ಬರ ಪರಿಹಾರ ನೀಡದ ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧ : ಕುರುಬೂರು ಶಾಂತಕುಮಾರ್

Ravi Talawar
WhatsApp Group Join Now
Telegram Group Join Now
ಬೆಳಗಾವಿ,ಏಪ್ರಿಲ್ 10:ರಾಜ್ಯ ರೈತ ಸಂಘಟನೆಗಳ ಒಕ್ಕೂಟ.ರಾಜ್ಯ ಕಬ್ಬು ಬೆಳೆಗಾರ ಸಂಘ ಆಯೋಜಿಸಿದ ಬರಗಾಲದಲ್ಲಿ ಚುನಾವಣೆ- ರೈತರ ದಿಕ್ಸೂಚಿ ಚಿಂತನ ಮಂಥನ. ರೈತ ಸಮಾವೇಶ ಉದ್ಘಾಟಿಸಿ  ಮಾತನಾಡಿದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬರದ ಸಂಕಷ್ಟ ಕಾಲದಲ್ಲಿ ಜಗಳವಾಡುತ್ತಾ ಮನರಂಜನೆ ನಿಡುತ್ತಿದ್ದಾರೆ. ಇದು ರೈತರ ಹೊಟ್ಟೆ ತುಂಬುವುದಿಲ್ಲ ಈ ನಾಟಕ ಬಿಡಿ .ಪರಿಹಾರ ನೀಡಿ. ಇಲ್ಲವೇ ಮತ ಕೇಳಲು ಬರಬೇಡಿ ಎಂದು ರೈತರು ಅಭ್ಯರ್ಥಿಗಳನ್ನ ಊರಿಂದ ಹೊರಗಿಡಿ. ಎಂದು ಕರೆ ನೀಡಿದರು.
ನೀರಿಲ್ಲದೆ ಒಣಗಿರುವ ಕಬ್ಬಿನ ಗಿಡಕ್ಕೆ ತುಂತುರು ನೀರು ಬಿಟ್ಟು ಶೋಕ ಗೀತೆಯೊಂದಿಗೆ  ಬರಗಾಲದ ಸಂಕಷ್ಟ ರೈತರ ದಿಕ್ಸೂಚಿ  ವಿಭಾಗೀಯ ಮಟ್ಟದ ಚಿಂತನ ಮಂಥನ ಕಾರ್ಯಕ್ರಮ ರಾಜ್ಯಾಧ್ಯಕ್ಷ ರೈತರತ್ನ  ಉದ್ಘಾಟಿಸಿದರು.
ರಾಜಕೀಯ ಮುಖಂಡರಿಗೆ ಅಧಿಕಾರದ ಹುಚ್ಚು ರೈತರಿಗೆ ಜೀವನದ ಸಂಕಷ್ಟ ರೈತರ ಬದುಕು ರಕ್ಷಿಸುವವರು ಯಾರು. ಇಂದು ರಾಜಕಾರಣ ಕುಟುಂಬ ರಾಜಕೀಯವಾಗಿ ವ್ಯಾಪಕವಾಗಿ ವ್ಯಾಪಾರವಾಗಿದೆ. ಮತ ನೀಡಿದ ಪ್ರಜೆಗಳು ಸಂಕಷ್ಟ ಪಡುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು
ದೆಹಲಿ ಗಡಿ ರೈತ ಹೋರಾಟದಲ್ಲಿ ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ  ಯುವ ರೈತ  ಶುಭಕರನ್ ಸಿಂಗ್ ಅಸ್ತಿ ಕಳಸಕೆ  ಶ್ರದ್ಧಾಂಜಲಿ ಗೌರವ ಸಲ್ಲಿಸಲಾಯಿತು
ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು
 ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ.  ರಾಜ್ಯದಲ್ಲಿ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗದಂತಾಗಿದೆ ಅಧಿಕಾರಿಗಳು ಚುನಾವಣೆ ಕಾರಣ ಹೇಳಿ ರೈತರನ್ನ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು
