ನಾಳೆಯಿಂದ 36 ನೇ ವೇದಾಂತ ಪರಿಷತ್ ಮತ್ತು ಶ್ರೀ ಸಿದ್ದಾರೂಢರ ಜಾತ್ರೋತ್ಸವ

Ravi Talawar
WhatsApp Group Join Now
Telegram Group Join Now
ನೇಸರಗಿ,ಏಪ್ರಿಲ್ 12 :  ಇಲ್ಲಿಗೆ ಸಮೀಪದ ಮುರಕಿಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಅವಧೂತ  ಸಿದ್ದಾರೂಢ ಮಹಾಸ್ವಾಮಿಗಳ ಮಠದ 36 ನೇ ವೇದ್ಧಾಂತ ಪರಿಷತ್ ಹಾಗೂ ಶ್ರೀ ಸಿದ್ದಾರೂಢ  ಮಹಾಸ್ವಾಮಿಗಳ ಜಾತ್ರಾ ಮಹೋತ್ಸವವು   ಶನಿವಾರ ದಿ.13-4-2024 ರಿಂದ 17-4-2024 ರ ವರೆಗೆ ಜರುಗಲಿದೆ.
ದಿ.13 ರಂದು ಮಹಾಪುಜೆ, ರುಧ್ರಭಿಷೇಕ, ಅಗ್ನಿಕುಂಡ್ ಪೂಜೆ, ಪ್ರಣವ ಧ್ವಜಾರೋಹಣ ಪ್ರತಿದಿನ ಬೆಳಿಗ್ಗೆ 6-30 ರಿಂದ 7-30  ಮತ್ತು ಸಂಜೆ 7 ರಿಂದ 10 ಗಂಟೆಯವರೆಗೆ ಅನೇಕ ಶರಣರಿಂದ ಶ್ರೀ ಭಗವದ್ಗೀತ ಪಾರಾಯಣ ನಡೆಯಲಿದೆ.
ಈ ಜಾತ್ರೆಯ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಹಾಗೂ ಸಾನಿಧ್ಯವನ್ನು ಹುಬ್ಬಳ್ಳಿ ಜಡಿಮಠದ ರಾಮಾನಂದ ಭಾರತಿ ಮಹಾಸ್ವಾಮಿಗಳು ವಹಿಸಲಿದ್ದಾರೆ.ಪ್ರತಿದಿನ  ಪ್ರವಚನ ಕಾರ್ಯಕ್ರಮದಲ್ಲಿ ಹಂಪಿಯ  ವಿದ್ಯಾನಂದ ಭಾರತಿ ಶ್ರೀಗಳು, ಕುಳ್ಳೂರಿನ  ಶ್ರೀ ಬಸವಾನಂದ ಭಾರತಿ ಶ್ರೀಗಳು, ಹರಳಕಟ್ಟಿಯ ಅಭಿನವ ರೇವಣಸಿದ್ದೇಶ್ವರ್ ಶ್ರೀಗಳು, ಇಂಚಲದ ಪೂರ್ಣನಂದ ಶ್ರೀಗಳು, ಮಲ್ಲಾಪೂರ ನೇಸರಗಿ ಗಾಳೇಶ್ವರ  ಮಠದ ಚಿದಾನಂದ ಶ್ರೀಗಳು,ದಾವಣಗೆರೆಯ ಶಿವಾನಂದ ಭಾರತಿ ಶ್ರೀಗಳು, ಸವಠಗಿಯ ನಿಂಗಯ್ಯ ಶ್ರೀಗಳು, ಶಂಕರಹಟ್ಟಿಯ ಶಂಕರಾನಂದ ಶರಣರು ಪಾಲ್ಗೊಳ್ಳಲಿದ್ದಾರೆ.
ದಿ 16 ರಂದು ಗ್ರಾಮದೇವಿಗೆ ಊಡಿ ತುಂಬುವದು, ಸಂಜೆ 5 ಕ್ಕೆ ಕಳಸಾರೋಹನ ನೆರವೇರಲಿದೆ. ದಿ.17 ರಂದು ಸಿದ್ದಾರೂಢರ ಪಲ್ಲಕ್ಕಿ ಉತ್ಸವ, ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳ ಭವ್ಯ ಮೆರವಣಿಗೆ, ಸದ್ಗುರು ಸಿದ್ದಾರೂಢರ ತೊಟ್ಟಿಲೋತ್ಸವ ಮದ್ಯಾನ್ಹ 12 ಕ್ಕೆ ಸಾಮೂಹಿಕ ವಿವಾಹ ಮತ್ತು ಸಂಜೆ 5 ಕ್ಕೆ ಮಹಾ ರತೋತ್ಸವ ನಡೆಯಲಿದೆ. ರಾತ್ರಿ ಡಾ ಶಿವಾನಂದ ಮಹಾಸ್ವಾಮಿಗಳ ತುಲಾಭಾರ ಸೇವೆ, ಕನಕ ಕಿರೀಟ ಕಾರ್ಯಕ್ರಮ ಜರುಗುವದು. ದಿ 18 ರಂದು ಸದ್ಗುರು ಸಿದ್ದಾರೂಢರ  ಕೌದಿ ಪೂಜೆ, ಪ್ರತಿದಿನ ಭಜನಾ ಪದಗಳು ಜರುಗಲಿವೆ ಎಂದು ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article