ಕೊಳವೆ ಬಾವಿ ಕುರಿತು ರೈತನ ವಿಶೇಷ ಅಭಿಯಾನ: ತೆರವ ಬೋರವೆಲ್ ಮುಚ್ಚಿದರೆ ರೂ.500 ಪ್ರೋತ್ಸಾಹಧನ!

Ravi Talawar
WhatsApp Group Join Now
Telegram Group Join Now

ಕೊಪ್ಪಳ, ಏಪ್ರಿಲ್​ 05: ರಾಜ್ಯದಲ್ಲಿ ತೆರೆದ ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾಜ್ಯದಲ್ಲಿನ ಕೆಲ ದುರಂತ ಪ್ರಕರಣಗಳು ಮಾಸುವ ಮುನ್ನವೇ, ಗುರುವಾರ (ಏ.04) ರಂದು ವಿಜಯಪುರ  ಜಿಲ್ಲೆಯ ಇಂಡಿ  ತಾಲೂಕಿನ ಲಚ್ಯಾಣದಲ್ಲಿ ಸಾತ್ವಿಕ್  ಅನ್ನೋ ಎರಡು ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿತ್ತು. ಮಗುವನ್ನು ಸುರಕ್ಷಿತವಾಗಿ ಹೊರತರುವಲ್ಲಿ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್​ಎಫ್​ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಇನ್ನು ರಾಜ್ಯದಲ್ಲಿನ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಕೆಲ ಮಕ್ಕಳನ್ನು ಜೀವಂತವಾಗಿ ಹೊರತಗೆಯುವಲ್ಲಿ ಸಫಲವಾದರೆ, ಇನ್ನು ಕೆಲವಡೆ ಮಕ್ಕಳು ತೆರೆದ ಕೊಳವೆ ಬಾವಿಗೆ ಬಿದ್ದು ಪ್ರಾಣ ಬಿಟ್ಟಿವೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮಗಳು ಬಲಿಯಾಗುತ್ತಿವೆ. ಹೀಗಾಗಿ ತೆರದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸವನ್ನು ಮಾಡುವ ಮೂಲಕ ಮಕ್ಕಳ ಜೀವ ಕಾಪಾಡುವ ಕೆಲಸ ಮಾಡಬೇಕಿದೆ. ಹೀಗಾಗಿ ಯಾರಾದರು ತೆರೆದ ಕೊಳವೆ ಬಾವಿ ಮುಚಿದರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡಲು ರೈತನೋರ್ವ ಮುಂದಾಗಿದ್ದಾರೆ.

ಹೌದು ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿಯಾಗಿರುವ ರೈತ ಶಿವಣ್ಣ ಚಳ್ಳಕೇರಿ ಅನ್ನೋರು ರಾಜ್ಯದಲ್ಲಿ ಎಲ್ಲಿಯಾದರೂ ಕೂಡಾ ತೆರೆದ ಕೊಳವೆ ಬಾವಿಗಳು ಕಂಡರೆ, ಅವುಗಳನ್ನು ಮುಚ್ಚಿ. ಯಾರು ಮುಚ್ಚುತ್ತಾರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಒಂದು ಲಕ್ಷ ಹಣವನ್ನು ಬ್ಯಾಂಕ್​ನಲ್ಲಿಡಲು ಮುಂದಾಗಿದ್ದು, ಸಾರ್ವಜನಿಕರು, ತೆರೆದ ಕೊಳವೆ ಬಾವಿ ಮುಚ್ಚಿ, ಅದರ ಪೋಟೋ, ಮತ್ತು ದೃಡಿಕರಣ ಪತ್ರ ನೀಡಿದರೆ ಅವರಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article