ಹಿರಿಯ ಕಲಾವಿದ ದ್ವಾರಕೀಶ್ ನಿಧನಕ್ಕೆ ಡಾ. ಪ್ರಭಾಕರ್ ಕೋರೆ ಕಂಬನಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏ.16: ನಾಡು ಕಂಡ ಅಪರೂಪದ ಶ್ರೇಷ್ಠ ಕಲಾವಿದ, ನಿರ್ಮಾಪಕ, ನಿರ್ದೇಶಕ ದ್ವಾರ್ಕೀಶ್ ದಿನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಚಲನಚಿತ್ರರಂಗದಲ್ಲಿ ನಟ ದ್ವಾರಕೀಶ್ ಅವರು ನೀಡಿರುವ ಕೊಡುಗೆ ಅನುಪಮವೆನಿಸಿದೆ. ಡಾ. ರಾಜಕುಮಾರ್ ಅವರಷ್ಟೇ ಸಮಾನವಾಗಿ ಪಾತ್ರಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ ಅವರು ಕುಟುಂಬ ಹಾಗೂ ಸಮಾಜಮುಖಿಯಾದ ಚಲನಚಿತ್ರಗಳನ್ನು ಮಾಡಿದರು. ಯಾವುದೇ ಪಾತ್ರವಿದ್ದರೂ ಅದಕ್ಕೆ  ಜೀವತುಂಬ ಕೆಲಸವನ್ನು ಮಾಡಿದರು.

ಅವರ ಹಾಸ್ಯ ಪ್ರಧಾನವಾದಂತಹ ಪಾತ್ರಗಳು ಕನ್ನಡ ಕಲಾಭಿಮಾನಿಗಳಿಗೆ ಹಸಿರಾಗಿ ಉಳಿದಿದೆ. ಪ್ರಥಮ ಬಾರಿಗೆ ವಿದೇಶದಲ್ಲಿಯೂ ಕೂಡ ಚಿತ್ರಗಳನ್ನು ತೆಗೆದ ದ್ವಾರಕೀಶ್ ಅವರು ಒಂದು ಕಾಲಘಟ್ಟದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಅಘಾತವಾಗಿ ವಿಸ್ತರಿಸಿ, ಅದರ ಘನತೆಯನ್ನು ಹೆಚ್ಚಿಸಿದರು.

ಗುರುಶಿಷ್ಯರು, ಸಿಂಗಾಪುರದಲ್ಲಿ ರಾಜಾಕುಳ್ಳ, ಆಪ್ತಮಿತ್ರ ನೂರಾರು ಮರೆಯಲಾಗದ ಅವರ ಚಿತ್ರಗಳು ಕಣ್ಣು ಮುಂದೆ ಸುಳಿದು ಹೋಗುವೆ. ದಕ್ಷಿಣ ಭಾರತ ಚಲನಚಿತ್ರ ರಂಗದಲ್ಲಿ ಬಿರುಗಾಳಿಯನ್ನು ಉಂಟು ಮಾಡಿದ್ದ ದ್ವಾರ್ಕೀಶ ಬದುಕಿನಲ್ಲಿ ಹಲವಾರು ಏರುಪೇರುಗಳನ್ನು  ಕಂಡರೂ ಧೃತಿಗೆಡದೆ ಕನ್ನಡ ಚಲನಚಿತ್ರ  ಕ್ಷೇತ್ರವನ್ನು ಪೋಷಿಸಿ ಬೆಳೆಸಿದರು. ಅವರ ಅಗಲಿಕೆ ಸಿನಿಮಾ ರಂಗವನ್ನು, ಸಮಸ್ತ ನಾಡಿನ ಜನತೆಯನ್ನು ಬಡವಾಗಿಸಿದೆ. ಭಗವಂತನ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಡಾ.ಕೋರೆಯವರು ಪ್ರಾರ್ಥಿಸಿದ್ದಾರೆ.

WhatsApp Group Join Now
Telegram Group Join Now
Share This Article