ಮತದಾನ ಜಾಗೃತಿ ರಂಗೋಲಿ ಸ್ಪರ್ಧೆಯಲ್ಲಿ ರಾಘವೇಂದ್ರ ನೀಲನ್ನವರ ಪ್ರಥಮ ಪ್ರಿಯಾ ಬಸಯ್ಯ ಸಾಲಿಮಠ ದ್ವಿತೀಯ

Hasiru Kranti
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.೧೯., ಪಟ್ಟಣ ಪಂಚಾಯತ ಕಾರ್ಯಾಲಯದ ರನ್ನ ಬೆಳಗಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಧೋಳ ಇವರ ಸಂಯೋಗದಲ್ಲಿ ಮತದಾನ ಜಾಗೃತಿ ಮೂಡಿಸುವ ರಂಗೋಲಿ ಸ್ಪರ್ಧೆಯು ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಬುಧವಾರ ಸಾಯಂಕಾಲ ದಂದು ಜರುಗಿತು.

ಈ ಒಂದು ಸ್ಪರ್ಧೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಮಹಿಳಾ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಸ್ಪರ್ಧಾಳುಗಳಾಗಿ ಭಾಗವಹಿಸಿ ೨೦೨೪ರ ಲೋಕಸಭಾ ಚುನಾವಣೆಯ ನಿಮಿತ್ಯ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲು ಸ್ವೀಪ್ ಹಮ್ಮಿಕೊಂಡ ವಿವಿಧ ಚಟುವಟಿಕೆಗಳಲ್ಲಿ ರಂಗೋಲಿ ಸ್ಪರ್ಧೆ ಪ್ರಮುಖವಾಗಿತ್ತು. ಒಂದು ಗಂಟೆಯ ಕಾಲಾವಧಿಯಲ್ಲಿ ಮತದಾರರನ್ನು ಸೆಳೆಯುವ ಚುನಾವಣಾ ಘೋ?ವಾಕ್ಯಗಳೊಂದಿಗೆ ಮೂಡಿಬಂದ ಅತ್ಯುತ್ತಮ ರಂಗೋಲಿಗಳಲ್ಲಿ ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಬಿಡಿಸಿದ ರಂಗೋಲಿಯೂ ಪ್ರಥಮ ಸ್ಥಾನ ಪಡೆಯಿತು ಮತ್ತು ಕುಮಾರಿ ಪ್ರಿಯಾ ಬಸಯ್ಯ ಸಾಲಿಮಠ ಬಿಡಿಸಿದ ರಂಗೋಲಿಯು ದ್ವಿತೀಯ ಸ್ಥಾನ ಪಡೆಯಿತು ಈ ವಿಜೇತ ಸ್ಪರ್ಧಾಳುಗಳಿಗೆ ಪ್ರಥಮ ದರ್ಜೆ ಸಹಾಯಕರಾದ ಪಿ.ಡಿ.ನಾಗನೂರು ಮತ್ತು ವಸುಲಿ ಸಹಾಯಕರಾದ ಎಸ್. ಬಿ. ಚೌದ್ರಿ ಅವರು ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಿದರು.
ಸಚಿನ್ ಕಾಸರ, ರಾಜು ಮುಗಳಖೋಡ, ಪೂನಂ ಕುಂಬಾರ, ಶಿವು ಬಾವಿಮನಿ, ರಾಜು ಚಮಕೇರಿ, ಅಮಿನಸಾಬ್ ನದಾಫ್ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಗೂ ಸ್ಪರ್ಧಾಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article