ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಮೂಡಲಗಿ ವಲಯದಲ್ಲಿ ಹೊಸ ಸಂಘಗಳ  ಉದ್ಘಾಟನೆ

Ravi Talawar
WhatsApp Group Join Now
Telegram Group Join Now

ಹಳ್ಳೂರ,ಏ.06: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ವಲಯದ ನಲ್ಲಾನಟ್ಟಿ ಗ್ರಾಮದಲ್ಲಿ 5 ಮೆಳವಂಕಿ ಗ್ರಾಮದಲ್ಲಿ 5 ಹೊಸ ಸಂಘಗಳ  ಉದ್ಘಾಟನೆ ಯನ್ನು ಗೌರವಾನ್ವಿತ  ಅಥಣಿ ಜಿಲ್ಲಾ ನಿರ್ದೇಶಕರಾದ ನಾಗರತ್ನ  ಹೆಗಡೆ ಹಾಗೂ ತಾಲೂಕಿನ  ಯೋಜನಾಧಿಕಾರಿಗಳಾದ ರಾಜು ನಾಯ್ಕ ಅವರು ನೆರವೇರಿಸಿದರು.

ನಾಗರತ್ನ ಹೆಗಡೆ ಅವರು  ಹೊಸ ಸಂಘ ಉದ್ಘಾಟನೆ ಮಾಡಿ ಮಾತನಾಡಿ ಸಂಘದ ಸರ್ವ ಸದಸ್ಯರು ಒಗ್ಗಟ್ಟಾಗಿದ್ದು ಕಂತುಗಳನ್ನು ಸರಿಯಾದ ಸಮಯಕ್ಕೇ ತಕ್ಕಂತೆ ಜಮಾ ಮಾಡಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಎಲ್ಲರೂ ಶ್ರಮಿಸಬೇಕೆಂದರು.

ಮುಂದುವರೆದು ಹೊಸ ಸಂಘದ ಪಾಲುದಾರ ಬಂದುಗಳಿಗೆ ಯೋಜನೆಯ ಪರಿಚಯ, ಪೂಜ್ಯ ಕಾವಂದರ ದ್ಯೆಯೋದ್ದೇಶಗಳ ಬಗ್ಗೆ, ಸಂಘಗಳ ನಿರ್ವಹಣೆ-ದಾಖಲಾತಿ, ವಾರದ ಸಭೆ, ಹಣ ಸಂಗ್ರಹಣೆ, ಉಳಿತಾಯ ನಿರ್ವಹಣೆ, ಯೋಜನೆಯ ಪರಿಕಲ್ಪನೆ ಬಗ್ಗೆ ಮಾಹಿತಿ ನೀಡಲಾಯಿತು, ಮತ್ತು ಹೊಸ ಸಂಘಗಳ  ನಿರ್ವಹಣೆಗೆ ದಾಖಲಾತಿ ಹಸ್ತಾಂತರಿಸಲಾಯಿತು.

ಈ ಉದ್ಘಾಟನೆಯಲ್ಲಿ ಊರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ ಪೂಜೇರಿ. ವಲಯದ ಮೇಲ್ವಿಚಾರಕ ಶಿವಕುಮಾರ್ ಪತ್ತಾರ.ಸೇವಾ ಪ್ರತಿನಿಧಿಗಳು ಭೀಮವ್ವ ಹುರಕಣ್ಣವರ.ಯಲ್ಲವ್ವ ಬಾನಿ.ಕರೆಪ್ಪ ಬಾನಿ ಸೇರಿದಂತೆ ಸ್ವ ಸಹಾಯ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು. 

 

WhatsApp Group Join Now
Telegram Group Join Now
Share This Article