ಮೈದೂರು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಶಿವಮ್ಮ ಆಯ್ಕೆ

Ravi Talawar
WhatsApp Group Join Now
Telegram Group Join Now

ಹರಪನಹಳ್ಳಿ,ಏಪ್ರಿಲ್ 10: ತಾಲೂಕಿನ ಚಿಗಟೇರಿ ಹೋಬಳಿಯ ಮೈದೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಏ.06 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಮ್ಮ ಅವರು  ಆಯ್ಕೆಯಾಗಿದ್ದಾರೆ.

ಮೈದೂರು ಗ್ರಾಮದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಶಿವಮ್ಮ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ನೂತನವಾಗಿ ಆಯ್ಕೆಯಾದ ಶಿವಮ್ಮ ಇವರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಇವರು ಶುಭ ಕೋರಿರುತ್ತಾರೆ.

ಮೈದೂರು ಗ್ರಾಮ ಪಂಚಾಯಿತಿಗೆ ಅದ್ಯಕ್ಷರ ಆಯ್ಕೆಗಾಗಿ ತಹಶೀಲ್ದಾರ್ ಬಿ.ವಿ.ಗೀರಿಶ್ ಬಾಬು ಚುನಾವಣಾಧಿಕಾರಿಯಾಗಿ ಅಗಮಿಸಿದ್ದರು. ಈ ವೇಳೆ ಚಿಗಟೇರಿ ಬ್ಲಾಕ್ ಅದ್ಯಕ್ಷ ಕೆ.ಕುಬೇರಪ್ಪ,  ಮುಖಂಡರುಗಳಾದ ಎಚ್.ದಿವಾಕರ, ತಾ.ಪಂ.ಮಾಜಿ ಸದಸ್ಯ ಓ ರಾಮಪ್ಪ,  ಯೋಗೇಶ್ವರ ಗೌಡ,  ಡಿ.ನಿಂಗನಗೌಡ,  ಆರ್ ಲೋಕೇಶ್ ಗೌಡ,  ಕೆಸರಹಳ್ಳಿ ನಾಗರಾಜ, ವಿಜಯ್ ಕುಮಾರ್, ದುರ್ಗಪ್ಪ,  ಬಿ.ಎಚ್. ಶಿವಕುಮಾರ್,  ಸರಸ್ವತಿ, ನಾಗಮ್ಮ, ನಾಗವೇಣಿ, ಮಹಾಲಿಂಗಯ್ಯ, ಚಂದ್ರಪ್ಪ,  ಮಂಜಮ್ಮ, ಮದ್ದಾನಪ್ಪ, ಮಾನಸ, ಕೆ ನಿಂಗಪ್ಪ, ಸೊಲ್ಲಪ್ಪ ಹನುಮನ ಗೌಡ, ಲಿಂಗೇಶ್ವರ ಗೌಡ  ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article