ಬಂಡಾಯ ಶಮನಕ್ಕೆ ಯಡಿಯೂರಪ್ಪ ಸಂಧಾನ ಯಾತ್ರೆ : ಅಸಮಾಧಾನ ಮರೆತು ಶೆಟ್ಟರ್‌ಗೆ ಬೆಂಬಲ ನೀಡಲು ಬಿಎಸ್ ವೈ ಸೂಚನೆ

Hasiru Kranti
WhatsApp Group Join Now
Telegram Group Join Now

ಬೆಳಗಾವಿ : ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ಕೇಳಿಬಂದಿದೆ. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂಡಾಯ ಶಮನಕ್ಕೆ ಸಂಧಾನ ಯಾತ್ರೆ ಕೈಗೊಂಡಿದ್ದಾರೆ. ಕೊಪ್ಪಳ, ದಾವಣಗೇರೆ ಬಂಡಾಯ ಶಮನಗೊಳಿಸಿರುವ ಬಿ.ಎಸ್.ವೈ, ನಿನ್ನೆ (ಮಂಗಳವಾರ) ರಾತ್ರಿ ಬೆಳಗಾವಿಗೆ ಆಗಮಿಸಿ ಸ್ಥಳಿಯ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಸಮಾಧಾನ ತಣಿಸಲು ಪಯತ್ನಿಸಿದರು.

ಎರಡು ದಿನಗಳ ಹಿಂದೆ ಕರಡಿ ಸಂಗಣ್ಣ ಅವರೊಂದಿಗೆ ಮಾತನಾಡಿ ಕೊಪ್ಪಳದಲ್ಲಿಯ ಬಂಡಾಯವನ್ನು ಶಮನಗೊಳಿಸಿದ್ದರು, ನಿನ್ನೆ ಮಂಗಳವಾರ ತಾವೇ ಕುದ್ದಾಗಿ ದಾವಣಗೆರೆಗೆ ತೆರಳಿದರು. ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಗಂಟೆಗಟ್ಟಲೇ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಬಣದ ನಡುವೆ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಸ್ಪರ್ಧೆಗೆ ಸ್ಥಳಿಯ ಬಿಜೆಪಿ ಮುಖಂಡರು ವಿರೊಧ ವ್ಯಕ್ತಪಡಿಸಿದ್ದರು. ಆದ್ದರಿಂದು ಬೆಳಗಾವಿಯಿಂದ ಶೆಟ್ಟರ ಅವರಿಗೆ ಟಿಕೆಟ್ ನೀಡಿದ್ದರಿಂದ ಅಸಮಧಾನಗೊಂಡಿದ್ದ ಮುಖಂಡರೊಂದಿಗೆ ಸಭೆ ನಡೆಸಿದ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರು ಅಸಮಾಧಾನಿತರ ಅಹವಾಲು ಆಲಿಸಿ, ಜಗದೀಶ ಶೆಟ್ಟರ ಅವರ ಆಯ್ಕೆಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ.
ಬುಧವಾರದಿಂದ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ವಿದ್ಯುಕ್ತವಾಗಿ ಪ್ರಚಾರ ಆರಂಭಿಸುತ್ತಿರುವುದರ ಹಿನ್ನೆಲೆಯಲ್ಲಿ ಮಂಗಳವಾರ ಯಡಿಯೂರಪ್ಪ ಅವರು ಜಿಲ್ಲೆಯ ಬಿಜೆಪಿ ನಾಯಕರ ಸಭೆ ನಡೆಸಿ ಬಂಡಾಯ ಶಮನಗೊಳಿಸಲು ಯತ್ನಿಸಿದರು.

ಇನ್ನು ಬೆಳಗಾವಿ ಬಿಜೆಪಿಯಲ್ಲಿ ಅಸಮಾಧಾನ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬಿಜೆಪಿಯಲ್ಲಿ ಒಡಕು ಎನ್ನುವ ವಿಚಾರವೇ ಇಲ್ಲ. ಬೆಳಗಾವಿಗೆ ಯಾವುದೇ ಬಿಕ್ಕಟ್ಟು ಶಮನಗೊಳಿಸಲು ಬಂದಿಲ್ಲ. ಇಲ್ಲಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಕರುವ ಆಶಯ ವ್ಯಕ್ತಪಡಿಸಿದ್ದಾರೆ. ಅದರ ಪೂರ್ವ ಸಿದ್ದತೆಗಾಗಿ ಸಭೆ ನಡೆಸಲಾಗುತ್ತಿದೆ ಎಂದು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌ಯಡಿಯೂರಪ್ಪ ಅವರು ಹೇಳಿದರು.
ಜಗದೀಶ್ ಶೆಟ್ಟರ್ ಅವರನ್ನ ನಾವೇ ಬಿಜೆಪಿಗೆ ಕರೆತಂದಿದ್ದೇವೆ. ಅವರ ಪರಿಷತ್ ಅವಧಿ ಇನ್ನೂ ಆರು ವರ್ಷ ಇತ್ತು. ಅವರನ್ನ ಒತ್ತಾಯ ಮಾಡಿ ನಾವೇ ಬಿಜೆಪಿಗೆ ಕರೆತಂದಿದ್ದೇವೆ ಎಂದರು.

ಸಭೆಯಲ್ಲಿ ಸಂಸದೆ ಮಂಗಲಾ ಅಂಗಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ, ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ ಪಾಲ್ಗೊಂಡಿದ್ದು, ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಭೆಗೆ ಗೈರಾಗಿದ್ದರು.

WhatsApp Group Join Now
Telegram Group Join Now
Share This Article