ಅಕ್ರಮ ಮರಳು ದಂಧೆ: ಹಿರಿಯ ಭೂವಿಜ್ಞಾನಿ ಆಶಾ ಹಲ್ಲೆ

Ravi Talawar
WhatsApp Group Join Now
Telegram Group Join Now

ಕಾರವಾರ,25: ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದವರಿಂದ ಹಲ್ಲೆಗೊಳಗಾದ ಹಿರಿಯ ಭೂವಿಜ್ಞಾನಿ ಆಶಾ ಎಂಎಸ್ ಅವರು ಉತ್ತರ ಕನ್ನಡ ಪೊಲೀಸರಿಗೆ ಪತ್ರ ಬರೆದಿದ್ದು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ವಿಜ್ಞಾನಿಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಹೊನ್ನಾವರ ತಾಲೂಕಿನ ಆರೋಳಿ ಗ್ರಾಮಕ್ಕೆ ಬುಧವಾರ ಆಶಾ ಅವರು ಭೇಟಿ ನೀಡಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದರು. ಆದರೆ, 12 ಮಂದಿ ಸ್ಥಳೀಯರ ತಂಡ ಆಕೆಯನ್ನು ತಡೆದು ನಿಂದಿಸಿ ಕೊಲೆ ಬೆದರಿಕೆ ಹಾಕಿದೆ.

ಅಲ್ಲಿಂದ ಹೊನ್ನಾವರಕ್ಕೆ ಹಿಂತಿರುಗಿದ ಅವರು ನೇರವಾಗಿ ಪೊಲೀಸರಿಗೆ ದೂರು ದಾಖಲಿಸಲು ತೆರಳಿದರು. ಹೊನ್ನಾವರದ ತುಂಬೊಳ್ಳಿ ನಿವಾಸಿ ಜಗದೀಶ್ ನಾಯ್ಕ್, ಹೊನ್ನಾವರ ಪಟ್ಟಣದ ಮಂಜು ಶೆಟ್ಟಿ ಮತ್ತು ಮುರಳೀಧರ ಶೆಟ್ಟಿ, ನವೀನ್ ನಾಯ್ಕ್, ಮಹೇಶ್ ನಾಯ್ಕ್, ನಾಗರಾಜ ಮೇಸ್ತ, ಜಾಕಿ ಅಲ್ಮೇಡ, ಸುಬ್ರಹ್ಮಣ್ಯ ನಾಯ್ಕ್, ಪ್ರದೀಪ್ ನಾಯ್ಕ್, ಶೇಖರ್ ಗೌಡ, ವಿಶ್ವನಾಥ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಕುರಿತು ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಮುದಕಿನಿಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ದಾಳಿ ನಡೆಸಿರುವುದಾಗಿ ಆಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾವು ಮರಳು ಲೋಡ್ ಮತ್ತು ಅಕ್ರಮ ಮರಳು ಸಾಗಿಸುವ ವಾಹನಗಳ ದಾರಿಯನ್ನು ಕಂಡುಕೊಂಡಿದ್ದೇವೆ. ಮರಳು ತುಂಬಲು ಬಳಸುತ್ತಿದ್ದ ವಸ್ತಗಳನ್ನು ವಶಪಡಿಸಿಕೊಂಡು ಸ್ಥಳದಿಂದ ತೆರಳುತ್ತಿದ್ದೆವು. ಆ ವೇಳೆ ಆರೋಪಿಗಳು ನಮ್ಮ ವಾಹನಗಳನ್ನು ಹಿಂಬಾಲಿಸಿದರು, ಮೊಳೆಗಳನ್ನು ಎಸೆದು ನಮ್ಮ ವಾಹನವನ್ನು ಪಂಕ್ಚರ್ ಮಾಡ್ದರು. ನಂತರ ನನ್ನನ್ನು ಅವಾಚ್ಯವಾಗಿ ನಿಂದಿಸಿದರು. ಮತ್ತೆ ಬರಬೇಡಿ ಎಂದು ಎಚ್ಚರಿಸಿದರು. ಒಂದು ವೇಳೆ ನಾನು ಮತ್ತೆ ಅಲ್ಲಿಗೆ ಹೋದರೆ, ನನ್ನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸುವ ಬೆದರಿಕೆ ಹಾಕಿದ್ದಾರೆ ಎಂದು ಆಶಾ ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ದೂರಿನ ಮೇರೆಗೆ ಇದೀಗ ಎಲ್ಲಾ 12 ಮಂದಿಯನ್ನು ಬಂಧಿಸಲಾಗಿದೆ. ನಾವು ದಾಳಿ ಮಾಡಲು ಮೈದಾನಕ್ಕೆ ಹೋಗುವಾಗ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು. ಆಶಾ ಮೇಲಿನ ಹಲ್ಲೆಯನ್ನು ಉತ್ತರ ಕನ್ನಡ ಡಿಸಿ, ತೀವ್ರವಾಗಿ ಖಂಡಿಸಿದ್ದು, ಆಕೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದರು.

 

 

WhatsApp Group Join Now
Telegram Group Join Now
Share This Article