ಲೈಂಗಿಕ ದೌರ್ಜನ್ಯ ಆರೋಪ: ಮೇ 3 ರಂದು ಜರ್ಮನಿಯಿಂದ ಪ್ರಜ್ವಲ್​ ರೇವಣ್ಣ ರಾಜ್ಯಕ್ಕೆ ವಾಪಸ್​

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಮೇ 01: ಮಹಿಳೆಯರ ಮೇಲೆ ಲೈಗಿಂಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಶುಕ್ರವಾರ (ಮೇ 03)ರ ಮಧ್ಯರಾತ್ರಿ ರಾಜ್ಯಕ್ಕೆ ಮರಳಲಿದ್ದಾರೆ. ಪ್ರಜ್ವಲ್​ ರೇವಣ್ಣ ಅವರು ಜರ್ಮನಿಯ ಫ್ರಾಂಕ್​ಫರ್ಟ್ ತೆರಳಿದ್ದು, ಬೆಂಗಳೂರಿಗೆ ರಿಟರ್ನ್​ ಟಿಕೆಟ್ ಬುಕ್​ ಮಾಡಿದ್ದಾರೆ. ಮೇ3 ರಂದು ಮಧ್ಯಾಹ್ನ 1.30ಕ್ಕೆ ವಿಮಾನ ಫ್ರಾಂಕ್​ಫರ್ಟ್​ನಿಂದ ಹೊರಡಲಿದ್ದು,​​ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಆಗಮಿಸಲಿದ್ದಾರೆ ಎಂದು ಟಿವಿ9 ಡಿಜಿಟಲ್​ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್​ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ಅವರು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (SIT) ನೋಟಿಸ್​ ನೀಡಿದೆ. ವಿಶೇಷ ತನಿಖಾ ತಂಡ ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ತಂಡ ರಚಿಸಿದೆ.  ಸಂತ್ರಸ್ತೆಯರ ವಿಚಾರಣೆಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿದೆ. ಪೊಲೀಸರು  ವೀಡಿಯೋ ದಲ್ಲಿರುವ ಐವರು ಮಹಿಳೆಯರಿಂದ ಮಾಹಿತಿ ಕಲೆ ಹಾಕಲು ಯತ್ನಿಸುತ್ತಿದೆ.

ಸಂಸದ ಪ್ರಜ್ವಲ್​ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋಗಳು ಇರುವ ಪೆನ್​ಡ್ರೈವ್​ ಕಳೆದ ಕೆಲ ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಹರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದರು. ಮಹಿಳಾ ಆಯೋಗದಲ್ಲಿ ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಕುರಿತು ಕುಲಂಕುಶ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ತನಿಖೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article