ಸಾತ್ವಿಕ್‌ನ ಕಾರ್ಯಾಚರಣೆ: ರಮಝಾನ್ ಉಪವಾಸದಲ್ಲಿಯೂ ನೇತೃತ್ವ ವಹಿಸಿದ್ದ ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ

Ravi Talawar
WhatsApp Group Join Now
Telegram Group Join Now

ಇತ್ತೀಚೆಗಷ್ಟೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ವಿಫಲ, ಅಪಾಯಕಾರಿ ತೆರೆದ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್‌ನನ್ನು ಜೀವಂತವಾಗಿ ಮೇಲೆತ್ತುವಲ್ಲಿ ರಕ್ಷಣಾ ತಂಡ ಸಂಪೂರ್ಣ ಯಶಸ್ವಿಯಾಗಿದೆ. ಆಟವಾಡುತ್ತಾ ಹೋಗಿ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಮಗುವನ್ನು ಸತತ ಇಪ್ಪತ್ತು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.


ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಮಗುವನ್ನು ಸತತ ಇಪ್ಪತ್ತು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದನ್ನು ಮುಕ್ತಕಂಠದಿAದ ಶ್ಲಾಘಿಸಲಾಗುತ್ತಿದೆ. ವಿವಿಧ ವಲಯಗಳ ಗಣ್ಯರು ಕೂಡ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಮಗುವನ್ನು ಸತತ ಇಪ್ಪತ್ತು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಗೊಳಿಸಿದ್ದನ್ನು ಶ್ಲಾಘಿಸಿದ್ದಾರೆ.

ಅದರಲ್ಲೂ ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆಯನ್ನು ಸಿಎಂ ಸಿದ್ದರಾಮಯ್ಯ ಅವರೂ ಕೂಡ ಪ್ರಶಂಸಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊAಡಿರುವ ಸಿಎಂ ಸಿದ್ದರಾಮಯ್ಯನವರು “ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ.

ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ – ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತ, ಎಸ್‌ಡಿಆರ್‌ಎಫ್, ಎನ್‌ಡಿ.ಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಕಾರ್ಯಾಚರಣಾ ತಂಡಗಳ ನಿರಂತರ 20 ಗಂಟೆಗಳ ಅಹೋರಾತ್ರಿ ಕಾರ್ಯಾಚರಣೆ ಫಲ ನೀಡಿದ ವಿಷಯವು ಮಾನವನ ಸಾಹಸ ಮತ್ತು ಮಾನವಪ್ರೇಮದ ಹೆಗ್ಗುರುತು ಎಂದೇ ಬಣ್ಣಿಸಬಹುದು.
ಏಕೆಂದರೆ ಒಂದು ಮಗು ತಾಯಿ, ತಂದೆ, ಅಜ್ಜ, ಅಜ್ಜಿಯರ ಜೀವದ ಜೀವವಾಗಿರುತ್ತದೆ. ಅದು ಇಡೀ ಕುಟುಂಬದ ಬೆಳಕಾಗಿರುತ್ತದೆ. ಇಂತಹ ಮಗು ಪ್ರಾಣಾಪಾಯಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾದಾಗ ಅವರುಗಳಿಗೆ ಆದ ಆನಂದಕ್ಕೆ ಪಾರವೇ ಇರುವುದಿಲ್ಲ. ಆದ್ದರಿಂದಲೇ ಈ ಪ್ರಕರಣದ ಇಡೀ ರಕ್ಷಣಾ ಕಾರ್ಯಾಚರಣೆಯು ಮಾನವ ಜೀವನದ ಸಾರಸರ್ವಸ್ವವಾದ ಪ್ರೇಮದ ಸಾಕಾರವಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಅದರಲ್ಲೂ ಇಂಡಿ ಉಪವಿಭಾಗಾಧಿಕಾರಿಯಾದ ಆಬಿದ್ ಗದ್ಯಾಳರವರ ಶ್ರಮವನ್ನು ಯಾರೂ ಎಂದಿಗೂ ಮರೆಯುವಂತಿಲ್ಲ. ಏಕೆಂದರೆ ಇವರು ಈ ವರ್ಷದ ತಮ್ಮ ಧಾರ್ಮಿಕ ಆಚರಣೆಯಾದ ರಮಝಾನ್ ಉಪವಾಸದಲ್ಲಿಯೂ ಇಂತಹದೊAದು ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಸತತ 20 ಘಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿ ಅದು ಮುಗಿಯುವವರೆಗೂ ಸ್ಥಳ ಬಿಟ್ಟು ಕದಲದೆ ಮೇಲುಸ್ತುವಾರಿ ನಡೆಸಿದ್ದು ನಿಜಕ್ಕೂ ಪ್ರಶಂಸಾರ್ಹ, ಅನುಕರಣೀಯ ಹಾಗೂ ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ.


