ಜೋಶಿ ವಿರುದ್ಧ ಧರ್ಮ ಯುದ್ಧ ಮುಂದುವರೆಸುತ್ತೇನೆ: ದಿಂಗಾಲೇಶ್ವರ ಶ್ರೀ

Ravi Talawar
WhatsApp Group Join Now
Telegram Group Join Now

ಬೆಂಗಳೂರು01: ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ತಮ್ಮ ಧರ್ಮಯುದ್ಧ ಮುಂದುವರೆಸಲು ನಿರ್ಧರಿಸಿರುವ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ, ಬುಧವಾರದಿಂದ ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಸಜ್ಜಾಗಿದ್ದಾರೆ.

ಮೇ 1 ರಿಂದ ಸಾರ್ವಜನಿಕ ಸಭೆ, ಬಹಿರಂಗ ಸಭೆಗಳನ್ನು ಮರಳಿ ಆರಂಭಿಸಲಾಗುವುದು. ನಾವು ಬಡವರು ಮತ್ತು ದೀನದಲಿತ ವರ್ಗಗಳ ಧ್ವನಿಯಿಲ್ಲದ ಜನರ ಧ್ವನಿಯಾಗುತ್ತೇವೆ. ನಗರ ಕ್ಷೇತ್ರಗಳಾದ ಹುಬ್ಬಳ್ಳಿ-ಧಾರವಾಡ ಕೇಂದ್ರ, ಪಶ್ಚಿಮ ಮತ್ತು ಪೂರ್ವ ಮತ್ತು ಗ್ರಾಮೀಣ ಕ್ಷೇತ್ರಗಳಾದ ಶಿಗ್ಗಾಂವ, ಕುಂದಗೋಳ, ಕಲಘಟಗಿ, ನವಲಗುಂದ ಮತ್ತು ಧಾರವಾಡದಲ್ಲಿ ಸಾರ್ವಜನಿಕ ಸಭೆಗಳು ನಡೆಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಅಸಮಾಧಾನಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಕೆಲಸಕ್ಕಾಗಿ ನಾನು ಜೋಶಿಯವರನ್ನು ಸಪರ್ಕಿಸಿದ್ದೆ. ಈ ವೇಳೆ ಅವರು ಏಕೆ ನಿಮಗೆ ಲಿಂಗಾಯತರ ಸಂಪರ್ಕವಿಲ್ಲವೇ? ಎಂದು ವ್ಯಂಗ್ಯವಾಡಿದ್ದರು ಎಂದು ತಿಳಿಸಿದರು.

ರಾಜ್ಯವನ್ನು ಪ್ರತಿನಿಧಿಸುವ ಮೂವರು ಬ್ರಾಹ್ಮಣ (ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ರಾಜೀವ್ ಚಂದ್ರಶೇಖರ್)ರನ್ನು ಕೇಂದ್ರ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ, ಆದರೂ ಸಮುದಾಯವು ಜನಸಂಖ್ಯೆಯ ಶೇಕಡಾ 2.5 ರಷ್ಟಿದೆ. ಇತರೆ ಸಮುದಾಯದ ಸಂಸದರಿಗೆ ಹಿರಿತನವಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಅಧಿಕಾರದ ಲಾಲಸೆಯಲ್ಲಿ ದೀನದಲಿತ ವರ್ಗಗಳು ಒಂದು ಸಣ್ಣ ವಿಭಾಗದಿಂದ ಹೊರಗುಳಿಯುವಂತಾಗಿದೆ. ಹೀಗಾಗಿ ಸಾರ್ವಜನಿಕ ಸಬೆ ನಡೆಸಿ, ಲಿಂಗಾಯತರ ಭೇಟಿ ಮಾಡಿ, ಲಿಂಗಾಯತ ಘನತೆ ಮತ್ತು ಗೌರವವನ್ನು ನೆನಪಿಟ್ಟುಕೊಳ್ಳಬೇಕು ಮತ್ತು ನಿಜವಾದ ಪ್ರತಿನಿಧಿಯನ್ನು ಆರಿಸಬೇಕೆಂದು ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಸ್ವಾಮೀಜಿಗಳ ಆಪ್ತರೊಬ್ಬರು ಮಾತನಾಡಿ, ಶ್ರೀಗಳ ವಿರುದ್ದ ಕೆಲವರು ಮಾನಹಾನಿಕರ ಪ್ರಚಾರ ಮಾಡಲು ಯೋಜನೆ ರೂಪಿಸಿದ್ದರು. ಇದನ್ನು ತಿಳಿದು ಅವರು ನಾಮಪತ್ರ ಹಿಂಪಡೆದುಕೊಂಡರು ಎಂದು ಮಾಹಿತಿ ನೀಡಿದ್ದಾರೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಲಿಂಗಾಯತ ಗೌರವ ಮತ್ತು ಘನತೆ ಉಳಿಸಲು ಸ್ವಾಮೀಜಿ ಹೋರಾಡುತ್ತಿದ್ದು, ಅವರ ಪ್ರಯತ್ನಕ್ಕೆ ನಾವು ಬೆಂಬಲ ನೀಡುತ್ತೇವೆ. ಜೋಶಿ ವಿರುದ್ಧ ರಣಕಹಳೆ ಮೊಳಗಿಸಿದರುವುದು ಸಮುದಾಯಕ್ಕಾಗಿ ಆಗಿದೆ. ಹೀಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಜೋಶಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದನ್ನು ವಿರೋಧಿಸಿದ ಸ್ವಾಮೀಜಿ, ”ನಿಜವಾಗಿಯೂ ಎಲ್ಲ ಭಾಗಗಳ ಪ್ರತಿನಿಧಿಯಾಗಿರುವ ಉತ್ತಮ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಬೇಕು. ಆ ವ್ಯಕ್ತಿ ಲಿಂಗಾಯತ, ದಲಿತ ಅಥವಾ ಹಿಂದುಳಿದ ವರ್ಗದ ಸದಸ್ಯರಾಗಿದರೂ ನಾವು ಬೆಂಬಲ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article