ಅಥಣಿ,ಏಪ್ರಿಲ್ 16: ತಾಲೂಕು ಆಡಳಿತದ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 133 ನೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಅಂಬೇಡ್ಕರ್ ಸಮೂದಾಯಗಳ ಪ್ರಗತಿ ಸಂಸ್ಥೆ ಧಾರವಾಡ ಉಪನ್ಯಾಸಕ ಲಕ್ಷ್ಮಣ ಬಕಾಯಿ ಅವರು ಮಾತನಾಡಿ ಭಾರತದಲ್ಲಿ ‘ಸಮಾನತೆ ದಿನ’ ಎಂದೂ ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ದಲಿತರು ಮತ್ತು ಕೆಳಜಾತಿಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾ ನಾಯಕರಾಗಿದ್ದಾರೆ.
ಭಾರತದ ಸಂವಿಧಾನವನ್ನು ರಚಿಸಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಬರೆದಿರುವ ಸಂವಿಧಾನ ಇಂದಿಗೂ ವಿಶ್ವಕ್ಕೆ ಮಾದರಿ ಮಹಾ ಗ್ರಂಥವಾಗಿದೆ. ಇಂದು ನಮ್ಮ ರಾಷ್ಟ್ರದ ಅಡಿಪಾಯವಾಗಿರುವ ಸಂವಿಧಾನವನ್ನು ಅವರು ಬಹುತೇಕ ಏಕಾಂಗಿಯಾಗಿ ರಚಿಸಿದ್ದಾರೆ. ಆದರೆ ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಮತ್ತು ಸಮಾಜದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನಕ್ಕಾಗಿ ಹೋರಾಡಿದರು. ನಾವು ಒಬ್ಬರನ್ನೊಬ್ಬರು ಸಮಾನವಾಗಿ ಪರಿಗಣಿಸದ ಹೊರತು ಏಕೀಕೃತ ಮತ್ತು ಪ್ರಗತಿಪರ ಭಾರತದ ಕಲ್ಪನೆಯು ನಿರರ್ಥಕವಾಗಿ ಉಳಿಯುತ್ತದೆ ಎಂದು ಹೇಳಿದರು. ನಂತರ ಮಹಾಲಿಂಗ ಮೈತ್ರಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ ಮಾಡಲಾಯಿತು.
ಈ ವೇಳೆ ಅಥಣಿ ತಹಶೀಲ್ದಾರ ವಾಣಿ ಯು, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ತಾಲೂಕು ವೈದ್ಯಾಧಿಕಾರಿ ಡಾ, ಬಸನಗೌಡ ಕಾಗೆ, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶ್ರೀಕಾಂತ ಮಾಕಾಣಿ, ಸಿಡಿಪಿಓ ರೇಣುಕಾ ಹೊಸಮನಿ, ಪಶುವೈದ್ಯಾಕಾರಿ ಕಾಂಬಳೆ, ಮುಖಂಡರಾದ ಚಿದಾನಂದ ಸವದಿ, ರಾಮ ಮರಳೆರ, ಮಿತೇಶ ಪಟ್ಟಣ, ಸಿದ್ದಲಿಂಗ ಮಡ್ಡಿ, ಪ್ರಕಾಶ ಪಟ್ಟಣ, ಅಪ್ಪಸಾಹೇಬ ಪಟ್ಟಣ, ಶಶಿ ಬಾಡಗಿ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಶಶಿ ಸಾಳವೆ, ಸುಂಧರ ಸೌದಾಗರ, ಗೌತಮ ಪರಾಂಜಪೆ, ಮಂಜು ನೂಲಿ, ರಾಕೇಶ ಪಟ್ಟಣ, ಅಪು ಘಟಕಾಂಬಳೆ, ಶೇಖರ ಜೀರಗ್ಯಾಳ,  ಸಂದೀಪ್ ಘಟಕಾಂಬಳೆ, ಶಿವು ಜೀರಗ್ಯಾಳ, ಸುಧಾಕರ ಬೆಳ್ಳಕ್ಕಿ, ಸುಕಮಾರ ಕಾಂಬಳೆ,  ಸೇರಿದಂತೆ ಅನೇಕ ಗಣ್ಯರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.
One attachment • Scanned by Gmail