ರಾಜಕೀಯ ಪಕ್ಷದ ಮುಖಂಡರು ಅಧಿಕಾರ ಹಿಡಿಯುವ ಹುಚ್ಚಿನಲ್ಲಿ ತೇಲಾಡುತ್ತಿದ್ದಾರೆ ಆದರೆ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ ಬರಗಾಲದ ನೀರಿನ ಸಮಸ್ಯೆಯಿಂದ ರೈತರ ಬೆಳೆಗಳು ಒಣಗುತ್ತಿವೆ ಕೊಳವೆ ಬಾವಿಗಳು ಹಿಂಗುತ್ತಿವೆ. ಇದು ರಾಜಕೀಯ ಪಕ್ಷಗಳಿಗೆ ಕಾಣುತ್ತಿಲ್ಲವೇ .ರೈತರು ಎಚ್ಚೆತ್ತುಕೊಂಡು  ಹಳ್ಳಿಗಳಲ್ಲಿ ಗುಡಿಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ ಕಟ್ಟೆ ಹೂಳೆತುವ ಮೂಲಕ ಪುನರ್ಜೀವನ ಹಾಗೂ ಹೊಸದಾಗಿ ನಿರ್ಮಿಸುವ ಕೆಲಸದಲ್ಲಿ ರೈತರು ಶ್ರದ್ದೆ ವಹಿಸಿದ್ದರೆ ಮುಂದಿನ ವರ್ಷಗಳಲ್ಲಿ ಕೊಳವೆ ಬಾವಿಗಳು ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದ ಎಂದರು
ಇಂದಿನ  ರಾಜಕಾರಣಿಗಳಿಗೆ ಇದೆಲ್ಲ ಕಾಣುವುದಿಲ ಅವರಿಗೆ ಬೇಕಾಗಿಲ್ಲ  ಕೇಂದ್ರ .ರಾಜ್ಯ ಸರ್ಕಾರಗಳು. ರೈತರ ಪಾಲಿಗೆ ಮರಳುವಾಡಿನ ಓಯಸ್ಸಿಸ್ ಇದ್ದಂತೆ ಎಂಬುದನ್ನು ಅರಿತುಕೊಳ್ಳಬೇಕು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ.  ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು 5 ಕೋಟಿ 80 ಲಕ್ಷ ಕಬ್ಬು ನುರಿಸಿ ಸಕ್ಕರೆ ಕಾರ್ಖಾನೆಗಳು ಸುಮಾರು 2600ಕೋಟಿ ಕಬ್ಬಿನ ಹಣವನ್ನು  ರೈತರಿಗೆ ಪಾವತಿಸಿಲ್ಲ ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರು ಕೂಡಲೇ ಕಾನೂನು ಕ್ರಮ ಕೈಗೊಂಡು ಶೇಕಡ 15 ಬಡ್ಡಿ ಸೇರಿಸಿ ಹಣ ಕೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು
ಕಳೆದ ವಾರ ಬಳ್ಳಾರಿ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿ ಮುಂದೆ ರೈತ ಸಂಘದ ಹೋರಾಟದ ಹಿನ್ನೆಲೆಯಲ್ಲಿ ಗ್ರಾಮೀಣ ಬ್ಯಾಂಕುಗಳ ಸಾಲ ಪಡೆದ ರೈತರ ಮೇಲೆ ನ್ಯಾಯಾಲಯದಲ್ಲಿ ಹೂಡಿಕೆ ಮಾಡಿದ ದಾವೆಗಳನ್ನು ವಾಪಸ್ ಪಡೆದು ಓ ಟಿ ಎಸ್ ಯೋಜನೆಯಲ್ಲೇ ಸಾಲ ತೀರುವಳಿ ಮಾಡಿಕೊಳ್ಳಲು ಗ್ರಾಮೀಣ ಬ್ಯಾಂಕಿನ ಮುಖ್ಯಸ್ಥರು ಒಪ್ಪಿದ್ದಾರೆ. ಇದರ ಅನುಕೂಲ ಸಾಲ ಮಾಡಿರುವ ರೈತರು ಮಾಡಿಕೊಳ್ಳಬಹುದು
