ಪ್ರತಾಪ್‌ನ’ಡ್ರೋನ್’ಇನ್ಮೇಲೆ ಹಾರುವುದಿಲ್ಲ: ಡಾ.ಪ್ರಯಾಗ್ ಎಚ್ ಎಸ್

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಮಾ29: `ಗ್ ಬಾಸ್` ಶೋದಲ್ಲಿ ಬಿಗ್ ಬಾಸ್ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್ ಎಚ್ ಎಸ್ ಮೇಲೆ ಆರೋಪ ಮಾಡಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿ ನೋಟಿಸ್ ಕಳುಹಿಸಿದ್ದರು ಪ್ರಯಾಗ್. ಇದಾದ ಬಳಿಕ ಲೈಸೆನ್ಸ್‌ ಪಡೆಯದೇ ಡ್ರೋನ್‌ ಮಾಡುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ವಂಚಿಸುತ್ತಿದ್ದಾರೆ ಎಂದು ಕಳೆದ ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ಪ್ರಯಾಗ್ ಹಾಗೂ ತಂಡ ದೂರು ದಾಖಲಿಸಿತ್ತು. ಇದೀಗ ಡ್ರೋನ್ ಪ್ರತಾಪ್ ಕಳ್ಳಾಟವನ್ನು ಬಟಾಬಯಲು ಮಾಡಿದ್ದಾರೆ ಪ್ರಯಾಗ್. ಡ್ರೋನ್ ಪ್ರತಾಪ್‌ಗೆ ಡ್ರೋನ್, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಪ್ರಯಾಗ್ ತಂಡ ಮಾಹಿತಿ ಹಂಚಿಕೊಂಡಿದೆ.

ಡ್ರೋನ್ ಪ್ರತಾಪ್ ವಿರುದ್ಧ.ಆರ್.ನಗರ ಠಾಣೆಯಲ್ಲಿ ಪ್ರಯಾಗ್ ಹಾಗೂ ತಂಡ ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ಆರ್ ವಂಚಿಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಪ್ರತಾಪ್ ಅವರ `ಡ್ರೋನಾರ್ಕ್ ಏರೋಸ್ಪೇಸ್ ಖಾಸಗಿ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಪಡೆದಿದೆ. ಜೊತೆಗೆ ಹೆಸರು ಸಹ ಇಲ್ಲ ಎಂದು ಈ ಮುಂಚೆಯೇ ಡಿಜಿಸಿಎ ಅಧಿಕೃತ ವೆಬ್‌ಸೈಟ್‌ನಿಂದ ಸ್ಪಷ್ಟವಾಗಿತ್ತು. ಡ್ರೋನ್ ಪ್ರತಾಪ್‌ಗೆ ಡ್ರೋನ್ ಲೈಸೆನ್ಸ್ ಇದೆಯಾ ಎಂದು ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿದ್ದರು ಪ್ರಯಾಗ್. ಜೊತೆಗೆ ಡಿಜಿಸಿಎ(ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್)ಗೆ ಆರ್‌ಟಿಐನಲ್ಲಿ ಮಾಹಿತಿ ಕೋರಲಾಗಿದೆ.

ಇದೀಗ ಪ್ರತಾಪ್‌ಗೆ ಡ್ರೋನ್ ಯಾವುದೇ, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಪ್ರಯಾಗ್ ರೈಟ್ ಟೂ ಇನ್ಫಾರ್ಮೇಶನ್ (ಆರ್‌ಟಿಐ) ಮೂಲಕ ಮಾಹಿತಿ ಪಡೆದಿದೆ. ಡ್ರೋನ್ ಪ್ರತಾಪ್‌ಗೆ ಯಾವುದೇ ಪರವಾನಗಿ ಇಲ್ಲ ಎಂದು ಆರ್‌ಟಿಐ ಮಾಹಿತಿಯಲ್ಲಿದೆ.

 

 

 

 

 

WhatsApp Group Join Now
Telegram Group Join Now
Share This Article