ಪೂರ್ವ ಕಾಂಗೋದ ಶಿಬಿರಗಳ ಮೇಲೆ ಬಾಂಬ್ ದಾಳಿ: ಮಕ್ಕಳು ಸೇರಿ12 ಜನರ ಸಾವು

Ravi Talawar
WhatsApp Group Join Now
Telegram Group Join Now

ಗೋಮಾ: ಪೂರ್ವ ಕಾಂಗೋದ ಉತ್ತರ ಕಿವು ಪ್ರಾಂತ್ಯದ ಸ್ಥಳಾಂತರಗೊಂಡ ನಿರಾಶ್ರಿತರ ಎರಡು ಶಿಬಿರಗಳ ಮೇಲೆ ಶುಕ್ರವಾರ ಬಾಂಬ್​ ದಾಳಿಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಿವು ಪ್ರಾಂತೀಯ ರಾಜಧಾನಿ ಗೋಮಾ ನಗರದ ಸಮೀಪವಿರುವ ಲ್ಯಾಕ್ ವರ್ಟ್ ಮತ್ತು ಮುಗುಂಗಾದಲ್ಲಿ ನಿರಾಶ್ರಿತರ ಎರಡು ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ಮಾನವ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದು ಯುದ್ಧ ಅಪರಾಧವಾಗಿದೆ ಎಂದು ವಿಶ್ವಸಂಸ್ಥೆ ಕಿಡಿಕಾರಿದೆ.

ಕಾಂಗೋಲೀಸ್ ಸೇನೆಯ ವಕ್ತಾರ, ಲೆಫ್ಟಿನೆಂಟ್ ಕರ್ನಲ್ ಎನ್​ ಕೈಕೋ ಪ್ರತಿಕ್ರಿಯಿಸಿ, ರುವಾಂಡಾ ಜೊತೆ ಆಪಾದಿತ ಸಂಪರ್ಕಗಳನ್ನು ಹೊಂದಿರುವ M23 ಎಂದು ಕರೆಯಲ್ಪಡುವ ಬಂಡುಕೋರರು ಈ ದಾಳಿ ನಡೆದಿದೆ ಎಂದು ಆರೋಪಿಸಿದರು. ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಜೀನ್ ಜೊನಾಸ್ ಯೋವಿ ಟೊಸ್ಸಾ ತಿಳಿಸಿದರು.

WhatsApp Group Join Now
Telegram Group Join Now
Share This Article