ಇAಡಿ ತಾಲೂಕಿನ ಲಚ್ಯಾಣದಲ್ಲಿ ಮಗು ಕೊಳವೆಬಾವಿಯಲ್ಲಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊರಡಿದ ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ ಅವರು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಿಲ್ಲ, ಈ ಮಧ್ಯೆ ಅವರು ರಮಝಾನ್ ಉಪವಾಸವನ್ನೂ ಬಿಡಲಿಲ್ಲ. ಇಫ್ತಾರ್ ವೇಳೆ ಕೇವಲ ನೀರು ಹಾಗೂ ಒಂದು ಖರ್ಜೂರಾ ತಿಂದು ಉಪವಾಸ ತೊರೆದರು.

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರಿಂದ ಸತತ ಕರೆಗಳು, ಅಧಿಕಾರಿಗಳೊಂದಿಗೆ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಗಳನ್ನು ನಿಭಾಯಿಸಿದರು. ಸಹರಿ ವೇಳೆಯೂ (ಉಪವಾಸ ಆಚರಣೆಗೆ ಅಣಿಯಾಗುವ ಹೊತ್ತು) ಸ್ಥಳ ಬಿಟ್ಟು ಕದಲದ ಅವರು ಅಲ್ಲಿಯೇ ಚಹಾ, ಎರಡು ಬಿಸ್ಕಿಟ್ ಸೇವನೆ ಮಾಡಿ ಮತ್ತೆ ಉಪವಾಸ ಆಚರಿಸಿದರು. ಇತರರಿಗೂ ಮಾದರಿಯಾದರು.

ಇಂಡಿ ಉಪವಿಭಾಗಾಧಿಕಾರಿಯಾದ ಆಬಿದ್ ಗದ್ಯಾಳ ಅವರ ಈ ನಡೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇವರ ಈ ನಡೆಯು ಇತರರಿಗೂ ಮಾದರಿಯಾಗಲಿ, ಇಂತಹ ಅಧಿಕಾರಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎಂದು ಅನೇಕರು ಆಶಿಸಿದ್ದಾರೆ.
ಧಾರ್ಮಿಕ ಆಚರಣೆಗಳನ್ನು, ಸಂಪ್ರದಾಯಗಳನ್ನು, ಧರ್ಮವನ್ನು ಕೊನೆಗೆ ದೇವರನ್ನೂ ತಮ್ಮ ರಾಜಕೀಯ ಲಾಭಕ್ಕಾಗಿ ತುಂಬಾ ಅಪಾಯಕಾರಿಯಾದ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಇಂದಿನ ದಿನಮಾನದ ವಿಷಪೂರಿತ ದ್ವೇಷಮಯ ವಾತಾವರಣದ ನಡುವೆ ಸದ್ದುಗದ್ದಲವಿಲ್ಲದೆ ತಮ್ಮ ಕಾರ್ಯನಿಷ್ಠೆಯನ್ನು ನಿರ್ವಂಚನೆಯಿAದ ಹಾಗೂ ಮಾನವೀಯ ಅಂತಃಕರಣಪೂರಿತವಾಗಿ ಕೈಗೊಳ್ಳುವುದು ಮಾನವನ ಮನಸ್ಸಿನ ಉದಾತ್ತತೆಯ ದ್ಯೋತಕವಾಗಿದೆ.

ಇದಕ್ಕೆ ಇಂಡಿ ಉಪವಿಭಾಗಾಧಿಕಾರಿಯಾದ ಆಬಿದ್ ಗದ್ಯಾಳ ಅವರು ಅಪ್ಪಟ ಸಾಕ್ಷಿಯಾಗಿದ್ದಾರೆ. ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ನಿಟ್ಟಿನಲ್ಲಿ ಇಂತಹವರ ಪಾತ್ರ ನಿಜಕ್ಕೂ ಅತ್ಯಂತ ಹಿರಿದಾಗಿರುತ್ತದೆ.

ಇಂತಹ ಸಂದರ್ಭದಲ್ಲಿಯೇ ಸಮತೆ-ಮಮತೆಗಳ ನಾಡಿನ ಕನಸು ಕಾಣುವ (ನನ್ನಂತಹ) ಅನೇಕರಿಗೆ ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಒಂದು ಸುಂದರ ಕವಿತೆಯ “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಅರ್ಥಪೂರ್ಣ ಸಾಲುಗಳು ಮನಸ್ಸಿನೊಳಗೆ ಗುನುಗುಡುತ್ತವೆ. ಅದು ಅಕ್ಷರಶಃ ನಿಜವೆನಿಸುತ್ತದೆ. ಅಲ್ಲವೇ…

– ಮಂಜುನಾಥ.ಎಸ್. ಕಟ್ಟಿಮನಿ
ಹವ್ಯಾಸಿ ಪತ್ರಕರ್ತ ಹಾಗೂ ಲೇಖಕ
ವಿಜಯಪುರ

WhatsApp Group Join Now
Telegram Group Join Now
Share This Article