ಮೋದಿ ಫೋಟೋ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ: ಕೆಎಸ್ ಈಶ್ವರಪ್ಪ

Ravi Talawar
WhatsApp Group Join Now
Telegram Group Join Now

ಶಿವಮೊಗ್ಗ02: ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದ್ದು, ದೂರು ನೀಡಿದ್ದವರಿಗೆ ಮುಖಭಂಗವಾಗಿದೆ ಎಂದು ಕೆಎಸ್ ಈಶ್ವರಪ್ಪ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನರೇಂದ್ರ ಮೋದಿ ಫೋಟೋ ಬಳಸಬಾರದು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಇದೀಗ ಮೋದಿ ಫೋಟೋ ಬಳಸಬೇಡಿ ಎಂದು ದೂರು ನೀಡಿದವರಿಗೆ ಮುಖಭಂಗವಾಗಿದೆ. ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜೀವನ ಪೂರ್ತಿ ಅವರ ಫೋಟೋ ಬಳಸುತ್ತೇನೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದರು.

ಬಹಳ ಸಂತೋಷದ ವಿಷಯವೆಂದರೆ ವಿಶ್ವ ನಾಯಕ ನನ್ನ ಜೊತೆ ಉಳಿದಿರುವುದು. ನರೇಂದ್ರ ಮೋದಿ‌ ನನ್ನ ಜೊತೆ ಉಳಿದರೆ ಅದೇ ನನಗೆ ಆನಂದ. ಈಶ್ವರಪ್ಪ ಮೋದಿ ಪೋಟೋ ಬಳಸುತ್ತಿದ್ದಾರೆಂದು ಬಿಜೆಪಿಯವರು ‌ಕೋರ್ಟ್​​​​ಗೆ ಹೋಗಿದ್ದರು. ಚುನಾವಣಾ ಆಯೋಗ, ಕೋರ್ಟ್ ಅವರಿಗೆ ಸೊಪ್ಪು ಹಾಕಲಿಲ್ಲ. ಮೋದಿ ಅವರನ್ನು ನನ್ನ ಹೃದಯದಲ್ಲಿ ‌ಇಟ್ಟುಕೊಂಡಿದ್ದೇನೆ. ಮೋದಿಯವರಿಗೆ ಅಪಮಾನ ಮಾಡಬಾರದು. ಗಣಪತಿ, ಈಶ್ವರನನ್ನು ಎಲ್ಲರೂ ಪೂಜೆ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಪೋಟೋ ‌ಇಟ್ಟುಕೊಳ್ಳಬೇಡಿ‌ ಅಂದರೆ ಹೇಗೆ? ಮೋದಿ ಅವರು ನನಗೆ ಮಾದರಿ ವ್ಯಕ್ತಿ, ಆದರ್ಶ ವ್ಯಕ್ತಿ. ನನ್ನ ಜೀವನಪೂರ್ತಿ ಮೋದಿ ಪೋಟೋ ಇಟ್ಟುಕೊಳ್ಳುತ್ತೇನೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ನನ್ನನ್ನು ಮೋದಿಯವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಪೋಟೋ ‌ಬಳಸಲು ಹಿಂದೂ ಸಮಾಜಕ್ಕೆ ಅವಕಾಶ ಇದೆ. ನಾನು ಚುನಾವಣೆಗೆ ‌ಪೂರ್ಣ ಪ್ರಮಾಣದಲ್ಲಿ ‌ಮೋದಿ ಪೋಟೋ ಬಳಸುತ್ತೇನೆಂದು ತಿಳಿಸಿದರು.

WhatsApp Group Join Now
Telegram Group Join Now
Share This Article