ಬಿರು ಬಿಸಿಲಿಗೆ ಒಣಗಿದ ಮಾವು: 400‌ ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿ!

Ravi Talawar
WhatsApp Group Join Now
Telegram Group Join Now

ರಾಮನಗರ, ಮೇ 2: ನದಿಗಳು ಬತ್ತುತ್ತಿವೆ. ಕೆರೆಗಳು ಖಾಲಿ ಆಗಿವೆ. ಕುಡಿಯುವ ನೀರಿಗೂ ಪರಡುವಂತಹ ಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಿರು ಬಿಸಿಲಿಗೆ ಮಾವು ಒಣಗಿ ಕೈಕೊಟ್ಟಿದೆ. 400‌ ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿ ಆಗಿದ್ದು, ಸಾಲ ಮಾಡಿ ಮಾವು ಬೆಳೆದ ರೈತರ ಬಾಳು ದುಃಸ್ಥಿತಿಗೆ ತಲುಪಿದೆ. ರಾಮನಗರ  ಮಾವು ರೈತರ ಸ್ಥಿತಿ ಅರಿಯಲು ಎನ್​ಡಿಆರ್​ಎಫ್​ ತಂಡದಿಂದ ವರದಿ ತಯಾರಿ ಮಾಡಿದ್ದು, ಇಡೀ ಜಿಲ್ಲೆ‌ ಸುತ್ತಾಡಿ ಜಿಲ್ಲಾಡಳಿತ ವರದಿ ಸಿದ್ಧ ಪಡಿಸಿದೆ.

ಒಟ್ಟು 400‌ ಕೋಟಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿದ್ದು, ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ವರದಿ ನೀಡಲಾಗಿದೆ. ಸದ್ಯ ಬೆಳೆ‌ನಾಶದ ಒಟ್ಟು ವರದಿ ಜಿಲ್ಲಾಧಿಕಾರಿ ಕಚೇರಿ ಸೇರಿದೆ. ಬಳಿಕ ರಾಜ್ಯ‌ ಸರಕಾರಕ್ಕೆ ವರದಿ ಒಪ್ಪಿಸಲಾಗುವುದು.

ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್​ ಕೂಡಲೇ‌ ನೆರವಿಗೆ ಬರುವಂತೆ ವಿಮೆ ಕಂಪನಿಗಳಿಗೂ ಜಿಲ್ಲಾಡಳಿತ ಪತ್ರ ಬರೆದಿದ್ದು, ವಿಮೆ ಹಣ ನೀಡಿ ರೈತರಿಗೆ ಆತ್ಮ ಸ್ಥೈರ್ಯ ತುಂಬಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

ಮಾವು ಬೆಳೆದ ಶೇಕಡಾ ನೂರರ ಪೈಕಿ ಕೇವಲ 10 ರಿಂದ 15% ಮಾತ್ರ ಇಳುವರಿ ಸಿಗುತ್ತಿದೆ. ಒಟ್ಟು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇಳುವರಿಗೆ ಬಂದ ಮಾವಿಗೂ ಬೇಡಿಕೆ ಕುಸಿದಿದೆ. ಬಿಸಿಲಿನ ಪರಿಣಾಮ, ಫಂಗಸ್​ನಿಂದ ಮಾವಿನಕಾಯಿ ಕೂಡಿವೆ. ರಾಮನಗರ ರೈತರು ಅತ್ಯಂತ ರುಚಿ ಮತ್ತು ವಿವಿಧ ಪ್ರಕಾರ ಮಾವು ಬೆಳೆಯುತ್ತಿದ್ದರು. ರಾಜ್ಯ ಮಾತ್ರವಲ್ಲದೆ ವಿದೇಶಕ್ಕೂ ರಫ್ತಾಗುತ್ತಿತ್ತು.

ಮುಂಬೈ ವ್ಯಾಪಾರಸ್ಥರು ಲಕ್ಷಾಂತರ ಟನ್ ಆಮದು ಮಾಡಿಕೊಳ್ಳುತ್ತಿದ್ದರು. ಅನೇಕ ಮಲ್ಟಿ ನ್ಯಾಶನಲ್​ ಕಂಪನಿಗಳಿಗೆ ರಾಮನಗರ ಮಾವು ರಫ್ತಾಗುತ್ತಿತ್ತು. ಮಳೆ ಕೈಕೊಟ್ಟ ಹಿನ್ನೆಲೆ ಕಂಡು ಕೇಳರಿಯದ ಬರಗಾಲ ಆವರಿಸಿದೆ.

 

WhatsApp Group Join Now
Telegram Group Join Now
Share This Article