ಅಂಬೇಡ್ಕರ್ ಮೂರ್ತಿಗೆ ಅಪಮಾನ ಪ್ರಕರಣ ಸಿಐಡಿಗೆ ನೀಡಲು ತೀರ್ಮಾನ: ಸಚಿವ ಡಾ.ಜಿ ಪರಮೇಶ್ವರ

Ravi Talawar
WhatsApp Group Join Now
Telegram Group Join Now

ಕಲಬುರಗಿ, ಮೇ.02: ಅಂಬೇಡ್ಕರ್ ಮೂರ್ತಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಾಮೀನಿನ ಮೇಲೆ ಹೊರಬಂದಿದ್ದನು. ಈ ಹಿನ್ನಲೆ 50 ರಿಂದ 60 ಜನರ ಗುಂಪೊಂದು ಆತನ ಮನೆ ಮೇಲೆ ದಾಳಿ ಮಾಡಿತ್ತು. ಇದೀಗ ಹಲ್ಲೆ ನಡೆದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಂಪೂರ್ಣ ಸತ್ಯಾಂಶ ಹೊರಬರಬೇಕು ಎಂದು ಸಿಐಡಿಗೆ ನೀಡಲು ತೀರ್ಮಾನ ಮಾಡಿದ್ದೆವೆ. ಬಿಜೆಪಿಯವರು ಇದನ್ನ ರಾಜಕೀಯ ಅಸ್ತ್ರ ಮಾಡಿಕೊಳ್ಳೊಕೆ ಬಿಡೋದಿಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಹೇಳಿದ್ದಾರೆ.

ಕಲಬುರಗಿ ನಗರದ ಹೊರವಲಯದ ಕೊಟನೂರು ಡಿ ಗ್ರಾಮದ ಬಳಿ ಕಳೆದ ಜನವರಿ 22ರ ರಾತ್ರಿ ಅಂಬೇಡ್ಕರ್ ಪ್ರತಿಮೆಗೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದರು. ಈ ಹಿನ್ನಲೆ ಆ ಭಾಗದಲ್ಲಿ ಆಕ್ರೋಶ ಭುಗಿಲೆದಿತ್ತು. ಅಂಬೇಡ್ಕರ್‌ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದರಿಂದ ಆಕ್ರೋಶಗೊಂಡಿದ್ದ ವಿವಿಧ ದಲಿತ ಸಮುದಾಯದವರು ರಸ್ತೆ ತಡೆದು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿ ಸಂಗಮೇಶ್​ನನ್ನು ಬಂಧಿಸಿದ್ದರು. ಇದೇ ಮಂಗಳವಾರ ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್‌ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ‌ ಮೇಲೆ ಹೊರ ಬಂದಿದ್ದ ಸಂಗಮೇಶ್‌ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್‌ ದಾಳಿ ಮಾಡಿತ್ತು.

WhatsApp Group Join Now
Telegram Group Join Now
Share This Article