ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರಿಗೆ ಋತುಚಕ್ರ ಅವಧಿಯ ರಜೆ ಜಾರಿಗೆ

Ravi Talawar
WhatsApp Group Join Now
Telegram Group Join Now

ಚಂಡೀಗಢ,ಏ.12: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಹೆರಿಗೆ ಮತ್ತು ಋತುಚಕ್ರ ಅವಧಿಯ ರಜೆಯನ್ನು ಕೇರಳ ಸರ್ಕಾರ ಕಳೆದ ವರ್ಷ ಘೋಷಿಸಿತ್ತು. ಇದೀಗಾ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನದ ರಜೆ ನೀಡಲು ಹೊಸ ನೀತಿಯನ್ನು ಜಾರಿಗೆ ತಂದಿದೆ.

ಈ ನೀತಿಯನ್ನು 2024-25ರ ಶೈಕ್ಷಣಿಕ ಅಧಿವೇಶನದ ಮುಂಬರುವ ಸೆಮಿಸ್ಟರ್‌ಗಳಿಂದ ಜಾರಿಗೊಳಿಸಲಾಗುವುದು ಎಂದು ಪಂಜಾಬ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಮಾಹಿತಿ ನೀಡಿದ್ದಾರೆ.

ರಜೆ ಪಡೆಯಲು ವಿದ್ಯಾರ್ಥಿಗಳು ಇಲಾಖೆ ಕಚೇರಿಯಲ್ಲಿ ನಮೂನೆಯನ್ನು ಭರ್ತಿ ಮಾಡಿ ಅಧ್ಯಕ್ಷರು ಅಥವಾ ನಿರ್ದೇಶಕರಿಂದ ಅನುಮೋದನೆ ಪಡೆಯಬೇಕು. ವಿದ್ಯಾರ್ಥಿಯ ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ರಜೆಯನ್ನು ನೀಡಲಾಗುವುದು.
ಆದರೆ ಮಧ್ಯ-ಸೆಮಿಸ್ಟರ್ ಮತ್ತು ಅಂತಿಮ-ಸೆಮಿಸ್ಟರ್ ಪರೀಕ್ಷೆಗಳು, ಆಂತರಿಕ ಅಥವಾ ಬಾಹ್ಯ ಅಥವಾ ಪ್ರಾಯೋಗಿಕ ಪರೀಕ್ಷೆಗಳು ಸೇರಿದಂತೆ ಯಾವುದೇ ಪರೀಕ್ಷೆಗಳ ಸಮಸ್ಯೆದಲ್ಲಿ ಈ ರಜೆ ನೀಡಲಾಗುವುದಿಲ್ಲ.
WhatsApp Group Join Now
Telegram Group Join Now
Share This Article