ಮತದಾನ ಜಾಗೃತಿಗಾಗಿ ಮಹಿಳೆಯರಿಗೆ ಅರಿಸಿನ-ಕುಂಕುಮ

Ravi Talawar
WhatsApp Group Join Now
Telegram Group Join Now

ಸಂಕೇಶ್ವರ 25: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ವಿಭಿನ್ನ ಜಾಗೃತಿಯಲ್ಲಿ ತೊಡಗಿರುವ ಆಡಳಿತ ವರ್ಗ ಮತದಾನ ಜಾಗೃತಿಗಾಗಿ ಮಹಿಳೆಯರಿಗೆ ಅರಿಸಿನ – ಕುಂಕುಮ ಇಟ್ಟು ಮತದಾನದಿಂದ ದೂರ ಉಳಿಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲಾ ಸ್ವಿಪ್ ಸಮಿತಿ ,ಹುಕ್ಕೇರಿ ತಾಲೂಕು ಸ್ವಿಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ಹೆಬ್ಬಾಳ ಇವರ ಸಹಯೋಗದಲ್ಲಿ ಹೆಬ್ಬಾಳ ಗ್ರಾಮ ಸೇರಿದಂತೆ 14 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹುಕ್ಕೇರಿ ತಾಲೂಕು ಸ್ವಿಪ್ ಸಮಿತಿ ಅಧ್ಯಕ್ಷ  ಟಿ.ಆರ್ ಮಲ್ಲಾಡದ ಮತದಾನ ಪ್ರತಿಯೊಬ್ಬರ ಹಕ್ಕು,ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೊಕಸಭಾ ಚುನಾವಣೆಯ ಮತದಾನ ದಿನದಂದು ಮತದಾನದಿಂದ ದೂರ ಉಳಿಯದಂತೆ ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ ವ್ಯವಸ್ಥಾಪಕರಾದ  ಅವಿನಾಶ ಹೊಳೆಪ್ಪಗೋಳ,ಪಂಚಾಯತ ಅಭಿವೃದ್ಧಿ ಅಧಿಕಾರಿ ಕವಿತಾ ವಾಘೆ,ಮಹಾಂತೇಶ ಬಾದವನಮಠ ಐ.ಇ.ಸಿ. ಸಂಯೋಜಕರು,ಗ್ರಾ. ಪಂ ಸಿಬ್ಬಂದಿ ವರ್ಗ, ಬಿ.ಎಲ್.ಒ.ಗಳು, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article