದಾಂತ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಅವರು ಆತ್ಮೀಯವಾಗಿ ಸನ್ಮಾನಿಸಿ, ಸಿಹಿ ತಿನ್ನಿಸಿ ಅವರ ಮುಂದಿನ ಶಿಕ್ಷಣಕ್ಕೆ ಶುಭ ಕೋರಿದ್ದಾರೆ. ಇಂತಹ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ, ಇವರನ್ನು ನೋಡಿ ಇತರ ವಿದ್ಯಾರ್ಥಿಗಳೂ ಕಲಿಯಲಿ, ಬೆಸ್ಟ್ ಆಫ್ ಲಕ್ ವೇದಾಂತ್…
– ಮಂಜುನಾಥ.ಎಸ್. ಕಟ್ಟಿಮನಿ
ಹವ್ಯಾಸಿ ಪತ್ರಕರ್ತ ಹಾಗೂ ಲೇಖಕ
ವಿಜಯಪುರ

WhatsApp Group Join Now
Telegram Group Join Now
Share This Article