ಕೊಳವೆ ಬಾವಿಗಳಲ್ಲಿ ನೀರು ಹಿಂಗಿ ಹೋಗಿದೆ ಕಬ್ಬಿನ ಬೆಳೆ ಒಣಗುತ್ತಿದೆ ಇಂಥಹ ರೈತರನ್ನ ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲಿನರಾಗಿದ್ದಾರೆ. ರೈತರ ಸಂಕಷ್ಟ ಅರಿತುಕೊಳ್ಳಲಿ ಎಂದು ಅಧಿಕಾರಿಗಳನ್ನು ಎಚ್ಚರಿಸಲು ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ ಎಂದರು
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪಾ ಪೂಜಾರಿ  ಮಾತನಾಡಿ ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯ ಮೇಲೆ ಗೋಲಿಬಾರ್ ಮಾಡುತ್ತದೆ ರೈತರನ್ನು ಕೊಲ್ಲುತ್ತದೆ ಎಮ್ ಎಸ್ ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿ ಹುಷಿಗೊಳಿಸಿದ್ದೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ ಹುಷಿಗೂಳಿಸಿದೆ. ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ. ಸಂಕಷ್ಟದಲ್ಲಿರುವ ದೇಶದ ರೈತರ ಸಾಲ ಮನ್ನ ಮಾಡದೆ ನಿರ್ಲಕ್ಷತನ ತೋರುತ್ತಿದೆ ಪ್ರವಾಹ ಹಾನಿ ಅತಿವೃಷ್ಟಿ. ಮಳೆಹಾನಿ. ಬರಗಾಲ ನಷ್ಟ ಪರಿಹಾರದ ಬಗ್ಗೆ ಯಾವುದೇ ಗಂಭೀರ ಗಮನ ಹರಿಸುತ್ತಿಲ್ಲ ಈ ರೀತಿಯಲ್ಲಿ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ ಎಂದರು
 ರಾಜ್ಯ ರೈತ ಸಂಘದ ಬಲ್ಲೂರ್ ರವಿಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆ ಕೆರೆಕಟ್ಟೆಗಳ ಹುಳೆತುವ ಕಾರ್ಯ ರೈತರು ಮಾಡಿದರೆ ಕೃಷಿ ಉಳಿಯಲು ಸಾಧ್ಯ ಎಂದು ತಿಳಿಸಿದರು
ಇಂದಿನ.ಸಭೆಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ. ಎಸ್ ಬಿ ಸಿದ್ನಾಳ್. ಧಾರವಾಡ ಜಿಲ್ಲೆಯ ಮಹೇಶ್ ಬೆಳಗಾವ್ಕರ್. ಪ್ರಧಾನ ಕಾರ್ಯದರ್ಶಿ ಪರಶುರಾಮ್ಎತ್ತಿನಗುಡ್ಡ. ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ್ ಭೂಬಾಟಿ. ಶಂಕರ್ ಕಾಜಗಾರ್.  ಬಾಗಲಕೋಟೆ ಅಧ್ಯಕ್ಷ ಹಣಮಂತ ಮುಗದುಮ್. ಕಲ್ಲಪ್ಪ ಬಿರಾದಾರ . ಹತ್ತಹಳ್ಳಿ ದೇವರಾಜ್. ನಿಜಗುಣ ಕೆಲಗೇರಿ ಮಾತನಾಡಿದರು
ಇಂದಿನ ಕಾರ್ಯಕ್ರಮ ನಿರೂಪಣೆ ರಾಜ್ಯಉಪಾಧ್ಯಕ್ಷ ಸುರೇಶ್ ಮ ಪಾಟೀಲ್ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮಠ ಸ್ವಾಗತ ಬಯಸಿದರು.
WhatsApp Group Join Now
Telegram Group Join Now
Share This Article