ಚಂದ್ರನಲ್ಲಿ ನೆಲೆನಿಂತ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಹೊಸ ಚಿತ್ರ ಪ್ರಕಟ!

Ravi Talawar
WhatsApp Group Join Now
Telegram Group Join Now

ನವದೆಹಲಿ (ಮೇ.2):  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಲ್ಯಾಂಡರ್, ವಿಕ್ರಮ್ ಮತ್ತು ಪ್ರಗ್ಯಾನ್ ರೋವರ್ ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಚಂದ್ರನ ಮೇಲ್ಮೈಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅತ್ಯದ್ಬುತವಾದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿದಿದೆ. 2024ರ ಮಾರ್ಚ್‌ 15 ರಂದು ಸ್ವತಂತ್ರ ಸಂಶೋಧಕ ಚಂದ್ರ ತುಂಗತುರ್ಥಿ ಅವರು ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. 2023ರ ಆಗಸ್ಟ್‌ 23 ರಂದು ವಿಕ್ರಮ್ ಲ್ಯಾಂಡರ್‌ ಹಾಗೂ ಪ್ರಗ್ಞಾನ್‌ ರೋವರ್‌ ಚಂದ್ರನ ನೆಲದ ಮೇಲೆ ಇಳಿದ ಬಳಿಕ ಇಸ್ರೋ ಐತಿಹಾಸಿಕ ಫೋಟೋವನ್ನು ಹಂಚಿಕೊಂಡಿತ್ತು. ಆದರೆ, ಹೊಸ ಚಿತ್ರಗಳಲ್ಲಿ ಆರಂಭಿಕ ಚಿತ್ರಗಳು ತೋರಿಸಿದ್ದಕ್ಕಿಂತ ಈ ಪ್ರದೇಶದ ಹೆಚ್ಚಿನ ವಿವರಗಳನ್ನು ತೋರಿಸಿವೆ. ಹೊಸ ಚಿತ್ರಗಳನ್ನು ಮೇಲ್ಮೈ ಪ್ರದೇಶದಿಂದ 65 ಕಿಲೋಮೀಟರ್‌ ಎತ್ತರದಿಂದ ತೆಗೆದುಕೊಳ್ಳಲಾಗಿದೆ.  ಇದು ಪ್ರತಿ ಪಿಕ್ಸೆಲ್‌ಗೆ ಸುಮಾರು 17 ಸೆಂಟಿಮೀಟರ್‌ಗಳ ರೆಸಲ್ಯೂಶನ್‌ಗೆ ಅನುವು ಮಾಡಿಕೊಡುತ್ತದೆ. ಆದರೆ, ಇಸ್ರೋ ಹಂಚಿಕೊಂಡ ಲ್ಯಾಂಡಿಂಗ್‌ ನಂತರದ ಚಿತ್ರಗಳಲ್ಲಿ 100 ಕಿಲೋಮೀಟರ್‌ ಮೇಲಿನಿಂದ ಪ್ರತಿ ಪಿಕ್ಸೆಲ್‌ಗೆ 26 ಸೆಂಟಿಮೀಟರ್‌ ರೆಸಲ್ಯೂಶನ್‌ ಹೊಂದಿರುವ ಚಿತ್ರ ಇದಾಗಿತ್ತು.

ಎರಡು ಸೆಟ್‌ಗಳ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಗಮನಿಸಿದಾಗ ರೆಸಲ್ಯೂಶನ್‌ನಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ವರ್ಧಿತ ಸ್ಪಷ್ಟತೆಯು ಪ್ರಗ್ಯಾನ್ ರೋವರ್‌ನ ಎದ್ದುಕಾಣುವ ನೋಟವನ್ನು ನೀಡಿದೆ. ಇದು ಚಂದ್ರನ ದಕ್ಷಿಣ ಧ್ರುವದ ಬಳಿ ಮೊದಲ ಬಾರಿಗೆ ಸಂಚರಿಸಿದ ಸಣ್ಣ ಭಾರತೀಯ ರೋವರ್ ಎನಿಸಿದೆ.

ಚಂದ್ರನ ಮೇಲ್ಮೈಯನ್ನು ಅಭೂತಪೂರ್ವ ರೆಸಲ್ಯೂಶನ್ ಮಟ್ಟಗಳಾದ 16-17 ಸೆಂಟಿಮೀಟರ್‌ಗಳಲ್ಲಿ ಸೆರೆಹಿಡಿಯುವ ಮೂಲಕ ಇಸ್ರೋ ತನ್ನ ಸಾಮರ್ಥ್ಯವನ್ನು ಮುಂದುವರೆಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ, ಅದರ ಕಕ್ಷೆಯನ್ನು 60-65 ಕಿಲೋಮೀಟರ್‌ಗಳಿಗೆ ಇಳಿಸುವ ಮೂಲಕ ಇದನ್ಉ ಸಾಧಿಸಲಾಗಿದೆ.

2023ರ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಬಂದಿಳಿದ ಚಂದ್ರಯಾನ-3 ಮಿಷನ್ ಭಾರತಕ್ಕೆ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು. ಆ ಮೂಲಕ ಈ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಮತ್ತು ಬಾಹ್ಯಾಕಾಶ ನೌಕೆಯನ್ನು ಮೃದುವಾಗಿ ಇಳಿಸಿದ ನಾಲ್ಕನೇ ದೇಶವಾಗಿದೆ. ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ದೇಶ ಎನಿಸಿದೆ.

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ 14 ಭೂಮಿಯ ದಿನಗಳ ಕಾಲ ಚಂದ್ರನ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿತು, ಇದು ಚಂದ್ರನ ಪರಿಸರದ ಬಗ್ಗೆ ನಮ್ಮ ತಿಳುವಳಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ. ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಯ ಪ್ರಯತ್ನಗಳಿಗೆ ದಾರಿ ಮಾಡಿಕೊಟ್ಟಿತು. “ಇಸ್ರೋ ತನ್ನ ಸಾಮರ್ಥ್ಯಗಳನ್ನು ಈಗಾಗಲೇ ಪ್ರಭಾವಶಾಲಿ ಮಿತಿಗಳನ್ನು ಮೀರಿ ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ವೀಕ್ಷಿಸಲು ನಾನು ವೈಯಕ್ತಿಕವಾಗಿ ತುಂಬಾ ಉತ್ಸುಕನಾಗಿದ್ದೇನೆ” ಎಂದು ಚಂದ್ರು ತಮ್ಮ ಬ್ಲಾಗ್‌ನಲ್ಲಿ ಚಿತ್ರಗಳೊಂದಿಗೆ ಬರೆದಿದ್ದಾರೆ.

WhatsApp Group Join Now
Telegram Group Join Now
Share This Article