ಹಾವೇರಿ ಲೋಕಸಭಾ ಕ್ಷೇತ್ರ : ೨೬ ಅಭ್ಯರ್ಥಿಗಳಿಂದ ೪೭ ನಾಮಪತ್ರ

Hasiru Kranti
WhatsApp Group Join Now
Telegram Group Join Now

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಒಟ್ಟು ೨೬ ಅಭ್ಯರ್ಥಿಗಳಿಂದ ೪೭ ನಾಮಪತ್ರಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಕೊನೆಯ ದಿನವಾದ ಶುಕ್ರವಾರ ಒಂಬತ್ತು ಅಭ್ಯರ್ಥಿಗಳಿಂದ ೨೦ ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್‌ಹಾಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸವರಾಜ ಸೋಮಪ್ಪ ಬೊಮ್ಮಾಯಿ(ಎರಡು), ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿಯಾಗಿ ಶ್ರೀಮತಿ ರಶಿದಾಬೇಗಂ, ಬಿಎಸ್‌ಪಿ ಅಭ್ಯರ್ಥಿಯಾಗಿ ಅಶೋಕ ಮರಿಯಣ್ಣನವರ್, ಏಕಂ ಸನಾತನ ಭಾರತ ದಳದಿಂದ ವಿಶ್ವನಾಥ್ ಶೀರಿ, ಶುಭ ಕರ್ನಾಟಕ ಅಭ್ಯರ್ಥಿಯಾಗಿ ವಾಸು ಮಜಲಿ, ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀಮತಿ ಸುನಂದಾ ಶಿರಹಟ್ಟಿ, ಜಗದೀಶ ಬಂಕಾಪುರ, ಸಣ್ಣ ಮೌಲಾಸಾಬ್ ಗಣಜೂರ್, ವೀರಭದ್ರಪ್ಪ ಕಬ್ಬಿಣದ, ಮಂಜುನಾಥ್ ಪಂಚಾನನ, ರುದ್ರಪ್ಪ ಕುಂಬಾರ, ಸಿದ್ದಪ್ಪ ಕಲ್ಲಪ್ಪ ಪೂಜಾರ್ , ಬಸವರಾಜ ಹಾದಿ, ಮಹ್ಮದ ಹನೀಪಸಾಬ ಸಣ್ಣಪೀರಸಾಬ ಕಲ್ಲಂಗಡಿ, ಜಗದೀಶ ಬಂಕಾಪುರ, ಅನಿಲ್ ಶಂಕ್ರಪ್ಪ ಗುಂಜಳ ಹಾಗೂ ಶಿದ್ದಪ್ಪ ಹೊಸಳ್ಳಿ , ಮಹಮ್ಮದ್ ಶಫಿ ಪಾಟೀಲ, ಸಲೀಂ ಅಕ್ಬರ್ ನಾಯಕ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ ೩ ರಿಂದ ಸಂಜೆ ೫-೩೦ರ ವರೆಗೆ ನಾಮಪತ್ರ ಹಿಂಪಡೆಯಬಹುದು ಏಪ್ರಿಲ್ ೨೨ರ ಬೆಳಿಗ್ಗೆ ೧೧ ರಿಂದ ೩ ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ್ದರೆ ಕಾಂಗ್ರೆಸ್ ನಿಂದ ಆನಂದಸ್ವಾಮಿ ಗಡ್ಡದೇವರಮಠ ನಾಮಪತ್ರ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article