ಏಕತೆ ಮೂಡಿಸುವಲ್ಲಿ ಜಗಜೀವನರಾಮ ಅವರ ಪಾತ್ರ ಮಹತ್ವದ್ದಾಗಿತ್ತು: ತಹಶೀಲ್ದಾರ ಪರಮಾನಂದ ಮಂಗಸೂಳಿ

Ravi Talawar
WhatsApp Group Join Now
Telegram Group Join Now

ರಾಯಬಾಗ,ಏಪ್ರಿಲ್​ 05: : ಸ್ವಾತಂತ್ರö್ಯ ನಂತರದ ಸಮಾಜದಲ್ಲಿ ಎಲ್ಲ ಜನರಲ್ಲಿ ಏಕತೆ ಮೂಡಿಸುವಲ್ಲಿ ಡಾ.ಬಾಬು ಜಗಜೀವನರಾಮ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಗ್ರೇಡ್-2 ತಹಶೀಲ್ದಾರ ಪರಮಾನಂದ ಮಂಗಸೂಳಿ ಹೇಳಿದರು.

ಶುಕ್ರವಾರ ಪಟ್ಟಣದ ತಾ.ಪಂ.ಸಭಾಭವನದ ಆವರಣದಲ್ಲಿ  ತಾಲೂಕಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊAಡಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮರವರ 117ನೇ ಜಯಂತಿ ಸಮಾರಂಭದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅತ್ಯುನ್ನತ್ತ ರಾಜಕೀಯ ಮುತ್ಸದಿಯಾಗಿದ್ದ
ಬಾಬುಜೀಯವರು ತಮ್ಮ ಅಧಿಕಾರವಧಿಯಲ್ಲಿ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ದೇಶ ದಲ್ಲಿ ಹಸಿರು ಕ್ರಾಂತಿ ಮಾಡಿ ಹಸಿರು ಕ್ರಾಂತಿ ಹರಿಕಾರ ಎನ್ನಿಸಿಕೊಂಡಿದ್ದಾರೆ. ಅಂತವಹ ಜೀವನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆಯಬೇಕೆAದರು.

ಬೆಳಿಗ್ಗೆ ಪಟ್ಟಣದ ಬಾಬು ಜಗಜೀವನರಾಮ ಭವನದ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಮ್ ಪುತ್ಥಳಿಗೆ ತಹಶೀಲ್ದಾರ ಪ್ರಶಾಂತ ಚನಗೊಂಡ, ಟಿಎಚ್‌ಒ ಡಾ.ಎಸ್.ಎಮ್.ಪಾಟೀಲ, ಸಿಡಿಪಿಒ ಸಂತೋಷ ಕಾಂಬಳೆ ಅವರು ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ತಾ.ಪಂ.ಇಒ ಆನಂದಕುಮಾರ ಬಾಳಪ್ಪನ್ನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ, ಬಿಇಒ ಬಸವರಾಜಪ್ಪ ಆರ್., ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಉದಯ ರೆಡ್ಡಿ, ಉಪನ್ಯಾಸಕಿ ಕವಿತಾ ಕಾಂಬಳೆ, ಕಲ್ಪನಾ ಕಾಂಬಳೆ,

ಮುಖAಡರಾದ ಮಹೇಶ ಕರಮಡಿ, ರಾಕೇಶ ಅವಳೆ, ಉಮೇಶ ಪೂಜಾರಿ, ಮಹೇಶ ಮಾಂಗ, ಅಶೋಕ ಮರೆಪ್ಪಗೊಳ, ಪಿಂಟು ದಾವನೆ, ನಾರಾಯಣ ಟೊಂಬ್ರೆ ಸೇರಿದಂತೆ ಅನೇಕರು ಇದ್ದರು.  ಆನಂದಕುಮಾರ ಬಾಳಪ್ಪನ್ನವರ, ವಿ.ಎಸ್.ಚಂದರಗಿ, ಬಸವರಾಜಪ್ಪ ಆರ್., ಎಸ್.ಎಸ್.ಪಾಟೀಲ, ಕವಿತಾ ಕಾಂಬಳೆ, ಕಲ್ಪನಾ ಕಾಂಬಳೆ ಇದ್ದರು.

WhatsApp Group Join Now
Telegram Group Join Now
Share This Article