ದೇಶದ ಸುರಕ್ಷತೆ ,ಅಭಿವೃದ್ಧಿಗೆ ಪ್ರಧಾನಿ ಮೋದಿ ಅವಶ್ಯಕ: ವಿಶ್ವೇಶ್ವರ ಹೆಗಡೆ ಕಾಗೇರಿ

Ravi Talawar
WhatsApp Group Join Now
Telegram Group Join Now
ಚ.ಕಿತ್ತೂರ,ಏ1: ಪ್ರಸಕ್ತ ನಡೆಯುತ್ತರುವ ಲೋಕಸಭಾ ಚುನಾವಣೆ ವೈಯಕ್ತಿಕ ಚುನಾವಣೆ ಅಲ್ಲ ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಚುನಾವಣೆ ,ದೇಶ ರಕ್ಷಣೆ,ಸಂರಕ್ಷಣೆ, ಅಭಿವೃದ್ಧಿ, ದೇಶ ವರ್ಚಸ್ಸು ಇಮ್ಮಡಿಗೊಳಿಸುವ ಚುನಾವಣೆ ನರೇಂದ್ರ ಮೋದಿ ಅವರ ಕೈ ಬಲಪಡಿಸಿ 3 ನೇ ಭಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ನಮ್ಮೆಲ್ಲರ ಆಶಯದ ಚುನಾವಣೆ ಎಂದು ಕೆನರಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
 ಅವರು ಸೋಮವಾರದಂದು ಚ.ಕಿತ್ತೂರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣಾ ಪ್ರಯುಕ್ತ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾನು 3 ಬಾರಿ ಶಿರಸಿ ಶಾಸಕನಾಗಿ ಮೂರು ಬಾರಿ ಕುಮಟಾ ಶಾಸಕನಾಗಿ,ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ,ಶಿಕ್ಷಣ ಸಚಿವನಾಗಿ,ವಿಧಾನ ಸಭಾ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದೇನೆ. ಹತ್ತು ವರ್ಷದ ಆಡಳಿತಕ್ಕೆ ಜನ ಮೆಚ್ಚಿ ಬಿಜೆಪಿ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದು 3 ನೇ ಬಾರಿಗೆ ಕೆನರಾ ಕ್ಷೇತ್ರದಲ್ಲಿ ಕಮಲ ಹೆಚ್ಚಿನ ಮತಗಳಿಂದ ಅರಳಿ ದೇಶಕ್ಕೆ ಪ್ರಧಾನಿ ಮೋದಿ ಅಧಿಕಾರ ವಹಿಹಿಕೊಳ್ಳುವದು ನಿಮ್ಮಂಥ ಉತ್ಸಾಹಿ ಕಾರ್ಯಕರ್ತರ ಕಣ್ಣಲ್ಲಿ ಕಾಣಿಸುತ್ತಿದೆ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ 2 ಜೀ,3 ಜೀ,ಕಲ್ಲಿದ್ದಲು,ತಾಜ್ ಹೊಟೇಲ ಬಾಂಬ ಬ್ಲಾಸ್ಟ,ದೇಶದ ಸಾಮರ್ಥ್ಯ ಕುಂಡಿತ, ಹೆಚ್ಚಾಗಿ ಪಾಕಿಸ್ತಾನ ಜೈಕಾರ,ಅಭಿವೃದ್ಧಿಗೆ ಹಿನ್ನಡೆ ತಂದ ಸರ್ಕಾರವಾಗಿ ಹಿಂದಿನ ಕಾಂಗ್ರೆಸ್ ಕಾರ್ಯ ನಿರ್ವಹಿಸಿದ್ದು ,ಹಿಂದೂ ವಿರೋಧಿ ಧೋರಣೆ,ಇತ್ತೀಚಿನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ನೂರಾರು ಕೋಟಿ ಐಟಿ ಹಗರಣ ಮಾರಕವಾಗಿದ್ದು,ಪಾಕಿಸ್ತಾನದ ಜೈ ಅಂದಾಗ ಅಂದಿಲ್ಲ ಎಂದು ವಿಧಾನ ಸಭೆಯಲ್ಲಿ ಸಮರ್ಥನೆ ,ಪ್ರಧಾನಿ ಮೋದಿಜೀಯವರಿಂದ  ಕಿಸಾನ ಸಮ್ಮಾನ 6000/-  ಮತ್ತು ಮಾಜಿ ಸಿ ಎಂ ಯಡಿಯೂರಪ್ಪ ನೀಡುತ್ತಿದ್ದ ರೂ. 4000/- ಮತ್ತು ಬೊಮ್ಮಾಯಿ ಅವರ ರೈತ ವಿದ್ಯಾ ಮಿತ್ರ ಮತ್ತು ಯೋಜನೆಗಳಲ್ಲಿ ರೈತರಿಗೆ ನೀಡುತ್ತಿದ್ದ ರಾಜ್ಯ ಸರ್ಕಾರದ 4000/- ರೂ ಸ್ಥಗಿತಗೊಳಿಸಿರುವದು ರೈತ ವಿರೋಧಿ ಧೋರಣೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ,ಎಂ ವಾಯ್.ಸೋಮಣ್ಣವರ, ಕೆ ಎಂ ಎಪ್ ನಿರ್ದೆಶಕ,ಕಿತ್ತೂರ ಬಿಜೆಪಿ ಮಂಡಳ ಅದ್ಯಕ್ಷ ಬಸವರಾಜ ಪರಗಣ್ಣವರ,ಬಸನಗೌಡ ಸಿದ್ರಾಮನಿ,ಚನ್ನಮ್ಮನ ಕಿತ್ತೂರ ಭಾಗದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article