ಸಮಾಜವಾದಿ ಪಕ್ಷದಿ ಪ್ರಣಾಳಿಕೆ ಬಿಡುಗಡೆ: ರೈತರ ಸಾಲ ಮನ್ನಾ, ಮಹಿಳೆಯರಿಗೆ ಶೇ.33 ಮೀಸಲಾತಿ

Ravi Talawar
WhatsApp Group Join Now
Telegram Group Join Now

ದೆಹಲಿ, .10: ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಕಾಪಾಡುವುದು, ಮಾಧ್ಯಮ ಸ್ವಾತಂತ್ರ್ಯ ಇತ್ಯಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ.

2025ರಲ್ಲಿ ಜಾತಿ ಗಣತಿ ಹಾಗೂ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸಲಾಗುವುದು, ಹಾಲು ಸೇರಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್​ಪಿ ಕಲ್ಪಿಸಲಾಗುವುದು, ಕಾನೂನಿನ ಭರವಸೆ ಸೇರಿದಂತೆ ರೈತರಿಗೆ ಉಚಿತ ನೀರಾವರಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಹಾಗೂ ಉಚಿತ ಶಿಕ್ಷಣ ನೀಡಲಾಗುವುದು, ಜಿಡಿಪಿಯನ್ನು ಮೂರರಿಂದ ಆರಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. -ವರ್ಷಾಂತ್ಯದೊಳಗೆ ರೈತರ ಸಾಲ ಮನ್ನಾ -ರೈತ ಆಯೋಗ ರಚನೆ -ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ -ಪ್ರತಿ 10 ಕಿ.ಮೀಗೆ ಕೃಷಿ ಮಾರುಕಟ್ಟೆ ನಿರ್ಮಾಣ -ಯುವಕರಿಗೆ ಲ್ಯಾಪ್​ಟಾಪ್​, ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವಿಕೆ -ಉಚಿತ ಪಡಿತರದಲ್ಲಿ ಗೋಧಿ ಹಿಟ್ಟಿನ ಬದಲಿಗೆ ಹಿಟ್ಟು ನೀಡಲಾಗುವುದು -ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ 500 ರೂ. ಉಚಿತ ಮೊಬೈಲ್ ಡೇಟಾ. -ಬಡ ಮಹಿಳೆಯರಿಗೆ ಮಾಸಿಕ 3000 ರೂ. ಪಿಂಚಣಿ -ಪಿಜಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ

WhatsApp Group Join Now
Telegram Group Join Now
Share This Article