ಚಿತ್ರಕಲೆಯೆನ್ನುವುದು ಜಾತಿ ಮತ ಪಂತವನ್ನು ಮೀರಿದ್ದು: ಡಾ. ಪಿ.ಜಿ. ಕೆಂಪಣ್ಣವರ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್16: ಚಿತ್ರಕಲಾಕ್ಷೇತ್ರಕ್ಕೆ ಜಾತಿ, ಮತ, ಪಂತ ಎಂಬುದಿರುವುದಿಲ್ಲ. ಕಲೆಯೆನ್ನುವುದು ಅವುಗಳನ್ನೆಲ್ಲ ಮೀರಿ ನಿಂತಿದೆ. ಕಲೆಗೆಂದೂ ಸೋಲಿಲ್ಲ. ಸಕರ್ಾರ ಕಲಾವಿದರನ್ನು ಗುರುತಿಸಲು ವಿಫಲವಾದಾಗ ಇಂಥ ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತವೆ. ಇದೊಂದು ಅಭಿಮಾನದ ಸಂಗತಿ. ಎಲೆಮರೆ ಕಾಯೆಯಂತಿರುವ ಕಲಾವಿದರನ್ನು ಬೆಳಕಿಗೆ ತರುತ್ತಿರುವ ವರ್ಣಕಲಾ ಸಾಂಸ್ಕೃತಿಕ ಸಂಘ ಮತ್ತು ಶ್ರೀಮಾತಾ ಗ್ಲಾಸ್ ಆರ್ಟ ಗ್ಯಾಲರಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಉಪನ್ಯಾಸಕರಾದ ಡಾ, ಪಿ. ಜಿ. ಕೆಂಪಣ್ಣವರ ಇಂದಿಲ್ಲಿ ಹೇಳಿದರು.

ಬೆಳಗಾವಿಯ ತಿಲವಾಡಿಯ ಎರಡನೇ ರೇಲ್ವೆಗೇಟ್  ಹತ್ತಿರವಿರುವ ಕಲಾಮಹಷರ್ಿ ಕೆ. ಬಿ. ಕುಲಕಣರ್ಿ ಆರ್ಟ ಗ್ಯಾಲರಿ (ವಾರೇಕರ ನಾಟ್ಯ ಸಂಘ) ಸಭಾ ಭವನದಲ್ಲಿ ವರ್ಣಕಲಾ ಸಾಂಸ್ಕೃತಿಕ ಸಂಘ ಮತ್ತು ಶ್ರೀಮಾತಾ ಗ್ಲಾಸ್ ಆರ್ಟ ಗ್ಯಾಲರಿ ಸಂಘಟನೆಯವರಿಂದ ಇದೇ ದಿ. 14 ಮತ್ತು 15 ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಉದ್ಘಾಟನೆ, ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳ ಚಿತ್ರಗಳ ಆಯ್ಕೆ- ಸ್ಪಧರ್ೆ ವರ್ಣಕಲಾ ಪ್ರಶಸ್ತಿ ಪ್ರದಾನ 2023-24   ಜರುಗಿದವು.  ವರ್ಣಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಡಾ. ಕೆಂಪಣ್ಣವರ ಮೇಲಿನಂತೆ ಅಭಿಪ್ರಾಯ ಪಟ್ಟರು.

ಮುಂದೆ ಮಾತನಾಡುತ್ತ ಡಾ. ಕೆಂಪಣ್ಣವರ ಅವರು, ಚಿತ್ರಕಲಾ ಕ್ಷೇತ್ರದಲ್ಲಿ ಬೆಳಗಾವಿಯದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಚಂದ್ರಕಾಂತ ಕುಸನೂರ, ಕೆ. ಬಿ. ಕುಲಕಣರ್ಿ ಮುಂತಾದವರು ಈ ಕ್ಷೇತ್ರದಲ್ಲ ವಿಶೇಷವಾದ ಕೆಲಸವನ್ನು ಮಾಡಿದ್ದಾರೆ ಆ ಪರಂಪರೆಯನ್ನು ನಗರದ ವರ್ಣಕಲಾ ಸಾಂಸ್ಕೃತಿಕ  ಸಂಘ ಮತ್ತು ಶ್ರೀಮಾತಾ ಗ್ಲಾಸ್ ಆರ್ಟ ಗ್ಯಾಲರ್ ಯವರು ಮುಂದರೆವರಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ.

2023-24 ನೇ ಸಾಲಿನ ವರ್ಣಕಲಾಶ್ರೀ ಪ್ರಶಸ್ತಿಗೆ ಭಾಜನರಾದ ಗಣೇಶ ದೊಡಮನಿ, ಸಚ್ಚಿನ ಉಪಾಧ್ಯೆ, ಚಂದ್ರಶೇಖರ ಯಡ್ರಾಮಿ, ರಮೇಶ ಸಾಸನೂರ, ರಾಜಕುಮಾರ ಯಲಸ್ಕಂಗಿಕರ, ಅಜಿತ ಹುಲಮನಿ ಮತ್ತು ವಿಶ್ವಕಲಾ ಕಲಾದಿನ ಪ್ರಶಸ್ತಿ ಪುರಸ್ಕೃತರಾದ ಅತಿಫ್ ಪಾಚಾಪುರಿ ರನ್ನು ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಅಂತರರಾಷ್ಟ್ರೀಯ ಕಲಾವಿದರಾದ ಡಾ, ವಿಜಯ ಹಗರಗುಂಡಗಿಯವರು ಸಮಾರಂಭವನ್ನು ಉದ್ಘಾಟಿಸದರು. ಹಿರಿಯ ಚಿತ್ರಕಲಾವಿದರಾದ ಜಗಧೀಶ ಕುಂಟೆ, ಸುಭಾಷ ದೇಸಾಯಿ, ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಅಧ್ಯಕ್ಷರಾದ ನಾಗೇಶ ಚಿಮರೊಲ, ಕಾರ್ಯದಶರ್ಿ ಸಂತೋಷ ಮಲ್ಲೊಳ್ಳಿ, ರವೀಂದ್ರ ಹೋಮಕರ, ಭಾಸ್ಕರ ಪಾಟೀಲ, ಸುಶೀಲ ತರಬರ, ಭರಮಣ್ಣ ವೇತಾಳ, ರೇಹಮತುಲ್ಲಾಹ ಶಿಂದೊಳಕರ, ಸ್ವೇತಾ ಪಾಟೀಲ, ಕೇಶವ್ವಾ ಎಸ್. ವಾಲಿ ಮುಂತಾದವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ದಿಲೀಪಕುಮಾರ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಮಣ್ಣ ಕಟಂಬಳೆ ನಿರೂಪಿಸಿದರು.

WhatsApp Group Join Now
Telegram Group Join Now
Share This Article