ಸರ್ವಧರ್ಮ ಏಳಿಗೆ, ಅಭಿವೃದ್ಧಿಗೆ ಶ್ರಮಿಸಿದ  ಕಾಂಗ್ರೆಸ್‌ ಗೆ ಮತ ನೀಡಿ: ಪ್ರಿಯಂಕಾ ಜಾರಕಿಹೊಳಿ

Ravi Talawar
WhatsApp Group Join Now
Telegram Group Join Now
ಹುಕ್ಕೇರಿ02: ಕಾಂಗ್ರೆಸ್ ಸದಾ ಬಡವರ ಪರವಾಗಿದ್ದು, ರೈತರ, ಹಿಂದುಳಿದವರ, ಮಹಿಳೆಯರ ಹಾಗೂ ಕಾರ್ಮಿಕರು ಸೇರಿದಂತೆ ಸರ್ವಧರ್ಮವರ  ಏಳಿಗೆ, ಅಭಿವೃದ್ಧಿಗೆ ಶ್ರಮಿಸಿದ  ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು ತಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಲೋಕಸಭೆಯ ಹುಕ್ಕೇರಿ ಮತಕ್ಷೇತ್ರದ ಬೆಲ್ಲದ ಬಾಗೇವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
70 ವರ್ಷದ ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ಎಲ್ಲಾ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ತೆಗೆದುಕೊಂಡು  ಹೋಗಿರುವುದು ಕಾಂಗ್ರೆಸ್‌ ಪಕ್ಷ,  ಸಮ-ಸಮಾಜ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದೆ. ಹೀಗಾಗಿ ನಿಮ್ಮ ಮನೆ ಮಗಳಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ಎಲ್ಲಾ ಮಹಿಳೆಯರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ  25 ಬಿಜೆಪಿ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಇಂತಹ ಸಂಸದರನ್ನು ಆಯ್ಕೆ ಮಾಡಿದರೆ ಮತ್ತೆ ಇದೇ ಸ್ಥಿತಿ ಮುಂದು ವರೆಯುತ್ತದೆ. ಲೋಕಸಭೆಯಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಅವಕಾಶ ಮಾಡಿಕೊಡಬೇಕು.   ಯುವಕರಿಗೆ ಉದ್ಯೋಗ ನೀಡಬೇಕೆಂಬುವುದು ನನ್ನ ಮೊದಲ ಆದ್ಯತೆ ಆಗಿದೆ. ಶೈಕ್ಷಣಿಕ ಸುಧಾರಣೆಗೆ ಶ್ರಮಿಸುತ್ತೆನೆಂದು ಭರವಸೆ ನೀಡಿದರು.
ಕೊವಿಡ್ ಸಂದರ್ಭದಲ್ಲಿ ಘಂಟೆ ಬಾರಿಸಿ, ತಮಟೆ ಬಾರಿಸಿ ಎನ್ನುವ ಪ್ರಧಾನಿ ನಮಗೆ ಬೇಡ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಕೋರಿದರು.
ಮಾಜಿ ಸಚಿವ ಎ.ಬಿ.ಪಾಟೀಲ್ ಮಾತನಾಡಿ, ಮೇ7 ನೇ ತಾರೀಖು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ. ಬೆಲ್ಲದ ಬಾಗೇವಾಡಿ ಜಿಪಂ ವ್ಯಾಪ್ತಿಯ 11 ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬಹುಮತ ದೊರಕಬೇಕು. ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳನ್ನೇ  ಹೇಳುತ್ತಾರೆ. ಸುಳ್ಳು ಹೇಳುವುದನ್ನು ಬಿಟ್ಟರೆ ಮತ್ಯಾವ ಸಾಧನೆಯನ್ನು ಪ್ರಧಾನಿ ಮಾಡಲಿಲ್ಲ.  ಆದರೆ̧   ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಮಹಿಳೆಯರು ಉಚಿತ ಪ್ರಯಾಣ ಮೂಲಕ ಧಾರ್ಮಿಕ ಕ್ಷೇತ್ರಗಳನ್ನು ನೋಡುತ್ತಿದ್ದಾರೆ. ಯುವಕರಿಗೆ ಯುವ ನಿಧಿ ನೀಡಲಾಗುತ್ತಿದೆ. ವಿದ್ಯುತ್ ನೀಡುತ್ತಿದ್ದೇವೆ. ಇಷ್ಟೆಲ್ಲ ಯೋಜನೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ  ನೀಡಬೇಕೆಂದು ಕೋರಿದರು.
ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ್ ಮಾತನಾಡಿ, ಬೆಲ್ಲದ ಬಾಗೇವಾಡಿಯ ವ್ಯಾಪ್ತಿಯ ಮತದಾರರ ಮುಖದಲ್ಲಿ ಖುಷಿ ಅರಳಿದೆ, ಇದು ಪ್ರಿಯಂಕಾ ಜಾರಕಿಹೊಳಿ ಅವರ ಗೆಲುವಿಗೆ ಗ್ರೀನ್‌ ಸಿಗ್ನಲ್‌ ದೊರೆತಂತಾಗಿದೆ. ನಮ್ಮ ಯುವ ನಾಯಕಿ  ಪ್ರಿಯಂಕಾ ಗೆಲುವು ಖಚಿತ.  ಪ್ರಿಯಂಕಾ ಜಾರಕಿಹೊಳಿ ಅವರು ವಿದ್ಯಾವಂತೆ, ಈಗಾಗಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಸಿಕೊಂಡಿದ್ದಾರೆ. ಚಿಕ್ಕೋಡಿ ಭಾಗದ ಸಂಸದೆಯಾದರೆ, ಜಿಲ್ಲೆಗೆ ಹೆಮ್ಮೆಯ ವಿಷಯ. ಚಿಕ್ಕ ವಯಸ್ಸಿನಲ್ಲಿ ಜನಸೇವೆ ಮಾಡಲು ಹೆಜ್ಜೆ ಇಟ್ಟಿರುವ ಪ್ರಿಯಂಕಾಗೆ ಆಶೀರ್ವಾದ ಮಾಡಿ ಲೋಕಸಭೆಗೆ ಕಳಿಸೋಣ ಎಂದು ಕರೆ ನೀಡಿದರು.
ಬೆಲ್ಲದ ಬಾಗೇವಾಡಿ ಬಸ್ ನಿಲ್ದಾಣದಿಂದ ಶ್ರೀ ಜಡಿ ಸಿದ್ದೇಶ್ವರ ದೇವಸ್ಥಾನದವರೆಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಭರ್ಜರಿ  ರೋಡ್ ಶೋ ನಡೆಸಿ, ಮತದಾರರತ್ತ” ಕೈ”  ಬೀಸಿ  ಮತಯಾಚಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಜಯ ರವದಿ, ರವಿ ಕರಾಳೆ, ಕೆಪಿಸಿಸಿ ಉಸ್ತುವಾರಿ ರೇಖಾ ಚಿಕ್ಕೋಡಿ, ಹಣಮಂತ ನಾಯಕ,  ಲಕ್ಷ್ಮಣ ನೂಲಿ, ರಾಜಶೇಖರ ಮೆಣಸಣಿಕಾಯಿ, ಕಲ್ಲಪ್ಪ ಪಾಟೀಲ್, ಗೋಪಾಲ ಕಾಂಬಳೆ, ಕೆಪಿಸಿಸಿ ಸಂಯೋಜಕರು ವಾಸುದೇವ ಮೂರ್ತಿ, ಪಾಂಡು ಮನ್ನಿಕೇರಿ,
ಸುನೀತಾ ಐಹೊಳೆ, ಪಂಕಜ ನೇರ್ಲಿ, ಸೀತಾ ಮಠಪತಿ, ರೇಖಾ ಪಾಟೀಲ್, ಪಾರ್ವತಿ ತಳವಾರ, ಲತಾ ಮೂಡಲಗಿ, ಅನೀತಾ ದೊಡ್ಡಮನಿ ಹಾಗೂ ಇತತರು ಇದ್ದರು.
WhatsApp Group Join Now
Telegram Group Join Now
Share This Article