ಸಾಹುಕಾರ್ ಕೋಟೆಯಲ್ಲಿ ಹೆಬ್ಬಾಳ್ಕರ್ ಟೆಂಪಲ್ ರನ್: ಮಗನ ಗೆಲುವಿಗೆ ದೇವರ ಮೊರೆ

Ravi Talawar
WhatsApp Group Join Now
Telegram Group Join Now

ಬೆಳಗಾವಿ, ಮಾರ್ಚ್ 28: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಗೆಲುವಿಗಾಗಿ ಬೆಳಗಾವಿ ಕ್ಷೇತ್ರದಾದ್ಯಂತ ನಿರಂತರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪೊಲಿಟಿಕಲ್ ಎದುರಾಳಿ ಸಾಹುಕಾರ್ ಕೋಟೆ ಗೋಕಾಕ ಕ್ಷೇತ್ರದಲ್ಲಿ ಕ್ಯಾಂಪೇನ್ ಆರಂಭಿಸಿರುವ ಹೆಬ್ಬಾಳ್ಕರ್ ನಗರದ ಬಹುತೇಕ ಕಡೆಗಳಲ್ಲಿ ಇರುವ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆದುಕೊಂಡಿದ್ದಾರೆ.

ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಹನುಮಾನ ಹಾಗೂ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ, ದರ್ಶನ ಆಶೀರ್ವಾದ ಪಡೆದರು. ಜೊತೆಗೆ ಮಗನ ಗೆಲ್ಲಿಸಿ ಎಂದು ಮತದಾರರಲ್ಲಿ ಮತಯಾಚಿಸಿದರು.

ನಂತರ ಗೋಕಾಕ ನಗರದ ಶ್ರೀ ಶೂನ್ಯ ಸಂಪಾದನಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article